ಸ್ಯಾನ್ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ
ಬೆಂಗಳೂರು: ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್ಸ್ಟಾಪ್ ವಿಮಾನ ಜನವರಿ 9ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಹಾರಾಟ ಆರಂಭಿಸಿದೆ. ಆ ಮೂಲಕ, ಜಗತ್ತಿನ ಎರಡು ತಂತ್ರಜ್ಞಾನ ಕೇಂದ್ರಗಳನ್ನು ವಿಮಾನ ಸಂಧಿಸಲಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬ ಅನ್ವರ್ಥನಾಮ ಪಡೆದುಕೊಂಡಿದೆ. ಈ ಎರಡೂ ಟೆಕ್ ಹಬ್ಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಯಾನ ನಾಳೆ (ಜ.11) ಮಧ್ಯಾಹ್ನ 3.45ಕ್ಕೆ ಬೆಂಗಳೂರು ತಲುಪಲಿದೆ. ಇದಷ್ಟೇ ಅಲ್ಲ, […]
ಬೆಂಗಳೂರು: ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್ಸ್ಟಾಪ್ ವಿಮಾನ ಜನವರಿ 9ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಹಾರಾಟ ಆರಂಭಿಸಿದೆ. ಆ ಮೂಲಕ, ಜಗತ್ತಿನ ಎರಡು ತಂತ್ರಜ್ಞಾನ ಕೇಂದ್ರಗಳನ್ನು ವಿಮಾನ ಸಂಧಿಸಲಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬ ಅನ್ವರ್ಥನಾಮ ಪಡೆದುಕೊಂಡಿದೆ. ಈ ಎರಡೂ ಟೆಕ್ ಹಬ್ಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಯಾನ ನಾಳೆ (ಜ.11) ಮಧ್ಯಾಹ್ನ 3.45ಕ್ಕೆ ಬೆಂಗಳೂರು ತಲುಪಲಿದೆ. ಇದಷ್ಟೇ ಅಲ್ಲ, ಈ ಕಠಿಣ ಪ್ರಯಾಣವನ್ನು ಸಂಪೂರ್ಣ ಮಹಿಳಾ ಪೈಲೆಟ್ಗಳೇ ನಿರ್ವಹಿಸುತ್ತಿರುವುದು ವಿಶೇಷ.
ಸ್ಯಾನ್ ಫ್ರಾನ್ಸಿಸ್ಕೋ-ಬೆಂಗಳೂರು ನಡುವಿನ ವಿಮಾನ AI 176 ಶನಿವಾರ ಹಾಗೂ ಮಂಗಳವಾರ ಕಾರ್ಯನಿರ್ವಹಿಸಲಿದೆ. ಬೋಯೆಂಗ್ 777-200LR VT ALG ವಿಮಾನವು 238 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಪ್ರಥಮ ದರ್ಜೆಯ 8, ಬ್ಯುಸಿನೆಸ್ ದರ್ಜೆಯ 35, ಎಕನಮಿ ದರ್ಜೆಯ 195 ಸೀಟುಗಳ ವ್ಯವಸ್ಥೆಯನ್ನು ವಿಮಾನ ಹೊಂದಿದೆ. ಜೊತೆಗೆ, ವಿಮಾನದಲ್ಲಿ 4 ಕಾಕ್ ಪಿಟ್ಗಳು, 12 ಕ್ಯಾಬಿನ್ಗಳು ಇರಲಿವೆ.
ವಿಮಾನವನ್ನು ಮಹಿಳಾ ಪೈಲಟ್ಗಳೇ ಚಲಾಯಿಸುತ್ತಿರುವುದು ಮತ್ತೊಂದು ವಿಶೇಷ. ಕ್ಯಾಪ್ಟನ್ ಜೋಯಾ ಅಗರ್ವಾಲ್ (P1), ಕ್ಯಾಪ್ಟನ್ ಪಾಪಗರಿ ತನ್ಮಯಿ (P1), ಕ್ಯಾಪ್ಟನ್ ಆಕಾಂಶಾ ಸೋನಾವರೆ (P2) ಹಾಗೂ ಕ್ಯಾಪ್ಟನ್ ಶಿವಾನಿ ಮನ್ಹಾಸ್ (P2) ಈ ವಿಮಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಕ್ಯಾಪ್ಟನ್ ಜೋಯಾ ಅಗರ್ವಾಲ್ 8,000 ಗಂಟೆಗಳ ವಿಮಾನ ಹಾರಾಟ ಅವಧಿ ಅನುಭವವನ್ನು ಹೊಂದಿದ್ದಾರೆ. ಹತ್ತು ವರ್ಷಗಳಿಗೂ ಅಧಿಕ, 2,500 ಗಂಟೆಗಳಿಗೂ ಹೆಚ್ಚು ಕಾಲ B-777 ವಿಮಾನ ಚಲಾವಣೆಯಲ್ಲಿ ತೊಡಗಿಸಿಕೊಂಡ ಅನುಭವ ಪಡೆದಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಸುಮಾರು 13,993 ಕಿಲೋ ಮೀಟರ್ಗಳಷ್ಟು ಅಂತರವಿದೆ. ಎರಡೂ ನಗರಗಳು ವಿಶ್ವದ ವಿರುದ್ಧ ದಿಕ್ಕುಗಳಲ್ಲಿದ್ದು, 13.5 ಗಂಟೆಗಳಷ್ಟು ಸಮಯ ವ್ಯತ್ಯಾಸವನ್ನು ಹೊಂದಿದೆ. ಈ ದಾರಿ ಕ್ರಮಿಸಲು, ಗಾಳಿಯ ವೇಗವನ್ನು ಹೊಂದಿಕೊಂಡು, ಸುಮಾರು 17 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಬೇಕಿದೆ.
ವಿಮಾನ ಹಾರಾಟದ ಈ ಮಾರ್ಗವು ಸುರಕ್ಷಿತವಾದ, ವೇಗದ ದಾರಿ ಎಂದು ಗುರುತಿಸಿಕೊಂಡಿದೆ. ಇದು ಜಗತ್ತಿಗೆ ಸುತ್ತುವರಿದು ಹಾರಾಡುವಂಥ ವಿಮಾನವಾಗಲಿದೆ. ಗಾಳಿಯ ವೇಗ, ಮತ್ತಿತರ ಮಾನದಂಡಗಳಿಗೆ ಅನುಗುಣವಾಗಿ, ವಿಮಾನವು ಭೂಮಿಯ ಧ್ರುವ ಮಾರ್ಗದ ಮೂಲಕವೂ ಹಾರಾಟ ನಡೆಸುವ ಸಾಧ್ಯತೆ ಇದೆ. ಹಾಗಾದರೆ, ಪ್ರಯಾಣದ ಅವಧಿ ಮತ್ತಷ್ಟು ಕಡಿಮೆಯಾಗಲಿದೆ. ಆ ಮೂಲಕ, ಇಂಧನ ಉಳಿತಾಯ, ಕಾರ್ಬನ್ ಹೊರಸೂಸುವಿಕೆಯ ಮಿತಗೊಳಿಸಲೂ ಸಹಕಾರಿಯಾಗಲಿದೆ. ಇದು ಭಾರತದಲ್ಲಿ ಕಾರ್ಯನಿರ್ವಹಿಸುವ ಅತಿ ದೂರದ ನಾನ್ಸ್ಟಾಪ್ ವಾಣಿಜ್ಯ ವಿಮಾನ ಹಾರಾಟವಾಗಲಿದೆ.
ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಹಿಳಾ ಪೈಲೆಟ್ ತಂಡವನ್ನು ಶ್ಲಾಘಿಸಿದ್ದಾರೆ. ಜಗತ್ತಿನಲ್ಲೇ ಭಾರತದ ಮಹಿಳೆಯರು ಅತಿ ಎತ್ತರದಲ್ಲಿದ್ದಾರೆ ಎಂದು ಏರ್ ಇಂಡಿಯಾ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದೆ.
Way to go girls!Professional, qualified & confident, the all women cockpit crew takes off from San Francisco to Bengaluru on @airindiain's flight to fly over North Pole.Our Nari Shakti achieves a historic first. pic.twitter.com/X46cs73dQu
— Hardeep Singh Puri (@HardeepSPuri) January 10, 2021
?? We are pleased to welcome @airindiain's first-ever nonstop flights between San Francisco and Bangalore (Bengaluru), India! This new service represents the only nonstop flights between the United States and Bengaluru.
✈️ https://t.co/G5bWCNUank pic.twitter.com/k7XiiWODov
— San Francisco International Airport (SFO) ✈️? (@flySFO) January 9, 2021
ಏರ್ ಇಂಡಿಯಾ ಹರಾಜು ಪ್ರಕ್ರಿಯೆಗೆ EOI ಸಲ್ಲಿಸಿದ ಟಾಟಾ, ಅಮೆರಿಕಾ ಮೂಲದ ಇಂಟರಪ್ಸ್ ಇನ್ಕ್
Published On - 6:41 pm, Sun, 10 January 21