Mann Ki Baat: ಇಂದು ಬೆಳಗ್ಗೆ ಪ್ರಧಾನಿ ಮೋದಿಯವರಿಂದ ಈ ವರ್ಷದ ಕೊನೆಯ ಮನ್ ಕಿ ಬಾತ್

| Updated By: ಸುಷ್ಮಾ ಚಕ್ರೆ

Updated on: Dec 25, 2022 | 9:02 AM

PM Modi: ಪ್ರಧಾನಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್​ನ 96ನೇ ಆವೃತ್ತಿ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.

Mann Ki Baat: ಇಂದು ಬೆಳಗ್ಗೆ ಪ್ರಧಾನಿ ಮೋದಿಯವರಿಂದ ಈ ವರ್ಷದ ಕೊನೆಯ ಮನ್ ಕಿ ಬಾತ್
ನರೇಂದ್ರ ಮೋದಿ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಭಾನುವಾರ) ಬೆಳಗ್ಗೆ 11 ಗಂಟೆಗೆ ಈ ವರ್ಷದ ಕೊನೆಯ ಮನ್ ಕಿ ಬಾತ್ (Mann Ki Baat) ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್​ನ 96ನೇ ಆವೃತ್ತಿ ಇಂದು ಪ್ರಸಾರವಾಗಲಿದೆ. 2022ರ ಕೊನೆಯ ಮನ್ ಕಿ ಬಾತ್​​ನಲ್ಲಿ ಮಾತನಾಡಲು ತಮ್ಮ ವಿಷಯಗಳನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಜನರನ್ನು ಆಹ್ವಾನಿಸಿದ್ದರು. NaMo ಅಪ್ಲಿಕೇಶನ್ ಮತ್ತು MyGov ಅಪ್ಲಿಕೇಶನ್‌ನಲ್ಲಿ ಬರೆಯಲು ಅಥವಾ 1800-11-7800ನಲ್ಲಿ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡಲು ಪಿಎಂ ಮೋದಿ ಜನರನ್ನು ಮನವಿ ಮಾಡಿದ್ದರು. ಆ ಕಾರ್ಯಕ್ರಮ ಇಂದು ಪ್ರಸಾರವಾಗಲಿದೆ.

MyGovನ ಆಮಂತ್ರಣವನ್ನು ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, “2022ರ ಕೊನೆಯ #MannKiBaat ಈ ತಿಂಗಳ 25ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ನಿಮ್ಮ ಇನ್‌ಪುಟ್​ಗಳನ್ನು ಸ್ವೀಕರಿಸಲು ನಾನು ಉತ್ಸುಕನಾಗಿದ್ದೇನೆ. NaMo App, MyGovನಲ್ಲಿ ಬರೆಯಲು ಅಥವಾ 1800-11-7800 ನಂಬರ್​​ಗೆ ಮೆಸೇಜ್ ಮಾಡಿ ಕಳುಹಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ.” ಎಂದು ಮೋದಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಮನ್ ಕಿ ಬಾತ್​​ ಬಗ್ಗೆ ಪುಸ್ತಕ ಪ್ರಕಟಿಸುವುದಾಗಿ ಹಣ ಸಂಗ್ರಹಿಸಿ ವಂಚಿಸಿದ ವ್ಯಕ್ತಿ ವಿರುದ್ಧ ದೂರು ದಾಖಲು

ಇದಕ್ಕೂ ಮುನ್ನ ನವೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ನ 95ನೇ ಆವೃತ್ತಿಯಲ್ಲಿ ನಮ್ಮ ದೇಶವು ವಿಶ್ವದ ಅತ್ಯಂತ ಹಳೆಯ ಸಂಪ್ರದಾಯಗಳಿಗೆ ನೆಲೆಯಾಗಿದೆ ಎಂದು ಹೇಳಿದ್ದರು. ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಪ್ರಚಾರ ಮಾಡಲು ಮತ್ತು ಸಾಧ್ಯವಾದಷ್ಟು ಮುಂದಕ್ಕೆ ಕೊಂಡೊಯ್ಯಲು ನಾವು ಪ್ರಯತ್ನಿಸಬೇಕು ಎಂದಿದ್ದರು.

ಇದನ್ನೂ ಓದಿ: Mann Ki Baat: 93ನೇ ಮನ್ ಕಿ ಬಾತ್; ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಭಾರತೀಯ ಸಂಗೀತವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಜನರ ನಡುವೆ ಹೇಗೆ ಸಾಮೀಪ್ಯವನ್ನು ತರುತ್ತಿದೆ ಎಂಬುದನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದ್ದರು. ಸಂಗೀತವು ದೇಹವನ್ನು ರಿಲ್ಯಾಕ್ಸ್​ ಮಾಡುತ್ತದೆ, ಮನಸ್ಸಿಗೆ ಸಂತೋಷವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ