PM Narendra Modi Rally: ಪ್ರಧಾನಿ ನರೇಂದ್ರ ಮೋದಿ ಮೇಘಾಲಯ ರಾಜ್ಯ ಪ್ರವಾಸ; ತುರಾದಲ್ಲಿ ರೋಡ್​ಶೋ, ಭಾಷಣ

| Updated By: ಆಯೇಷಾ ಬಾನು

Updated on: Feb 24, 2023 | 6:57 AM

ಪಶ್ಚಿಮ ಮೇಘಾಲಯದ ತುರಾದಲ್ಲಿ ಇಂದು ಮೋದಿ ರೋಡ್​ಶೋ ಆಯೋಜಿಸಲಾಗಿದ್ದು ರೋಡ್​ ಶೋ ಬಳಿಕ ಬೃಹತ್ ಸಮಾವೇಶ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.

PM Narendra Modi Rally: ಪ್ರಧಾನಿ ನರೇಂದ್ರ ಮೋದಿ ಮೇಘಾಲಯ ರಾಜ್ಯ ಪ್ರವಾಸ; ತುರಾದಲ್ಲಿ ರೋಡ್​ಶೋ, ಭಾಷಣ
ಪ್ರಧಾನಿ ನರೇಂದ್ರ ಮೋದಿ
Follow us on

ಫೆಬ್ರವರಿ 27ರಂದು ಮೇಘಾಲಯದ 60 ಕ್ಷೇತ್ರಗಳಿಗೆ ಮತದಾನ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಮೇಘಾಲಯ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಪಶ್ಚಿಮ ಮೇಘಾಲಯದ ತುರಾದಲ್ಲಿ ಇಂದು ಮೋದಿ ರೋಡ್​ಶೋ ಆಯೋಜಿಸಲಾಗಿದ್ದು ರೋಡ್​ ಶೋ ಬಳಿಕ ಬೃಹತ್ ಸಮಾವೇಶ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.

ನಗರದ ಹೃದಯಭಾಗದಲ್ಲಿರುವ ಖಿಂದೈಲಾದ್ ಪ್ರದೇಶದಲ್ಲಿ ನಡೆಯುವ ರೋಡ್‌ಶೋನಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ ಮತ್ತು ರಾಜ್ಯದ ಮೂವರು ಸ್ವಾತಂತ್ರ್ಯ ಹೋರಾಟಗಾರರಾದ ಯು ಟಿರೋಟ್ ಸಿಂಗ್, ಯು ಕಿಯಾಂಗ್ ನಂಗ್ಬಾ ಮತ್ತು ಪಾ ಟೋಗನ್ ಸಂಗ್ಮಾ ಅವರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಪುಷ್ಪ ನಮನ ಸಲ್ಲಿಸಿ ನಂತರ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮೇಘಾಲಯದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ತಿಳಿಸಿದರು.

ಇದನ್ನೂ ಓದಿ: ಫೆ.25ರಂದು ದೆಹಲಿ ಕನ್ನಡ ಸಂಘದ ಕಾರ್ಯಕ್ರಮ ಉದ್ಘಾಟಿಸಲಿರುವ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಕೂಡ ಭಾಗಿ

ರೋಡ್‌ಶೋ ನಂತರ ಪ್ರಧಾನಿ ಮೋದಿ ಅವರು ಮಧ್ಯಾಹ್ನ ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ತುರಾಗೆ ತೆರಳಿ, ಅಲ್ಲಿ ಬಿಸಿಸಿಐ ಅನುದಾನಿತ ಅಲೋಟ್ಗ್ರೆ ಕ್ರೀಡಾಂಗಣದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 120 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕೇಂದ್ರದಿಂದ ಅನುದಾನಿತ ಪಿಎ ಸಂಗ್ಮಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಬೇಕಿತ್ತು. ಆದರೆ ಸುರಕ್ಷತಾ ಕ್ರಮ ಉಲ್ಲೇಖಿಸಿ ಕ್ರೀಡಾ ಇಲಾಖೆ ಮೋದಿ ಭಾಷಣಕ್ಕೆ ಅನುಮತಿ ನಿರಾಕರಿಸಿತ್ತು. ದಕ್ಷಿಣ ತುರಾ ಕ್ಷೇತ್ರದಿಂದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬರ್ನಾಡ್ ಮರಕ್ ಅವರು ಸ್ಪರ್ಧೆ ಮಾಡುತ್ತಿದ್ದು ಮೋದಿ ಆಗಮನಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. “ನನ್ನ ಕ್ಷೇತ್ರದಲ್ಲಿ ಪ್ರಧಾನಿ ಪ್ರಚಾರ ಮಾಡಿರುವುದು ಒಂದು ಆಶೀರ್ವಾದವಾಗಿದೆ. ಅವರು ತುರಾಕ್ಕೆ ಬರುತ್ತಿರುವುದು ಪಕ್ಷಕ್ಕೆ ಒಳ್ಳೆಯದನ್ನು ಮಾಡುತ್ತದೆ, ಇದು ಬಿಜೆಪಿ ಈ ಚುನಾವಣೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ. ಗಾರೋ ಹಿಲ್ಸ್‌ನಲ್ಲಿರುವ ಪ್ರತಿಯೊಬ್ಬರೂ ಅವರ ಭೇಟಿಯ ಬಗ್ಗೆ ಉತ್ಸುಕರಾಗಿದ್ದಾರೆ” ಎಂದು ಮಾರಕ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:56 am, Fri, 24 February 23