ಇಂದು 7 ಕೊರೊನಾ ಲಸಿಕೆ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳೊಟ್ಟಿಗೆ ಪ್ರಧಾನಿ ಮೋದಿ ಸಭೆ
ದೇಶದಲ್ಲಿ ಅರ್ಹ ವಯಸ್ಸಿನವರಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಶೀಘ್ರದಲ್ಲೇ ಲಸಿಕೆ ಹಾಕುವ ವಿಧಾನಗಳ ಬಗ್ಗೆ ನರೇಂದ್ರ ಮೋದಿ ಈ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ 100 ಕೋಟಿ ಡೋಸ್ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modiಯವರು ಇಂದು ದೇಶದ ಏಳು ಕೊರೊನಾ ವೈರಸ್ ಲಸಿಕೆ ತಯಾರಕ ಸಂಸ್ಥೆ(Indian Manufacturers of Coronavirus Disease)ಗಳ ಪ್ರತಿನಿಧಿಗಳನ್ನು ಭೇಟಿಯಾಗಲಿದ್ದಾರೆ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ. ರೆಡ್ಡಿ ಲ್ಯಾಬೋರೇಟರೀಸ್, ಜೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಗೆನ್ನೋವಾ ಬಯೋಫಾರ್ಮಾ ಮತ್ತು ಪ್ಯಾನೇಸಿಯ ಬಯೋಟೆಕ್ನ ಪ್ರತಿನಿಧಿಗಳು ಪ್ರಧಾನಿ ಮೋದಿಯವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆರೋಗ್ಯ ಇಲಾಕೆ ರಾಜ್ಯಸಚಿವರಾದ ಭಾರತಿ ಪ್ರವೀಣ್ ಪವಾರ್ ಕೂಡ ಇಂದಿನ ಸಭೆಯಲ್ಲಿ ಉಪಸ್ಥಿತರಿರುವರು.
ಭಾರತದಲ್ಲಿ ಶೇ.31ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ಉಳಿದ ಶೇ.75ಮಂದಿ ಇನ್ನೂ ಒಂದು ಡೋಸ್ ಮಾತ್ರ ಪಡೆದಿದ್ದಾರೆ. ಹಾಗಾಗಿ ದೇಶದಲ್ಲಿ ಅರ್ಹ ವಯಸ್ಸಿನವರಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಶೀಘ್ರದಲ್ಲೇ ಲಸಿಕೆ ಹಾಕುವ ವಿಧಾನಗಳ ಬಗ್ಗೆ ನರೇಂದ್ರ ಮೋದಿ ಈ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಇನ್ನು ದೇಶದಲ್ಲಿ ಶತಕೋಟಿ ಲಸಿಕೆ ನೀಡಿಕೆ ಮೈಲಿಗಲ್ಲನ್ನು ತಲುಪಿದ ಬೆನ್ನಲ್ಲೇ ಶುಕ್ರವಾರ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದುವರೆಗೂ ಯಾರು ಕೊವಿಡ್ 19 ಲಸಿಕೆ ಪಡೆದಿಲ್ಲವೋ ಅವರು ಆದ್ಯತೆಯ ಮೇರೆಗೆ ಹೋಗಿ ಮೊದಲು ಲಸಿಕೆ ಹಾಕಿಸಿಕೊಳ್ಳಿ ಎಂದು ಕರೆ ನೀಡಿದ್ದರು. ಕೊರೊನಾ ವಿರುದ್ಧದ ಹೋರಾಟ ಮುಗಿದಿಲ್ಲ. ಹಾಗಾಗಿ ಶಸ್ತ್ರಾಸ್ತ್ರ ಕೆಳಗೆ ಇಡುವ ಪ್ರಶ್ನೆಯೇ ಇಲ್ಲ. ನಾವೆಲ್ಲ ನಮ್ಮ ಹಬ್ಬಗಳನ್ನು ಅತ್ಯಂತ ಜಾಗರೂಕರಾಗಿ ಆಚರಿಸಬೇಕು. ಮಾಸ್ಕ್ನ್ನು ಯಾವ ಕಾರಣಕ್ಕೂ ಮರೆಯಬಾರದು ಎಂದು ಸಲಹೆ ನೀಡಿದ್ದರು. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಕೊರೊನಾ ಲಸಿಕೆ ನೀಡಿರುವ ಕಾರಣ ಇಡೀ ಜಗತ್ತು ಈಗ ಭಾರತ ಸುರಕ್ಷಿತ ಎಂದುಕೊಳ್ಳುತ್ತದೆ ಎಂದೂ ಹೇಳಿದ್ದರು.
ಇದನ್ನೂ ಓದಿ: Coronavirus cases in India: 24ಗಂಟೆಯಲ್ಲಿ 16,326 ಹೊಸ ಕೊರೊನಾ ಪ್ರಕರಣಗಳು ಪತ್ತೆ; 666 ಮಂದಿ ಸಾವು
Babar Azam: ಹಿಂದಿನ ದಾಖಲೆ ಲೆಕ್ಕಕ್ಕೆ ಬರಲ್ಲ: ಭಾರತ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂದ ಪಾಕಿಸ್ತಾನ ನಾಯಕ ಬಾಬರ್