PM Modi Russia Visit: ಜುಲೈನಲ್ಲಿ ರಷ್ಯಾಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

|

Updated on: Jun 27, 2024 | 11:59 AM

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯು ಯೋಜನೆಯ ಪ್ರಕಾರ ನಡೆದರೆ, ಫೆಬ್ರವರಿ 24, 2022 ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ ನಂತರ ಇದು ಮೊದಲನೆಯ ಭೇಟಿ ಇದಾಗಿದೆ.

PM Modi Russia Visit: ಜುಲೈನಲ್ಲಿ ರಷ್ಯಾಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ
ನರೇಂದ್ರ ಮೋದಿ-ಪುಟಿನ್
Follow us on

ಪ್ರಧಾನಿ ನರೇಂದ್ರ ಮೋದಿ ಜುಲೈ 8,9ರಂದು ರಷ್ಯಾಗೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಧಾನಿ ಮೋದಿಯವರ ರಷ್ಯಾ ಪ್ರವಾಸಕ್ಕೆ ಎರಡೂ ದೇಶಗಳು ಸಿದ್ಧತೆ ಆರಂಭಿಸಿವೆ. ಈ ನಿಟ್ಟಿನಲ್ಲಿ ಭಾರತ ಮತ್ತು ರಷ್ಯಾ ಅಧಿಕಾರಿಗಳು ಪರಸ್ಪರ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪ್ರಧಾನಿ ಮೋದಿ 2019ರ ಸೆಪ್ಟೆಂಬರ್​ನಲ್ಲಿ ರಷ್ಯಾಗೆ ಭೇಟಿ ನೀಡಿದ್ದರು, ಈಗ ಐದು ವರ್ಷಗಳ ಬಳಿಕ ಮತ್ತೆ ರಷ್ಯಾಗೆ ತೆರಳುತ್ತಿದ್ದಾರೆ. ಭಾರತ-ರಷ್ಯಾ ಶೃಂಗಸಭೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರ ರಷ್ಯಾ ಭೇಟಿಯನ್ನು ಯೋಜಿಸಲಾಗಿದೆ.

2022ರ ಫೆಬ್ರವರಿಯಲ್ಲಿ ಉಕ್ರೇನ್​ ಮೇಲೆ ದಾಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಮೋದಿ ರಷ್ಯಾಗೆ ಭೇಟಿ ನೀಡುತ್ತಿದ್ದಾರೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ನೇರವಾಗಿ ಖಂಡಿಸಿಲ್ಲ ಮತ್ತು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಸಮರ್ಥಿಸಿಕೊಂಡಿದೆ.

ಮತ್ತಷ್ಟು ಓದಿ: ಸ್ಯಾಮ್ ಪಿತ್ರೋಡಾ ಬಗ್ಗೆ ಪ್ರಧಾನಿ ಮೋದಿ ನುಡಿದಿದ್ದ ಭವಿಷ್ಯ ನಿಜವಾಯ್ತು

ಮಾರ್ಚ್‌ನಲ್ಲಿ ರಷ್ಯಾ ಪ್ರಧಾನಿ ಮೋದಿಗೆ ದೇಶಕ್ಕೆ ಬರಲು ಮುಕ್ತ ಆಹ್ವಾನವಿದೆ ಎಂದು ಹೇಳಿತ್ತು.
2019 ರಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ಆರ್ಥಿಕ ವೇದಿಕೆಗಾಗಿ ಪ್ರಧಾನಿ ಮೋದಿ ಅವರು ಕೊನೆಯ ಬಾರಿಗೆ ರಷ್ಯಾಕ್ಕೆ ಭೇಟಿ ನೀಡಿದ್ದರು. ಪ್ರಧಾನಿಯವರ ಕೊನೆಯ ಮಾಸ್ಕೋ ಭೇಟಿ 2015 ರಲ್ಲಿ ಆಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ