ಸಂಸತ್ತಿನಿಂದ ರಾಜದಂಡ ತೆರವುಗೊಳಿಸುವಂತೆ ಎಸ್​ಪಿ ಸಂಸದ ಬರೆದ ಪತ್ರಕ್ಕೆ ತಿರುಗೇಟು ಕೊಟ್ಟ ಬಿಜೆಪಿ

ರಾಜದಂಡವನ್ನು ಸಂಸತ್ತಿನಿಂದ ತೆರವುಗೊಳಿಸುವಂತೆ ಕೋರಿ ಸಮಾಜವಾದಿ ಪಕ್ಷದ ಸಂಸದ ಚೌಧರಿ ಬರೆದಿದ್ದ ಪತ್ರಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ.

ಸಂಸತ್ತಿನಿಂದ ರಾಜದಂಡ ತೆರವುಗೊಳಿಸುವಂತೆ ಎಸ್​ಪಿ ಸಂಸದ ಬರೆದ ಪತ್ರಕ್ಕೆ ತಿರುಗೇಟು ಕೊಟ್ಟ ಬಿಜೆಪಿ
ರಾಜದಂಡImage Credit source: Firstpost
Follow us
|

Updated on: Jun 27, 2024 | 12:40 PM

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದರ ಆರ್​ಕೆ ಚೌಧರಿ ಅವರು ಸಂಸತ್ತಿನಿಂದ ರಾಜದಂಡವನ್ನು ತೆರವುಗೊಳಿಸುವಂತೆ ಬರೆದಿದ್ದ ಪತ್ರಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಇದು ರಾಜಪ್ರಭುತ್ವದ ಸಂಕೇತವಾಗಿದ್ದರೆ ಮೊದಲ ಪ್ರಧಾನಿ ನೆಹರು ಅವರು ಏಕೆ ಇದನ್ನು ಒಪ್ಪಿಕೊಂಡರು ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಚೌಧರಿ ಅವರು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ರಾಜದಂಡದ ಮುಂದೆ ತಲೆಬಾಗಲಿಲ್ಲ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಸ್ಥಾಪಿಸಲಾದ ರಾಜದಂಡ, ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರದ ಹಸ್ತಾಂತರವನ್ನು ಸೂಚಿಸುತ್ತದೆ ಎಂದು ಚೌಧರಿ ಹೇಳಿದ್ದರು.

ಮತ್ತಷ್ಟು ಓದಿ: ಐತಿಹಾಸಿಕ ನಾಡು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದ ಸೆಂಗೋಲ್​ ನಂಟು: ವಿರುಪಾಕ್ಷ ದೇವಾಲಯದಲ್ಲಿ ರಾಜದಂಡ ಕಲಾಕೃತಿ

ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್‌ಗೆ ಬರೆದ ಪತ್ರದಲ್ಲಿ, ಆರ್‌ಕೆ ಚೌಧರಿ ಸೆಂಗೋಲ್ ಅನ್ನು ಪ್ರಜಾಪ್ರಭುತ್ವ ಭಾರತದಲ್ಲಿ ರಾಜಪ್ರಭುತ್ವದ ಅನಾಕ್ರೊನಿಸ್ಟಿಕ್ ಸಂಕೇತ ಎಂದು ಕರೆದಿದ್ದಾರೆ. ರಾಜಪ್ರಭುತ್ವವನ್ನು ಕೊನೆಗೊಳಿಸಿದ ನಂತರ ದೇಶವು ದ್ವತಂತ್ರವಾಯಿತು, ಹಾಗಾಗಿ ರಾಜದಂಡದ ಅಗತ್ಯವಿಲ್ಲ, ಸಂವಿಧಾನವನ್ನು ಉಳಿಸಲು ರಾಜದಂಡವನ್ನು ತೆರವುಗೊಳಿಸಬೇಕು, ಅಷ್ಟೇ ಅಲ್ಲ ಆ ಜಾಗದಲ್ಲಿ ಸಂವಿಧಾನದ ದೈತ್ಯ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ವಿನಂತಿಸುತ್ತೇನೆ ಎಂದಿದ್ದರು.

ಆಗಸ್ಟ್ 1947 ರಲ್ಲಿ ಅಧಿಕಾರದ ಹಸ್ತಾಂತರವನ್ನು ಸಂಕೇತಿಸಲು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ನೀಡಲಾದ ವಿಧ್ಯುಕ್ತ ರಾಜದಂಡವನ್ನು (ಸೆಂಗೊಲ್) ಅಲಹಾಬಾದ್ ಮ್ಯೂಸಿಯಂನ ನೆಹರು ಗ್ಯಾಲರಿಯಲ್ಲಿ ಇರಿಸಲಾಗಿತ್ತು ಮತ್ತು ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಲು ದೆಹಲಿಗೆ ತರಲಾಯಿತು. ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಪವಿತ್ರಾ ಗೌಡರ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ