ಅಂತ್ಯಸಂಸ್ಕಾರ ನಡೆದು 52 ದಿನಗಳ ಬಳಿಕ ಬೇರೆ ರಾಜ್ಯದಲ್ಲಿ ಆಕೆಯ ಕಂಡಾಗ..
ಮಹಿಳೆಯ ಅರೆಬೆಂದ ಶವಕ್ಕೆ ಕುಟುಂಬದವರು ಬೆಂಕಿ ಇಟ್ಟು ಅಂತ್ಯಸಂಸ್ಕಾರ ನೆರವೇರಿಸಿದ್ದರು.ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ಅಂಗ್ಸೋಲಿ ಗ್ರಾಮದಲ್ಲಿ ಮಹಿಳೆಯ ಅರ್ಧ ಸುಟ್ಟ ದೇಹ ಪತ್ತೆಯಾಗಿತ್ತು. ಕುಟುಂಬದವರು ತಮ್ಮ ಮನೆಯವಳೇ ಎಂದು ದೇಹಕ್ಕೆ ಅಂತ್ಯಸಂಸ್ಕಾರ ಮಾಡಿದ್ದರು. ಬಳಿಕ ಆಯ್ಕೆ ನೋಯ್ಡಾದಲ್ಲಿ ಪತ್ತೆಯಾಗಿದ್ದಾರೆ.
ಅರೆಬೆಂದ ಶವವೊಂದು ಪತ್ತೆಯಾಗಿದ್ದು, ಊರ ಜನರೆಲ್ಲಾ ಅಲ್ಲಿ ಬಂದು ಸೇರಿದ್ದರು, ಯಾರಿದ್ದಿರಬಹುದು ಎಂದು ಆಲೋಚಿಸುತ್ತಿದ್ದ ಹೊತ್ತಲ್ಲೇ ಕುಟುಂಬವೊಂದು ಇದು ನಮ್ಮ ಮನೆಯವಳದ್ದೇ ಶವ ಎಂದು ಗೋಳಾಡಲು ಶುರು ಮಾಡಿದ್ದರು. ಆಕೆ ನಾಪತ್ತೆಯಾಗಿದ್ದಳು, ಈಗ ಹೀಗೆ ಆಕೆಯನ್ನು ನೋಡುತ್ತೇವೆ ಎಂದುಕೊಂಡಿರಲಿಲ್ಲ ಎಂದು ನೋವು ತೋಡಿಕೊಂಡರು. ಸ್ವಲ್ಪ ಸಮಯದ ಬಳಿಕ ಅಂತ್ಯಕ್ರಿಯೆಯನ್ನೂ ನಡೆಸಲಾಗಿತ್ತು.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ಅಂಗ್ಸೋಲಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಹಾಗೆಯೇ ದಿನ ಕಳೆಯಿತು, 52 ದಿನಗಳ ಬಳಿಕ ಕುಟುಂಬದವರು ನೋಯ್ಡಾಗೆ ಹೋಗಿದ್ದಾಗ ಆಕೆ ಅಲ್ಲಿನ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಳು.
ಈಕೆ ಜೀವಂತವಾಗಿದ್ದಾಳೆ ಹಾಗಾದರೆ ಮೃತಪಟ್ಟ ಮಹಿಳೆ ಯಾರು ಎಂಬುದು ಆತಂಕಕಾರಿ ವಿಷಯವಾಗಿದೆ. ಮೇ 4 ರಂದು ಜಿಲ್ಲೆಯ ಅಂಗ್ಸೋಲಿಯಲ್ಲಿರುವ ರಾಕೇಶ್ ವ್ಯಾಸ್ ಅವರ ಜಮೀನಿನ ಮುಂದೆ ಮಹಿಳೆಯ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು.
ಮತ್ತಷ್ಟು ಓದಿ: Crime News: ಕುಡಿದು ಚಿತ್ರಹಿಂಸೆ ನೀಡುತ್ತಿದ್ದ ಗಂಡನ ಬರ್ಬರ ಹತ್ಯೆ; ಪೊಲೀಸರೆದುರು ತಾನೇ ಶರಣಾದ ಮಹಿಳೆ
ಮೊದಲು ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಸಂತೋಷ್ ಯಾದವ್ ಹೇಳಿದ್ದರು. ಮಹಿಳೆಯ ಬ್ಯಾಂಕ್ ಖಾತೆಯು ಗೋರ್ಮಿಯ ಸುಕಂದ್‌ನಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿತ್ತು. ಜೂನ್ 17 ರಂದು ಸೋದರ ಮಾವ ರಾಜೇಶ್ ಶರ್ಮಾ ಮತ್ತು ಪತಿ ಸುನೀಲ್ ಶರ್ಮಾ ಖಾತೆಯನ್ನು ಮುಚ್ಚಲು ಬ್ಯಾಂಕ್‌ಗೆ ಬಂದಿದ್ದರು.
ಪತಿ ಹೇಳುವಂತೆ ಖಾತೆಯಲ್ಲಿ 2000 ರೂ.ಗಿಂತ ಹೆಚ್ಚು ಹಣ ಇರಬೇಕಾಗಿದ್ದು, ಅದರಲ್ಲಿ ಕೇವಲ 20 ರೂ. ಇತ್ತು, ಪತಿ ಬ್ಯಾಂಕ್‌ನಿಂದ ಖಾತೆ ವಿವರ ತೆಗೆದಾಗ ಎರಡು ದಿನಗಳ ಹಿಂದೆ ಆ ಖಾತೆಯಿಂದ 2600 ರೂ. ವಿತ್ಡ್ರಾ ಮಾಡಿರುವುದು ತಿಳಿದುಬಂದಿದೆ.
ಈ ವಹಿವಾಟಿನ ಮತ್ತೊಂದು ವಿಶೇಷವೆಂದರೆ ಅದರಲ್ಲಿ ಹಿಂಪಡೆದ ಹಣವನ್ನು ಮಥುರಾದ ಎಸ್‌ಬಿಐ ಕಿಯೋಸ್ಕ್ ಸೆಂಟರ್‌ನಿಂದ ಹೆಬ್ಬೆರಳಿನ ಗುರುತು ಬಳಸಿ ಪಡೆಯಲಾಗಿದೆ. ಬ್ಯಾಂಕ್‌ನಿಂದ ಬಂದ ಈ ಮಾಹಿತಿ ನೋಡಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ಅದೇ ಬ್ಯಾಂಕ್ ವಿವರಗಳೊಂದಿಗೆ ಪತಿ ಮೌ ಪೊಲೀಸ್ ಠಾಣೆಗೆ ಹೋಗಿದ್ದರು.
ಮಥುರಾಗೆ ತೆರಳಿ ಕಿಯೋಸ್ಕ್ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಅಂದಿನ ಸಿಸಿಟಿವಿ ದೃಶ್ಯಾವಳಿಗಳು ಕೂಡ ಬೆಳಕಿಗೆ ಬಂದಿದ್ದು, ಇದನ್ನು ನೋಡಿ ಮನೆಯವರು ಹಾಗೂ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ಕಾರಣವೇನೆಂದರೆ ಸಿಸಿಟಿವಿಯಲ್ಲಿದ್ದ ಮಹಿಳೆ ಅದೇ ಮಹಿಳೆಯಾಗಿದ್ದು, ಪೊಲೀಸರ ದೃಢೀಕರಣದ ನಂತರ ಕುಟುಂಬದವರು ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆ ಯುವಕನೊಂದಿಗೆ ಕಾಣಿಸಿಕೊಂಡಿದ್ದಾಳೆ. ಮಹಿಳೆ ಮೊದಲೇ ಸ್ವತಂತ್ರವಾಗಿರಲು ಬಯಸಿದ್ದರು ಎಂಬುದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ