ಸರ್ವಾಧಿಕಾರಿಯ ನಾಶವಾಗಬೇಕು; ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸುನೀತಾ ಕೇಜ್ರಿವಾಲ್ ಆಕ್ರೋಶ

Excise Policy case: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಇದರ ನಡುವೆ, ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಪ್ರತಿಕ್ರಿಯೆಯಾಗಿ ಆಮ್ ಆದ್ಮಿ ಪಕ್ಷ ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಜಂಟಿ ಭಾಷಣವನ್ನು ಬಹಿಷ್ಕರಿಸಿದೆ.

ಸರ್ವಾಧಿಕಾರಿಯ ನಾಶವಾಗಬೇಕು; ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸುನೀತಾ ಕೇಜ್ರಿವಾಲ್ ಆಕ್ರೋಶ
ಸುನೀತಾ ಕೇಜ್ರಿವಾಲ್
Follow us
|

Updated on: Jun 27, 2024 | 3:30 PM

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್  ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಔಪಚಾರಿಕವಾಗಿ ಬಂಧಿಸಿದ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಹಿಂದಿಯಲ್ಲಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಸುನೀತಾ ಕೇಜ್ರಿವಾಲ್ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಮುಸುಕಿನ ದಾಳಿಯನ್ನು ಪ್ರಾರಂಭಿಸಿದ್ದಾರೆ. ಇದನ್ನು ಅವರು ಈ ಹಿಂದೆ ಸರ್ವಾಧಿಕಾರ ಎಂದು ಉಲ್ಲೇಖಿಸಿದ್ದರು. “ಇಲ್ಲಿಯವರೆಗೆ ದೇವರು ಎಲ್ಲರಿಗೂ ಒಳ್ಳೆ ಬುದ್ಧಿಯನ್ನು ನೀಡಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ಆದರೆ, ಈಗ ಸರ್ವಾಧಿಕಾರಿ ನಾಶವಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದು ಸುನೀತಾ ಕೇಜ್ರಿವಾಲ್ ಪೋಸ್ಟ್ ಮಾಡಿದ್ದಾರೆ.

ಬುಧವಾರ ಸಿಬಿಐ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ದೆಹಲಿ ಸಿಎಂ ಪತ್ನಿ ಸುನೀತಾ ಕೇಜ್ರಿವಾಲ್ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಇಡೀ ವ್ಯವಸ್ಥೆಯು ತನ್ನ ಪತಿ ಜೈಲಿನಿಂದ ಹೊರಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಈ ಪರಿಸ್ಥಿತಿಯನ್ನು ‘ಸರ್ವಾಧಿಕಾರ’ ಮತ್ತು ‘ತುರ್ತು ಪರಿಸ್ಥಿತಿ’ಗೆ ಹೋಲಿಸಿದ್ದರು.

ಇದನ್ನೂ ಓದಿ: Arvind Kejriwal: ಸಿಬಿಐನಿಂದ ಕೇಜ್ರಿವಾಲ್ ಬಂಧನ; ಸಕ್ಕರೆ ಮಟ್ಟ ಕಡಿಮೆಯಾಗಿ ಕೋರ್ಟ್​ನಲ್ಲಿ ಸುಸ್ತಾದ ಸಿಎಂ

ಹಿಂದಿಯಲ್ಲಿ ಎಕ್ಸ್‌ನಲ್ಲಿ ಮಾಡಿದ ಮತ್ತೊಂದು ಪೋಸ್ಟ್‌ನಲ್ಲಿ ಸುನೀತಾ ಕೇಜ್ರಿವಾಲ್ ತನ್ನ ಪತಿಗೆ ಜೂನ್ 20ರಂದು ಅಬಕಾರಿ ನೀತಿಗೆ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ನೀಡಲಾಯಿತು. ಆದರೆ, ಇದಕ್ಕೆ ತಡೆಯಾಜ್ಞೆ ಸಿಕ್ಕಿತು. ಅದಾದ ಮರುದಿನವೇ ಸಿಬಿಐ ಕೇಜ್ರಿವಾಲ್ ಅವರನ್ನು ಆರೋಪಿಯನ್ನಾಗಿ ಮಾಡಿದೆ. ಇಂದು ಅವರನ್ನು ಬಂಧಿಸಲಾಯಿತು. ಇಡೀ ವ್ಯವಸ್ಥೆಯು ಜೈಲಿನಿಂದ ಹೊರಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಕಾನೂನಲ್ಲ. ಇದು ಸರ್ವಾಧಿಕಾರ, ಇದು ತುರ್ತುಸ್ಥಿತಿ” ಎಂದು ಅವರು ಬರೆದಿದ್ದಾರೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಬುಧವಾರ ಕೇಜ್ರಿವಾಲ್ ಅವರನ್ನು ಮೂರು ದಿನಗಳ ಸಿಬಿಐ ವಶಕ್ಕೆ ನೀಡಿದೆ. ರಜಾಕಾಲದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಎರಡೂ ಕಡೆಯ ಎಲ್ಲಾ ಸಲ್ಲಿಕೆಗಳನ್ನು ಗಮನಿಸಿದ ನಂತರ, ಅರವಿಂದ್ ಕೇಜ್ರಿವಾಲ್ ಅವರನ್ನು ಜೂನ್ 29ರವರೆಗೆ ಸಿಬಿಐ ರಿಮಾಂಡ್‌ನಲ್ಲಿ ಇರಿಸಲು ಅನುಮತಿ ನೀಡಿದ್ದಾರೆ.

ಇದನ್ನೂ ಓದಿ: Arvind Kejriwal: ಭ್ರಷ್ಟಾಚಾರ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಮೂರು ದಿನ ಸಿಬಿಐ ಕಸ್ಟಡಿಗೆ

ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಪ್ರತಿಕ್ರಿಯೆಯಾಗಿ, ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್, “ನಿನ್ನೆ ಕೇಜ್ರಿವಾಲ್ ಅವರನ್ನು ಬಂಧಿಸಿದ ರೀತಿಯಲ್ಲಿ ನಾವು ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸುವುದು ಮಾತ್ರವಲ್ಲದೆ ಪ್ರತಿಭಟನೆಯನ್ನೂ ಮಾಡುತ್ತೇವೆ” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ