Global Investors Summit 2023: ಇಂದು ಯುಪಿಯಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ಯನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿ, ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ರನ್ನು ಉದ್ಘಾಟಿಸಲಿದ್ದಾರೆ
ಲಕನೌ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಫೆ.10) ಉತ್ತರ ಪ್ರದೇಶಕ್ಕೆ (Uttar Pradesh) ಭೇಟಿ ನೀಡಿ, ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ರನ್ನು (Uttar Pradesh Global Investors Summit 2023) ಉದ್ಘಾಟಿಸಲಿದ್ದಾರೆ. ಹಾಗೆ ಜಾಗತಿಕ ಟ್ರೇಡ್ ಶೋ ಮತ್ತು ಇನ್ವೆಸ್ಟ್ ಯುಪಿ 2.0ಗೆ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಇಂದಿನಿಂದ ಫೆ.12 ರವರೆಗೆ ಎರಡು ದಿನಗಳ ಕಾಲ ನಡೆಯುತ್ತದೆ. ಇದು ಉತ್ತರ ಪ್ರದೇಶ ಸರ್ಕಾರದ ಪ್ರಮುಖ ಹೂಡಿಕೆ ಶೃಂಗಸಭೆಯಾಗಿದೆ.
ರಾಜ್ಯದಲ್ಲಿ ವಾಣಿಜ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮತ್ತು ಹೊಸ ಹೂಡಿಕೆ ದಾರರನ್ನು ಸೆಳೆಯಲು ಆಯೋಜಿಸಲಾಗಿದೆ. ಹೀಗಾಗಿ ಈ ಶೃಂಗಸಭೆಯಲ್ಲಿ ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಉದ್ಯಮಿಗಳು, ಅಕಾಡೆಮಿಗಳು, ವಾಣಿಕ್ಯ ಕ್ಷೇತ್ರದ ಪರಿಣಿತರು ಮತ್ತು ದೇಶ ವಿದೇಶದ ನಾಯಕರು ಭಾಗಿಯಾಗಲಿದ್ದಾರೆ. ಇನ್ನು ಇನ್ವೆಸ್ಟರ್ ಯುಪಿ 2.0 ಉತ್ತರ ಪ್ರದೇಶದ ಸಮಗ್ರ ಅಭಿವೃದ್ಧಿ, ಹೂಡಿಕೆದಾರರ ಕೇಂದ್ರಿತ ಮತ್ತು ಸೇವಾ ಆಧಾರಿತ ಹೂಡಿಕೆ ಪರಿಸರ ವ್ಯವಸ್ಥೆ ನಿರ್ಮಿಸಲು ಇನ್ವೆಸ್ಟರ್ ಯುಪಿ 2.0 ಉತ್ತಮ ವೇದಿಕೆಯಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ