ನಾನು ರಾಜಕೀಯ ಮಾಡಲು ಬಂದಿಲ್ಲ, ದೇಶದ ಜನರ ಸೇವೆ ಮಾಡಲು ಬಂದಿದ್ದೇನೆ: ಉತ್ಕರ್ಷ್ ಸಮಾರೋಹ್​​ನಲ್ಲಿ ಮೋದಿ ಮಾತು

| Updated By: ರಶ್ಮಿ ಕಲ್ಲಕಟ್ಟ

Updated on: May 12, 2022 | 11:53 AM

Utkarsh Samaroh ಸರ್ಕಾರವು ಫಲಾನುಭವಿಗೆ ನಿರ್ಣಯದೊಂದಿಗೆ ತಲುಪಿದಾಗ, ಫಲಪ್ರದ ಫಲಿತಾಂಶಗಳೇನು ಎಂಬುದಕ್ಕೆ ಉತ್ಕರ್ಷ್ ಸಮಾರೋಹ್ ಸಾಕ್ಷಿಯಾಗಿದೆ. ಈ ಸಾಮಾಜಿಕ ಭದ್ರತಾ ಯೋಜನೆಗಳ ಶೇ100 ವ್ಯಾಪ್ತಿಗಾಗಿ ಭರೂಚ್ ಜಿಲ್ಲಾಡಳಿತ, ಗುಜರಾತ್ ಸರ್ಕಾರಕ್ಕೆ ಅಭಿನಂದನೆಗಳು

ನಾನು ರಾಜಕೀಯ ಮಾಡಲು ಬಂದಿಲ್ಲ, ದೇಶದ ಜನರ ಸೇವೆ ಮಾಡಲು ಬಂದಿದ್ದೇನೆ: ಉತ್ಕರ್ಷ್ ಸಮಾರೋಹ್​​ನಲ್ಲಿ ಮೋದಿ ಮಾತು
ನರೇಂದ್ರ ಮೋದಿ
Follow us on

ದೆಹಲಿ: ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುಜರಾತ್‌ನ (Gujarat) ಭರೂಚ್‌ನಲ್ಲಿ ಗುರುವಾರ ನಡೆದ ‘ಉತ್ಕರ್ಷ್ ಸಮಾರೋಹ್’ (Utkarsh Samaroh) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ನಾಲ್ಕು ಪ್ರಮುಖ ಯೋಜನೆಗಳ ಪರಿಪೂರ್ಣ ಸಂತೃಪ್ತಿಯನ್ನು ಆಚರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ, ಮೇ 12 ರಂದು ಬೆಳಿಗ್ಗೆ 10:30 ಗಂಟೆಗೆ, ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ‘ಉತ್ಕರ್ಷ್ ಸಮಾರೋಹ್’ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜನರಿಗೆ ಆರ್ಥಿಕ ಸಹಾಯವನ್ನು ಖಾತ್ರಿಪಡಿಸುವ ನಾಲ್ಕು ಪ್ರಮುಖ ರಾಜ್ಯ ಸರ್ಕಾರದ ಯೋಜನೆಗಳ ನೂರಕ್ಕೆ ನೂರು ಪರ್ಸೆಂಟ್ ಸಾಧನೆಯನ್ನು ಗುರುತಿಸಲು ಈ ಕಾರ್ಯಕ್ರಮವನ್ನು ಭರೂಚ್‌ನಲ್ಲಿ ನಡೆಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಬುಧವಾರ ಟ್ವೀಟ್‌ ಮಾಡಿದ್ದಾರೆ.

ಮೋದಿ ಮಾತಿನ ಮುಖ್ಯಾಂಶಗಳು

“ಕೆಲವೊಮ್ಮೆ ಯೋಜನೆಗಳು ಕಾಗದದ ಮೇಲೆ ಉಳಿಯುತ್ತವೆ ಮತ್ತು ಕೆಲವೊಮ್ಮೆ ಭ್ರಷ್ಟರು ಅದನ್ನು ಆಗಲು ಬಿಡುವುದಿಲ್ಲ. ಆದರೆ ನಾನು ‘ಸಬ್​​ಕಾ ಸಾಥ್, ಸಬ್​​ಕಾ ವಿಕಾಸ್ ಭಾವನೆಯನ್ನು ಗುರಿಯಾಗಿಸಿಕೊಂಡಿದ್ದೇನೆ. ಕೆಲಸವು ಕಷ್ಟ ಆಗಬಹುದು. ಆದರೆ ಇದು ಸರಿಯಾದ ಮಾರ್ಗವಾಗಿದೆ. ನಾನು ಇಂದು ಏನು ಮಾಡಲು ಶಕ್ತನಾಗಿದ್ದೇನೆ, ನಾನು ನಿಮ್ಮಿಂದ ಕಲಿತಿದ್ದೇನೆ. ಅಭಿವೃದ್ಧಿ, ದುಃಖ, ಸಂತೋಷ, ಕಷ್ಟಗಳು ಎಲ್ಲವನ್ನೂ ನಾನು ನಿಮ್ಮೊಂದಿಗೆ ನಿಕಟವಾಗಿ ಗಮನಿಸಿದ್ದೇನೆ ಎಂದು ಮೋದಿ ಹೇಳಿದರು.

ಸರ್ಕಾರವು ಫಲಾನುಭವಿಗೆ ನಿರ್ಣಯದೊಂದಿಗೆ ತಲುಪಿದಾಗ, ಫಲಪ್ರದ ಫಲಿತಾಂಶಗಳೇನು ಎಂಬುದಕ್ಕೆ ಉತ್ಕರ್ಷ್ ಸಮಾರೋಹ್ ಸಾಕ್ಷಿಯಾಗಿದೆ. ಈ ಸಾಮಾಜಿಕ ಭದ್ರತಾ ಯೋಜನೆಗಳ ಶೇ100 ವ್ಯಾಪ್ತಿಗಾಗಿ ಭರೂಚ್ ಜಿಲ್ಲಾಡಳಿತ, ಗುಜರಾತ್ ಸರ್ಕಾರಕ್ಕೆ ಅಭಿನಂದನೆಗಳು. ನಾನು ದೆಹಲಿಯಿಂದ ದೇಶಕ್ಕೆ ಸೇವೆ ಸಲ್ಲಿಸಿ 8 ವರ್ಷಗಳನ್ನು ಪೂರೈಸುತ್ತಿದ್ದೇನೆ. ಈ 8 ವರ್ಷಗಳ ಸೇವೆಯು ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಾಗಿವೆ. ಇಂದು ನಾನು ಏನು ಮಾಡಬಲ್ಲೆ, ನಾನು ನಿಮ್ಮಿಂದ ಮಾತ್ರ ಕಲಿತಿದ್ದೇನೆ. ಈಗ ನಾವು ಎಂಟು ವರ್ಷಗಳನ್ನು ಪೂರೈಸುತ್ತಿದ್ದೇವೆ, ನಾವು ಹೊಸ ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ

2014ರಲ್ಲಿ ನೀವು ನಮಗೆ ಸೇವೆಯ ಅವಕಾಶ ನೀಡಿದಾಗ ದೇಶದ ಅರ್ಧದಷ್ಟು ಜನಸಂಖ್ಯೆಯು ಶೌಚಾಲಯ ಸೌಲಭ್ಯ, ಲಸಿಕೆ ಸೌಲಭ್ಯ, ವಿದ್ಯುತ್ ಸಂಪರ್ಕ ಸೌಲಭ್ಯ, ಬ್ಯಾಂಕ್ ಖಾತೆ ಸೌಲಭ್ಯದಿಂದ ವಂಚಿತವಾಗಿತ್ತು. ಈ ವರ್ಷಗಳಲ್ಲಿ ಪ್ರತಿಯೊಬ್ಬರ ಪ್ರಯತ್ನದಿಂದ, ನಾವು ಅನೇಕ ಯೋಜನೆಗಳನ್ನು ತರಲು ಸಾಧ್ಯವಾಯಿತು

“ಇಂತಹ ಕೆಲಸಗಳು ಕಷ್ಟ, ರಾಜಕಾರಣಿಗಳು ಕೂಡ ಕೈ ಹಾಕಲು ಹೆದರುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ನಾನು ರಾಜಕೀಯ ಮಾಡಲು ಬಂದಿಲ್ಲ, ದೇಶದ ಜನರ ಸೇವೆ ಮಾಡಲು ಬಂದಿದ್ದೇನೆ. ದೇಶವು ಶೇ 100 ಫಲಾನುಭವಿಗಳನ್ನು ತಲುಪುವ ಪ್ರತಿಜ್ಞೆಯನ್ನು ತೆಗೆದುಕೊಂಡಿದೆ ಎಂದು ಮೋದಿ ಹೇಳಿದ್ದಾರೆ.

ಏನಿದು  ಉತ್ಕರ್ಷ್ ಸಮಾರೋಹ್ ?

ಜನವರಿ 1, 2022 ರಿಂದ ಮಾರ್ಚ್ 31, 2022 ರವರೆಗೆ ಭರೂಚ್ ಜಿಲ್ಲಾಡಳಿತವು ನಡೆಸಿದ ‘ಉತ್ಕರ್ಷ್ ಇನಿಶಿಯೇಟಿವ್’ ಡ್ರೈವ್‌ನ ಯಶಸ್ಸನ್ನು ಕೊಂಡಾಡಲು ಆಯೋಜಿಸಿದ ಕಾರ್ಯಕ್ರಮವಾಗಿದೆ ‘ಉತ್ಕರ್ಷ್ ಸಮಾರೋಹ್’. ಈ ಅಭಿಯಾನವು ಗಂಗಾ ಸ್ವರೂಪ ಆರ್ಥಿಕ ಸಹಾಯ ಯೋಜನೆ, ಇಂದಿರಾ ಗಾಂಧಿ ವೃದ್ಧ ಸಹಾಯ ಯೋಜನೆ, ನಿರಾಧಾರ್ ವೃದ್ಧ್ ಆರ್ಥಿಕ ಸಹಾಯ ಯೋಜನೆ ಮತ್ತು ರಾಷ್ಟ್ರೀಯ ಕುಟುಂಬ ಸಹಾಯ ಯೋಜನೆ ಮೂಲಕ ವಿಧವೆಯರು, ವೃದ್ಧರು ಮತ್ತು ನಿರ್ಗತಿಕ ನಾಗರಿಕರಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಒದಗಿಸುವುದನ್ನು ಖಾತ್ರಿಪಡಿಸಿತು. ಉಲ್ಲೇಖಿತ ಯೋಜನೆಗಳಿಗೆ ಒಟ್ಟು 12,854 ಫಲಾನುಭವಿಗಳನ್ನು ಗುರುತಿಸಲಾಗಿದೆ.

 

Published On - 11:17 am, Thu, 12 May 22