ಧರ್ಮಶಾಲಾ ಭೇಟಿಯೊಂದಿಗೆ ಪ್ರಧಾನಿ ಮೋದಿಯವರ ಎರಡು ದಿನಗಳ ಹಿಮಾಚಲ ಪ್ರದೇಶ ಪ್ರವಾಸ ಇಂದು ಆರಂಭ

ಧರ್ಮಶಾಲಾದ ಪೊಲೀಸ್ ಸ್ಟೇಡಿಯಂನಲ್ಲಿ ವಿಶೇಷವಾಗಿ ರಚಿಸಲಾದ ಹೆಲಿಪ್ಯಾಡ್‌ಗೆ ಪ್ರಧಾನಿ ಆಗಮಿಸಲಿದ್ದು, ಅಲ್ಲಿ ರಾಜ್ಯದ ರಾಜ್ಯಪಾಲರು, ಸಿಎಂ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಸ್ವಾಗತಿಸಲಿದ್ದಾರೆ.

ಧರ್ಮಶಾಲಾ ಭೇಟಿಯೊಂದಿಗೆ ಪ್ರಧಾನಿ ಮೋದಿಯವರ ಎರಡು ದಿನಗಳ ಹಿಮಾಚಲ ಪ್ರದೇಶ ಪ್ರವಾಸ ಇಂದು ಆರಂಭ
ನರೇಂದ್ರ ಮೋದಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jun 16, 2022 | 10:16 AM

ಶಿಮ್ಲಾ: ಧರ್ಮಶಾಲಾಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಹಿಮಾಚಲ ಪ್ರದೇಶ ಪ್ರವಾಸವನ್ನು(Himachal Pradesh)ಇಂದು (ಗುರುವಾರ, ಜೂನ್ 16) ಪ್ರಾರಂಭಿಸಲಿದ್ದಾರೆ. ಧರ್ಮಶಾಲಾದ (Dharamshala) ಪೊಲೀಸ್ ಸ್ಟೇಡಿಯಂನಲ್ಲಿ ವಿಶೇಷವಾಗಿ ರಚಿಸಲಾದ ಹೆಲಿಪ್ಯಾಡ್‌ಗೆ ಪ್ರಧಾನಿ ಆಗಮಿಸಲಿದ್ದು, ಅಲ್ಲಿ ರಾಜ್ಯದ ರಾಜ್ಯಪಾಲರು, ಸಿಎಂ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಸ್ವಾಗತಿಸಲಿದ್ದಾರೆ. ಶುಕ್ರವಾರ ಸಂಜೆ ಮೋದಿ ದೆಹಲಿಗೆ ತೆರಳಲಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಬುಧವಾರ ಭೇಟಿಯ ಸಿದ್ಧತೆಗಳನ್ನು ಪರಿಶೀಲಿಸಿದರು. ಮುಖ್ಯಮಂತ್ರಿಗಳು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಶಿಷ್ಟಾಚಾರದ ಪ್ರಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ. ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಅಖಿಲ ಭಾರತ ಮುಖ್ಯ ಕಾರ್ಯದರ್ಶಿಗಳ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿದ್ದರು. ವಿಧಾನಸಭಾಧ್ಯಕ್ಷ ವಿಪಿನ್ ಸಿಂಗ್ ಪರ್ಮಾರ್, ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸುರೇಶ್ ಕಶ್ಯಪ್, ಸಂಸದ ಕಿಶನ್ ಕಪೂರ್, ವೂಲ್ ಫೆಡರೇಶನ್ ಅಧ್ಯಕ್ಷ ತ್ರಿಲೋಕ್ ಕಪೂರ್, ಶಾಸಕ ಧರ್ಮಶಾಲಾ ವಿಶಾಲ್ ನೆಹ್ರಿಯಾ, ಮುಖ್ಯ ಕಾರ್ಯದರ್ಶಿ ರಾಮ್ ಸುಭಾಗ್ ಸಿಂಗ್, ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಂದು, ಪ್ರಧಾನ ಕಾರ್ಯದರ್ಶಿ ಜಿಎಡಿ ಭರತ್ ಖೇರಾ, ಉಪ ಕಮಿಷನರ್ ನಿಪುನ್ ಜಿಂದಾಲ್, ಪೊಲೀಸ್ ವರಿಷ್ಠಾಧಿಕಾರಿ ಖುಶಾಲ್ ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಧರ್ಮಶಾಲಾದ ಕಚೇರಿ ಬಜಾರ್‌ನಲ್ಲಿರುವ ಕೆಸಿಸಿಬಿ ಚೌಕ್‌ನಿಂದ ರಾಜ್ಯ ಹುತಾತ್ಮರ ಸ್ಮಾರಕವರೆಗೆ ಪ್ರಧಾನ ಮಂತ್ರಿಗಳ ರೋಡ್‌ಶೋ ನಡೆಸಲಿದ್ದಾರೆ ಎಂದು  ಎಂದು ಹಿಮಾಚಲ ಪ್ರದೇಶ ಬಿಜೆಪಿಯ ಮಾಧ್ಯಮ ಉಸ್ತುವಾರಿ ರಾಕೇಶ್ ಶರ್ಮಾ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶಕ್ಕೆ ಪ್ರವಾಸ ನಂತರ ಮೋದಿ ಅವರು ತಮ್ಮ ತವರು ರಾಜ್ಯ ಗುಜರಾತ್‌ಗೆ ತೆರಳಲಿದ್ದಾರೆ . ಜೂನ್ 18 ಶುಕ್ರವಾರ ಅವರು ವಡೋದರಾ ಬಳಿಯ ಕುಂಧೇಲಾ ಗ್ರಾಮದಲ್ಲಿ 100 ಎಕರೆ ಜಾಗದಲ್ಲಿ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಶಾಶ್ವತ ಕ್ಯಾಂಪಸ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಇದನ್ನೂ ಓದಿ
Image
Prithvi-2: ಒಡಿಶಾದ ಕರಾವಳಿ ತಟದಲ್ಲಿ ಪೃಥ್ವಿ-2 ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತ
Image
ಭಾರತ್ ಗೌರವ್ ಯೋಜನೆಯಡಿಯಲ್ಲಿ ದೇಶದ ಮೊದಲ ಖಾಸಗಿ ರೈಲು ಸೇವೆ ಆರಂಭ
Image
2020-21ರ ಕಾರ್ಮಿಕ ಸಮೀಕ್ಷೆ ಪ್ರಕಾರ ದೇಶದಲ್ಲಿ ನಿರುದ್ಯೋಗ ದರ ಕುಸಿತ; ಏನಿದು ಲೆಕ್ಕಾಚಾರ?

ಈ ವರ್ಷದ ಕೊನೆಯಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್​​ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 10:06 am, Thu, 16 June 22