ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹೆಸರಿನ ವೃತ್ತವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಗಾಯಕಿ ಲತಾ ಮಂಗೇಶ್ಕರ್ (Lata Mangeshkar Birthday) ಅವರ 93ನೇ ಜನ್ಮದಿನದ ಸಂದರ್ಭದಲ್ಲಿ ಅವರ ಹೆಸರಿನ ಚೌಕವನ್ನು (Lata Mangeshkar Chowk) ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲತಾ ಮಂಗೇಶ್ಕರ್ ಅವರ ಕುಟುಂಬಸ್ಥರೆಲ್ಲರಿಗೂ ಆಹ್ವಾನ ನೀಡಲಾಗಿದೆ. ಈ ಬೃಹತ್ ಚೌಕ (ವೃತ್ತ)ದ ಮಧ್ಯೆ ಸಂಗೀತದ ಉಪಕರಣವನ್ನು ಇಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ 93ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ನೆನಪಿಗಾಗಿ ಅವರ ಹೆಸರಿನ ಈ ಚೌಕವನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಯೂ ನದಿಯ ದಡದಲ್ಲಿರುವ ಹೊಸ ಘಾಟ್ ಪ್ರದೇಶವನ್ನು ಲತಾ ಮಂಗೇಶ್ಕರ್ ಚೌರಾಹಾ ಎಂದು ಕರೆಯಲಾಗಿದ್ದು, ಇದನ್ನು 7.9 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ: ಮುಂದಿನ ಜನ್ಮ ಇದ್ದರೆ ಲತಾ ಮಂಗೇಶ್ಕರ್ ಆಗಿ ಹುಟ್ಟಲು ನನಗೆ ಇಷ್ಟವಿಲ್ಲ ಎಂದಿದ್ದ ನೈಟಿಂಗೇಲ್ ಆಫ್ ಇಂಡಿಯಾ
ಈ ವೃತ್ತದ ಮಧ್ಯೆ 14 ಟನ್ ತೂಕ, 40 ಅಡಿ ಉದ್ದ ಮತ್ತು 12 ಮೀಟರ್ ಎತ್ತರವಿರುವ ಭಾರತೀಯ ಸಂಗೀತ ವಾದ್ಯವಾದ ವೀಣೆಯನ್ನು ಸ್ಥಾಪಿಸಿರುವುದು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ಈ ಸಮಾರಂಭದಲ್ಲಿ ಲತಾ ಮಂಗೇಶ್ಕರ್ ಅವರ ಕುಟುಂಬ ಸದಸ್ಯರು ಮತ್ತು ಚಿತ್ರರಂಗದ ಅನೇಕ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಇಂದು ಲತಾ ಮಂಗೇಶ್ಕರ್ ಅವರ ಜನ್ಮದಿನವಾದ್ದರಿಂದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಲತಾ ದೀದಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ನೆನಪಿಸಿಕೊಳ್ಳುತ್ತೇನೆ. ನಾನು ನೆನಪಿಸಿಕೊಳ್ಳುವುದು ತುಂಬಾ ಇದೆ. ಲತಾ ದೀದಿ ಎಲ್ಲರಿಗೂ ಬಹಳ ಪ್ರೀತಿಯನ್ನು ಸುರಿಸುತ್ತಿದ್ದರು. ಇಂದು ಅಯೋಧ್ಯೆಯ ಚೌಕ್‌ಗೆ ಅವರ ಹೆಸರಿಡಲು ನನಗೆ ಸಂತೋಷವಾಗುತ್ತಿದೆ. ಇದು ಶ್ರೇಷ್ಠ ಭಾರತೀಯ ಸಂಗೀತ ದಿಗ್ಗಜರಿಗೆ ನಾವು ನೀಡುತ್ತಿರುವ ಸೂಕ್ತವಾದ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Remembering Lata Didi on her birth anniversary. There is so much that I recall…the innumerable interactions in which she would shower so much affection. I am glad that today, a Chowk in Ayodhya will be named after her. It is a fitting tribute to one of the greatest Indian icons.
— Narendra Modi (@narendramodi) September 28, 2022
ದಶಕಗಳ ಕಾಲ ತಮ್ಮ ಮಾಂತ್ರಿಕ ಕಂಠದಿಂದ ಕೇಳುಗರನ್ನು ಪುಳಕಿತಗೊಳಿಸಿದ್ದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ 2022ರ ಫೆಬ್ರವರಿ 6ರಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು.
Published On - 9:10 am, Wed, 28 September 22