ನವದೆಹಲಿ: ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ನಾಯಕರ ಧ್ವನಿ ಭಾರತದ ಧ್ವನಿಯಾಗಿದೆ. ಅವರ ಆದ್ಯತೆಗಳು ಭಾರತದ ಆದ್ಯತೆಗಳಾಗಿವೆ. ನಾವು ಭವಿಷ್ಯದಲ್ಲಿ ಅತಿದೊಡ್ಡ ಪಾಲನ್ನು ಹೊಂದಿದ್ದೇವೆ. ಜಗತ್ತನ್ನು ಪುನರುಜ್ಜೀವನಗೊಳಿಸಲು ನಾವು ಒಟ್ಟಾಗಿ ಪ್ರತಿಕ್ರಿಯಿಸಿ, ಗುರುತಿಸಿ, ಗೌರವಿಸಬೇಕು ಎಂದಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಯೋತ್ಪಾದನೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ ಸೇರಿದಂತೆ ಜಾಗತಿಕ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಈ ಅಸ್ಥಿರತೆಯ ಸ್ಥಿತಿ ಎಷ್ಟು ಕಾಲ ಇರುತ್ತದೆ ಎಂದು ಊಹಿಸಲು ಕಷ್ಟ. ಯುದ್ಧ, ಸಂಘರ್ಷ, ಭಯೋತ್ಪಾದನೆ ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆ, ಏರುತ್ತಿರುವ ಆಹಾರ, ರಸಗೊಬ್ಬರ ಮತ್ತು ಇಂಧನ ಬೆಲೆಗಳು, ಹವಾಮಾನ-ಬದಲಾವಣೆ ಚಾಲಿತ ನೈಸರ್ಗಿಕ ವಿಪತ್ತುಗಳು ಮತ್ತು ಕೋವಿಡ್ ಸಾಂಕ್ರಾಮಿಕದ ಶಾಶ್ವತ ಆರ್ಥಿಕ ಪರಿಣಾಮಗಳನ್ನು ಕಂಡ ಮತ್ತೊಂದು ಕಷ್ಟಕರ ವರ್ಷದಲ್ಲಿ ನಾವು ಪುಟವನ್ನು ತಿರುಗಿಸಿದ್ದೇವೆ. ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
Sharing my closing remarks at the “Voice of Global South Summit.” https://t.co/WXB56kElFZ
— Narendra Modi (@narendramodi) January 12, 2023
ಈ ವರ್ಷ ಭಾರತವು ತನ್ನ ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿದ್ದಂತೆ ಜಾಗತಿಕವಾಗಿ ದಕ್ಷಿಣದ ಧ್ವನಿಯನ್ನು ವರ್ಧಿಸುವುದು ನಮ್ಮ ಗುರಿಯಾಗಿರುವುದು ಸಹಜ. ಜಿ-20 ಅಧ್ಯಕ್ಷತೆಗಾಗಿ ನಾವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಪರಿಕಲ್ಪನೆಯನ್ನು ಆಯ್ಕೆ ಮಾಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
We supported each other in the fight against foreign rule and we can do it again in this century to create a new world order that will ensure welfare of our citizens. Your voice is India’s voice and your priorities are India’s priorities: PM Modi at Voice of Global South Summit pic.twitter.com/sCvzeSwiki
— ANI (@ANI) January 12, 2023
ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ ನಮಗೆ ಉತ್ತಮ ಸಮಯ ಬರುತ್ತಿದೆ ಎಂಬ ಆಶಾವಾದ ಹೊಂದುವುದು ಅಗತ್ಯ. ಆರ್ಥಿಕತೆಯನ್ನು ಸುಧಾರಿಸುವ ಸರಳ, ಸಾಧುವಾದ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.