70 ವರ್ಷದಲ್ಲಿ ನೀವೇನು ಮಾಡಿದಿರಿ ಎಂದು ಪ್ರಧಾನಿ ಕೇಳುತ್ತಿರುತ್ತಾರೆ; ನಾವು ನಿರುದ್ಯೋಗ, ಬೆಲೆ ಏರಿಕೆ ಮಾಡಿರಲಿಲ್ಲ ಎಂದ ರಾಹುಲ್ ಗಾಂಧಿ

70 ಸಾಲ್ ಮೇ ಕ್ಯಾ ಕಿಯಾ? ಎಂದು ಪ್ರಧಾನಿ ಆಗಾಗ ಕೇಳುತ್ತಿರುತ್ತಾರೆ. ನಾವು ಭಾರತಕ್ಕೆ ಎಂದಿಗೂ ನಿರುದ್ಯೋಗವನ್ನು ನೀಡಿಲ್ಲ. ಭಾರತ ಇಂದು ಎದುರಿಸುತ್ತಿರುವ ದಾಖಲೆಯ ಬೆಲೆ ಏರಿಕೆಯನ್ನು ನಾವು ಎಂದಿಗೂ ನೀಡಿಲ್ಲ ಎಂದು ರಾಹುಲ್ ಗಾಂಧಿ.

70 ವರ್ಷದಲ್ಲಿ ನೀವೇನು ಮಾಡಿದಿರಿ ಎಂದು ಪ್ರಧಾನಿ ಕೇಳುತ್ತಿರುತ್ತಾರೆ; ನಾವು ನಿರುದ್ಯೋಗ, ಬೆಲೆ ಏರಿಕೆ ಮಾಡಿರಲಿಲ್ಲ ಎಂದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 25, 2022 | 10:43 AM

‘ಭಾರತ್ ಜೋಡೋ ಯಾತ್ರೆ’ಯನ್ನು (Bharat Jodo Yatra) ಮುನ್ನಡೆಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi),  ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿರಂತರವಾಗಿ ಪ್ರಸ್ತಾಪಿಸುತ್ತಿರುವ ಕೆಲವು ವಿಷಯಗಳಿಗೆ ಉತ್ತರ ಇದು ಎಂದು ಟ್ವೀಟ್ ಮಾಡಿದ್ದಾರೆ. ‘70 ಸಾಲ್ ಮೇ ಕ್ಯಾ ಕಿಯಾ?’ (70 ವರ್ಷಗಳಲ್ಲಿ ನೀವು ಏನು ಮಾಡಿದಿರಿ) ಎಂದು ಪ್ರಧಾನಿ ಆಗಾಗ ಕೇಳುತ್ತಿರುತ್ತಾರೆ. ನಾವು ಭಾರತಕ್ಕೆ ಎಂದಿಗೂ ನಿರುದ್ಯೋಗವನ್ನು ನೀಡಿಲ್ಲ. ಭಾರತ ಇಂದು ಎದುರಿಸುತ್ತಿರುವ ದಾಖಲೆಯ ಬೆಲೆ ಏರಿಕೆಯನ್ನು ನಾವು ಎಂದಿಗೂ ನೀಡಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಕ್ರೋನಿ ಕ್ಯಾಪಿಟಲಿಸಂನ ಆರೋಪ ಮಾಡಿದ ರಾಹುಲ್, ಬಿಜೆಪಿ ಸರ್ಕಾರ ರೈತರು, ಯುವಕರು ಮತ್ತು ಮಹಿಳೆಯರ ಸರ್ಕಾರವಲ್ಲ. ಇದು 5-6 ಶ್ರೀಮಂತ ಭಾರತೀಯರ ಸರ್ಕಾರವಾಗಿದ್ದು, ಅವರು ಬಯಸಿದ ಯಾವುದೇ ವ್ಯವಹಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ ರಾಹುಲ್. ನಿರುದ್ಯೋಗ ಮತ್ತು ಹಣದುಬ್ಬರ ಉತ್ತುಂಗದಲ್ಲಿರುವಾಗ ಬಿಜೆಪಿಯ ನಡುವೆ ಉನ್ನತ ಉದ್ಯಮಿಗಳು ನಿರಂತರವಾಗಿ ಲಾಭ ಪಡೆಯುತ್ತಿದ್ದಾರೆ ಎಂದು ರಾಹುಲ್ ಪದೇ ಪದೇ ಆರೋಪಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ಯುವಕರಿಗಾಗಿ ವರ್ಚುವಲ್ ಈವೆಂಟ್ ಅನ್ನು ಉದ್ದೇಶಿಸಿ ಮೋದಿ ಸಮ್ಮಿಶ್ರ ಸರ್ಕಾರಗಳನ್ನು ಹೊಂದಿರುವಾಗ ಭಾರತದ ಮೇಲೆ ಅದು ಪರಿಣಾಮ ಬೀರಿತ್ತು ಎಂದು ಹೇಳಿದ್ದರು. ಮೋದಿಯವರ ಈ ಹೇಳಿಕೆ ಬೆನ್ನಲ್ಲೇ ರಾಹುಲ್, ಮೋದಿ ವಿರುದ್ಧ ಈ ರೀತಿ ಟೀಕೆ ಮಾಡಿದ್ದಾರೆ.

2014 ರಿಂದ ಹಲವಾರು ಚುನಾವಣಾ ಹಿನ್ನಡೆಗಳ ಕುರಿತು ಟೀಕೆಗಳ ನಡುವೆ ಕಾಂಗ್ರೆಸ್ ದೇಶಾದ್ಯಂತ ಪಾದಯಾತ್ರೆಯನ್ನು ನಡೆಸುತ್ತಿದೆ.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಹಾಲಿವುಡ್ ನಟ ಜಾನ್ ಕುಸಾಕ್ ಬೆಂಬಲ

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಜನಪ್ರಿಯ ಹಾಲಿವುಡ್ ಸ್ಟಾರ್ ಜಾನ್ ಕುಸಾಕ್ ಬೆಂಬಲ ನೀಡಿದ್ದಾರೆ. ಸೆರೆಂಡಿಪಿಟಿ, ಹೈ ಫಿಡೆಲಿಟಿ, ಕಾನ್ ಏರ್ ಮತ್ತು 2012 ರಂತಹ ಬ್ಲಾಕ್‌ಬಸ್ಟರ್‌ಗಳಲ್ಲಿ ನಟಿಸಿರುವ 56 ವರ್ಷದ ನಟ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಜಾಗತಿಕ ಸಮಸ್ಯೆಗಳ ಬಗ್ಗೆ ದನಿಯೆತ್ತುತ್ತಿರುತ್ತಾರೆ. ಶನಿವಾರ ಟ್ವಿಟರ್‌ನಲ್ಲಿ ಸಂಸದ ರಾಹುಲ್ ಗಾಂಧಿ ಕೇರಳದಿಂದ ಕಾಶ್ಮೀರಕ್ಕೆ ನಡೆಯುತ್ತಿದ್ದಾರೆ ಎಂದು ಕುಸಾಕ್ ಬರೆದಿದ್ದಾರೆ.

ಜಾನ್ ಕುಸಾಕ್ ಈ ಹಿಂದೆ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳಿಗೆ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡಿದ್ದರು. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು 150 ದಿನಗಳಲ್ಲಿ 3,570 ಕಿಮೀ ಕ್ರಮಿಸುವ ಗುರಿಯನ್ನು ಹೊಂದಿದೆ. ಈ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.

ಸೆ.10ರಂದು ಸಂಜೆ ಕೇರಳ ಪ್ರವೇಶಿಸಿದ ಯಾತ್ರೆಯು 450 ಕಿ.ಮೀ ರಾಜ್ಯದ ಮೂಲಕ ಸಾಗಲಿದ್ದು, 19 ದಿನಗಳಲ್ಲಿ ಏಳು ಜಿಲ್ಲೆಗಳನ್ನು ತಲುಪಿ  ಅಕ್ಟೋಬರ್ 1ರಂದು ಕರ್ನಾಟಕ ಪ್ರವೇಶಿಸಲಿದೆ.

Published On - 10:40 am, Sun, 25 September 22