ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಯೂತ್ ಫಾರ್ ಪರಿವರ್ತನ್ ಕೆಲಸ ಶ್ಲಾಘಿಸಿದ ಮೋದಿ
Youth for Parivartan ಬನಶಂಕರಿ ಎರಡನೇ ಹಂತದಲ್ಲಿರುವ ಯೂತ್ ಫಾರ್ ಪರಿವರ್ತನ್ ನಗರದಾದ್ಯಂತ ಅನೇಕ ಸ್ಥಳಗಳನ್ನು ಸುಂದರಗೊಳಿಸುವ ಯೋಜನೆಗಳನ್ನು ಕೈಗೊಂಡಿದೆ. ಆಗ ಕಾನೂನು ವಿದ್ಯಾರ್ಥಿಯಾಗಿದ್ದ ಅಮಿತ್ ಅಮರನಾಥ್
ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮನ್ ಕಿ ಬಾತ್ ನಲ್ಲಿ(Mann ki baat) ಬೆಂಗಳೂರಿನ ಯೂತ್ ಫಾರ್ ಪರಿವರ್ತನ್ (Youth for Parivartan) ಕೆಲಸವನ್ನು ಶ್ಲಾಘಿಸಿದ್ದಾರೆ. ಸ್ವಚ್ಛತೆಯ ಬಗ್ಗೆ ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಬೆಂಗಳೂರಿನಲ್ಲಿ ಒಂದು ತಂಡವಿದೆ ಯೂತ್ ಫಾರ್ ಪರಿವರ್ತನ್. ಕಳೆದ ಎಂಟು ವರ್ಷಗಳಿಂದ ಈ ತಂಡ ಸ್ವಚ್ಛತೆ ಮತ್ತು ಇತರ ಸಮುದಾಯ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದೆ. ಅವರ ಧ್ಯೇಯವಾಕ್ಯ- ದೂರುವುದನ್ನು ನಿಲ್ಲಿಸಿ, ಕಾರ್ಯಪ್ರವೃತ್ತರಾಗಿ ಎಂಬುದು. ಈ ತಂಡ ಇದುವರೆಗೆ ನಗರದಾದ್ಯಂತ 370ಕ್ಕೂ ಹೆಚ್ಚು ಸ್ಥಳಗಳನ್ನು ಸುಂದರಗೊಳಿಸಿದೆ. ಯೂತ್ ಫಾರ್ ಪರಿವರ್ತನ್ ಅಭಿಯಾನವು ಪ್ರತಿ ಸ್ಥಳದಲ್ಲಿ 100 ರಿಂದ 150 (150) ನಾಗರಿಕರನ್ನು ಸಂಪರ್ಕಿಸಿದೆ. ಪ್ರತಿ ಭಾನುವಾರ ಈ ಕಾರ್ಯಕ್ರಮವು ಬೆಳಿಗ್ಗೆ ಪ್ರಾರಂಭವಾಗಿ ಮಧ್ಯಾಹ್ನದವರೆಗೆ ಮುಂದುವರಿಯುತ್ತದೆ. ಈ ಕಾರ್ಯದಲ್ಲಿ ಕಸ ಎತ್ತುವುದಷ್ಟೇ ಅಲ್ಲ, ಗೋಡೆಗಳಿಗೆ ಬಣ್ಣ ಬಳಿಯುವ, ಕಲಾತ್ಮಕ ರೇಖಾಚಿತ್ರಗಳನ್ನು ತಯಾರಿಸುವ ಕೆಲಸವೂ ನಡೆಯುತ್ತದೆ. ಅನೇಕ ಸ್ಥಳಗಳಲ್ಲಿ, ನೀವು ಪ್ರಸಿದ್ಧ ವ್ಯಕ್ತಿಗಳ ರೇಖಾಚಿತ್ರಗಳನ್ನು ಮತ್ತು ಅವರಿಂದ ಸ್ಫೂರ್ತಿದಾಯಕ ಬರಹಗಳನ್ನು ಸಹ ನೋಡಬಹುದು ಎಂದಿದ್ದಾರೆ.
Stop complaining, start acting – this is the motto of Youth for Parivartan in Bengaluru. The team has worked on beautification of the city and brought together citizens for reducing plastic pollution in the city. : PM @narendramodi #MannKiBaat‘
— MyGovIndia (@mygovindia) September 25, 2022
ಯೂತ್ ಫಾರ್ ಪರಿವರ್ತನ್ ತಂಡದ ಬಗ್ಗೆ
ಬನಶಂಕರಿ ಎರಡನೇ ಹಂತದಲ್ಲಿರುವ ಯೂತ್ ಫಾರ್ ಪರಿವರ್ತನ್ ನಗರದಾದ್ಯಂತ ಅನೇಕ ಸ್ಥಳಗಳನ್ನು ಸುಂದರಗೊಳಿಸುವ ಯೋಜನೆಗಳನ್ನು ಕೈಗೊಂಡಿದೆ. ಆಗ ಕಾನೂನು ವಿದ್ಯಾರ್ಥಿಯಾಗಿದ್ದ ಅಮಿತ್ ಅಮರನಾಥ್ ಅವರು ತಮ್ಮ ಸ್ನೇಹಿತರು ಮತ್ತು ಗೆಳೆಯರ ಸಹಾಯದಿಂದ 2014 ರಲ್ಲಿ ಯೂತ್ ಫಾರ್ ಪರಿವರ್ತನ್ (YFP) ಅನ್ನು ಸ್ಥಾಪಿಸಿದರು. ದೂರುವುದನ್ನು ನಿಲ್ಲಿಸಿ, ಕಾರ್ಯ ಪ್ರವೃತ್ತರಾಗಿ ಎಂದು ಅಮರನಾಥ್ ಸಲಹೆ ನೀಡುತ್ತಾರೆ. ವರುಷಗಳ ತಮ್ಮ ಸ್ನೇಹಿತರಾದ ರಾಕೇಶ್, ಸಂಕೇತ್ ಮತ್ತು ನಿಶಾಂತ್ ಅವರೊಂದಿಗೆ ರೂಪುಗೊಂಡ ಈ ತಂಡದಲ್ಲಿ 1,800 ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ತಂಡಗಳು ನಗರದ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದು,ಹಲವು ಪ್ರದೇಶಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಈ ಬಗ್ಗೆ ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ನೀಡಿದ ಸಂದರ್ಶನವೊಂದಲ್ಲಿ ಅಮರನಾಥ್ ಅವರು, 2014 ರಲ್ಲಿ ನಗರವು ಕಸ ವಿಲೇವಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ನಮ್ಮ ನಗರವನ್ನು ‘ಗಾರ್ಬೇಜ್ ಸಿಟಿ’ ಎಂಬ ಎಂದು ಹೇಳಲಾಗುತ್ತಿತ್ತು. ಆ ದಿನಗಳಲ್ಲಿ ಸುಂದರ ನಗರವು ದಿನದಿಂದ ದಿನಕ್ಕೆ ಕೊಳಕಾಗುತ್ತಿರುವುದನ್ನು ನಾನು ನೋಡಿದಾಗ, ಹೆಚ್ಚಿನ ಜನರು ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಮಾತ್ರ ದೂರು ನೀಡುವುದನ್ನು ನಾನು ಗಮನಿಸಿದೆ ಎಂದು ಹೇಳಿದ್ದಾರೆ.
ನಾನು ನನ್ನ ಆರು ಜನ ಸ್ನೇಹಿತರು ಆರಂಭಿಸಿದ ತಂಡ ಹಲವಾರು ಪ್ರದೇಶಗಳಲ್ಲಿ ಸ್ವಚ್ಛತೆ ಕಾರ್ಯ ಮಾಡಿದೆ. ನಾವು ಈಗ ಕಸ ಹಾಕುವ ಸ್ಥಳ ಮತ್ತುಕೊಳಕು ಕಾಣುವ ಸ್ಥಳಗಳನ್ನು ಗುರುತಿಸುತ್ತೇವೆ. ಸ್ಥಳಗಳನ್ನು ಪರಿಶೀಲಿಸಿದ ನಂತರ, ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅನ್ನು ಸಂಪರ್ಕಿಸಿ ಮತ್ತು ಕಸವನ್ನು ತೆರವುಗೊಳಿಸುತ್ತೇವೆ. ಆಮೇಲೆ ತಂಡವು ಗೋಡೆಯ ಮೇಲೆ ಟೆರಾಕೋಟಾ ವಿನ್ಯಾಸಗಳನ್ನು ಚಿತ್ರಿಸುತ್ತಾರೆ. ಇಷ್ಟೇ ಅಲ್ಲದೆ ಕುಳಿತುಕೊಳ್ಳಲು ಬೆಂಚುಗಳನ್ನು ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಿ ಮತ್ತು ಸ್ಥಳವನ್ನು ಸುಂದರವಾಗಿರಿಸುತ್ತಾರೆ. ಹೀಗೆ ಮಾಡಿದಾಗ ಇತರರು ಕಸವನ್ನು ಎಸೆಯುವ ಮೊದಲು ಎರಡು ಬಾರಿ ಯೋಚಿಸುತ್ತಾರೆ. ಈ ಕಾರ್ಯವನ್ನು ‘ಪರಿವರ್ತನ್ ಡ್ರೈವ್’ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.