ರಾಜ್ಯದಲ್ಲಿ ಮತ್ತೆ ವಿದ್ಯುತ್​ ದರ ಏರಿಕೆಗೆ ಸರ್ಕಾರ ನಿರ್ಧಾರ: ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ವಿರೋಧ

ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರ ಮುಂದಿನ ವರ್ಷ ಏಪ್ರಿಲ್​ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ.

ರಾಜ್ಯದಲ್ಲಿ ಮತ್ತೆ ವಿದ್ಯುತ್​ ದರ ಏರಿಕೆಗೆ ಸರ್ಕಾರ ನಿರ್ಧಾರ: ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ವಿರೋಧ
ವಿದ್ಯುತ್ ದರ ಏರಿಕೆ (ಸಂಗ್ರಹ ಚಿತ್ರ)
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 25, 2022 | 3:14 PM

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ (electricity rates) ಏರಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಈ ನಿರ್ಧಾರಕ್ಕೆ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಪ್ರತಿ ಯೂನಿಟ್​ಗೆ 43 ಪೈಸೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರ ಮುಂದಿನ ವರ್ಷ ಏಪ್ರಿಲ್​ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ. ಈಗಾಗಲೇ ವಿದ್ಯುತ್ ಮೇಲಿನ ತೆರಿಗೆ ಶೇ‌ಕಡಾ 9ರಷ್ಟು ಇದೆ. ಇದನ್ನು ಶೇಕಡಾ 4ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಈ ಸಂಬಂಧ ಮುಂದಿನ ವಾರ ಇಂಧನ ಸಚಿವರನ್ನು ಭೇಟಿಯಾಗಿ ಮನವಿ ಸಲಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಮಾಹಿತಿ ನೀಡಲಾಗಿದೆ. ಈ ವರ್ಷ ಏಪ್ರಿಲ್​ನಲ್ಲಿ ಬೆಸ್ಕಾಂ ವಿದ್ಯುತ್ ದರ ಹೆಚ್ಚಿಸಿತ್ತು.

ಪ್ರತಿ ಯೂನಿಟ್​ಗೆ 35 ಪೈಸೆ ಏರಿಕೆ ಮಾಡಿದ್ದ ಬೆಸ್ಕಾಂ, ಕೊರೊನಾ ಬಳಿಕ ಈಗಷ್ಟೇ ಹೋಟೆಲ್​​ ಉದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ. ವಿದ್ಯುತ್​ ದರ ಮತ್ತೆ ಏರಿಸಿದರೆ ಉದ್ಯಮಕ್ಕೆ ಸಮಸ್ಯೆ ಆಗಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ತಿಳಿಸಿದರು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಮುಂದಿನ ಆರು ತಿಂಗಳ ಅವಧಿಯಲ್ಲಿ ಬೆಸ್ಕಾಂಗೆ ಪ್ರತಿ ತಿಂಗಳು ಪ್ರತಿ ಯೂನಿಟ್​ಗೆ 43 ಪೈಸೆ, ಮೆಸ್ಕಾಂಗೆ 24 ಪೈಸೆ, ಚಸ್ಕಾಂಗೆ 34 ಪೈಸೆ, ಹೆಸ್ಕಾಂಗೆ 35 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅವಕಾಶ ನೀಡಿದೆ. ಅದರಂತೆ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ 43 ರೂ. ನಿಂದ 24 ರೂ. ವರೆಗೆ ಪಾವತಿಸಬೇಕಾಗಿದೆ. ಈ ಮುಂಚೆ ಜುಲೈ 1, 2022ರಿಂದ ಡಿಸೆಂಬರ್ 31, 2022ರ ವರೆಗೆ ಇಂಧನ ವೆಚ್ಚ ಹೊಂದಾಣಿಕೆ (FAC) ವಸೂಲಿ ಮಾಡಲು ಅವಕಾಶ ನೀಡಲಾಗಿತ್ತು. ಆಗ ಪ್ರತಿ ನೂರು ಯುನಿಟ್ ವಿದ್ಯುತ್ ಬಳಸುವ ಗ್ರಾಹಕರು ತಮ್ಮ ತಿಂಗಳ ವಿದ್ಯುತ್ ಬಿಲ್​ನಲ್ಲಿ ಹೆಚ್ಚುವರಿಯಾಗಿ 19 ರೂ. ನಿಂದ 31 ರೂ. ಏರಿಕೆಯಾಗಿತ್ತು.‌ ಇದೀಗ ಮತ್ತೆ ಬೆಲೆ ಏರಿಕೆ ಬರೆ ಬಿದ್ದಿದೆ.

ವಿದ್ಯುತ್ ದರ ಹೆಚ್ಚಳ ಏಕೆ?

ಕಲ್ಲಿದ್ದಲು ದರ ಗಣನೀಯ ಹೆಚ್ಚಳವಾಗಿದ್ದು, ವಿದ್ಯುತ್ ಖರೀದಿ ವೆಚ್ಚದಲ್ಲಿ ಏರಿಕೆಯಾಗಿದೆ. ಹೀಗಾಗಿ, ಈ ವೆಚ್ಚ ಹೆಚ್ಚಳವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada