ಕಂದಾಯ ಸಚಿವ ಅಶೋಕ್​ಗೂ ತಟ್ಟಿದ ಪೋಸ್ಟರ್ ಬಿಸಿ: ಪದ್ಮನಾಭನಗರದಲ್ಲಿ ರಾತ್ರೋರಾತ್ರಿ ಕಾಣಿಸಿಕೊಂಡ ಪೋಸ್ಟರ್​ಗಳು

ಪದ್ಮನಾಭನಗರದ ವಿವಿಧೆಡೆ ನಿನ್ನೆ ತಡರಾತ್ರಿಯಿಂದೀಚೆಗೆ ಪೋಸ್ಟರ್​ಗಳು ಕಾಣಿಸಿಕೊಂಡಿವೆ.

ಕಂದಾಯ ಸಚಿವ ಅಶೋಕ್​ಗೂ ತಟ್ಟಿದ ಪೋಸ್ಟರ್ ಬಿಸಿ: ಪದ್ಮನಾಭನಗರದಲ್ಲಿ ರಾತ್ರೋರಾತ್ರಿ ಕಾಣಿಸಿಕೊಂಡ ಪೋಸ್ಟರ್​ಗಳು
ಕಂದಾಯ ಸಚಿವ ಆರ್ ಅಶೋಕ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 25, 2022 | 11:47 AM

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ (R Ashok) ಅವರನ್ನು ವ್ಯಂಗ್ಯಮಾಡುವ ‘ಕೆರೆಗಳನ್ನು ನುಂಗಿದ ಸಾಮ್ರಾಟ ಅಶೋಕ್​’ ಹಾಗೂ ‘ಕಾಣೆಯಾದ ಕೆರೆಗಳನ್ನು ಹುಡುಕಿಕೊಡಿ’ ಪೋಸ್ಟರ್​ಗಳು ಬೆಂಗಳೂರಿನ ಪದ್ಮನಾಭನಗರದಲ್ಲಿ ಕಾಣಿಸಿಕೊಂಡಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ‘ಪೇಸಿಎಂ’ ಪೋಸ್ಟರ್​ಗಳು ನಗರದಲ್ಲಿ ಕಾಣಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಬೆಂಗಳೂರು ಪೊಲೀಸರು ಪೋಸ್ಟರ್ ಅಂಟಿಸುತ್ತಿದ್ದವರನ್ನು ಹುಡುಕಿ ಬಂಧಿಸುತ್ತಿದದ ಹಿನ್ನೆಲೆಯಲ್ಲಿ ಸ್ವತಃ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪೋಸ್ಟರ್​ಗಳನ್ನು ಅಂಟಿಸಿ ಸವಾಲೆಸೆದಿದ್ದರು. ಈ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿಯೂ ‘ಸ್ಕ್ಯಾಮ್ ರಾಮಯ್ಯ’ ಪೋಸ್ಟರ್​ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ವಿಧಾನಸೌಧದಲ್ಲಿಯೂ ಪೋಸ್ಟರ್​ಗಳ ವಿಚಾರ ಸದ್ದು ಮಾಡಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನನ್ನು ಮೊದಲು ಗುರಿಯಾಗಿಸಿದ್ದ ಕಾಂಗ್ರೆಸ್ ನಂತರ ಅಶ್ವತ್ಥ ನಾರಾಯಣ, ಡಾ ಕೆ.ಸುಧಾಕರ ಸೇರಿದಂತೆ ಹಲವು ಹಿರಿಯ ನಾಯಕರನ್ನು ಗುರಿಯಾಗಿಸಿ ಪೋಸ್ಟರ್​ಗಳನ್ನು ಅಂಟಿಸಿತ್ತು. ಇದೀಗ ಕಂದಾಯ ಸಚಿವ ಆರ್​.ಆಶೋಕ್​ ಅವರಿಗೂ ಪೋಸ್ಟರ್​ನ ಬಿಸಿ ಮುಟ್ಟಿದೆ. ಪದ್ಮನಾಭನಗರವು ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಅಶೋಕ್ ಅವರ ಸ್ವಕ್ಷೇತ್ರ. ಪದ್ಮನಾಭನಗರದ ವಿವಿಧೆಡೆ ನಿನ್ನೆ ತಡರಾತ್ರಿಯಿಂದೀಚೆಗೆ ಪೋಸ್ಟರ್​ಗಳು ಕಾಣಿಸಿಕೊಂಡಿವೆ.

ಪೇಸಿಎಂ ಪೋಸ್ಟರ್​ಗೆ ಬಿಜೆಪಿ ತಿರುಗೇಟು

ಕರ್ನಾಟಕದಲ್ಲಿ ‘ಕಾಂಗ್ರೆಸ್ VS ಬಿಜೆಪಿ’ ಪೋಸ್ಟರ್ ಅಭಿಯಾನ ಮುಂದುವರಿದಿದ್ದು, ‘ಪೇ ಸಿಎಂ’ ಪೊಸ್ಟರ್ ಅಭಿಯಾನಕ್ಕೆ ಬಿಜೆಪಿ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಪ್ರಿಯಾಂಕಾ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯದ ಪೋಸ್ಟರ್​ಗಳನ್ನು ಬಿಜೆಪಿ ಹರಿಬಿಟ್ಟಿದೆ. ಕೆಪಿಸಿಸಿ ಎಂದರೆ ಕರ್ನಾಟಕ ಪೊಲಿಟಿಕಲ್ ಕರೆಪ್ಷನ್ ಕಂಪನಿ ಎಂದು ಹೊಸ ವ್ಯಾಖ್ಯಾನ ನೀಡಿದೆ.