ರೇಪಿಸ್ಟ್‌ಗಳು ಕ್ಷಮಾದಾನಕ್ಕೆ ಅರ್ಹರೇ ಅಲ್ಲ -ರಾಷ್ಟ್ರಪತಿ ಕೋವಿಂದ್
ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳು ದೇಶವೇ ಬೆಚ್ಚಿ ಬೀಳುವಂತೆ ಮಾಡಿವೆ. ರೇಪಿಸ್ಟ್‌ಗಳು ಕ್ಷಮಾದಾನಕ್ಕೆ ಅರ್ಹರೇ ಅಲ್ಲ ಅಂತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ. ಫೋಕ್ಸೋ ಕಾಯ್ದೆಯಡಿಯ ಅಪರಾಧಿಗಳು ಕ್ಷಮಾದಾನ ಅರ್ಜಿಗೆ ಅರ್ಹರಲ್ಲ. ಆದ್ರೆ ಕಾನೂನನ್ನ ಪಾಲಿಸಲೇಬೇಕು ಅಂತಾನೂ ರಾಷ್ಟ್ರಪತಿ ಹೇಳಿದ್ದಾರೆ. ಪ್ರಾಣ ಪಣಕ್ಕಿಟ್ಟು ಜೀವ ಉಳಿಸಿದ: ಥಾಣೆ ರೈಲ್ವೆ ನಿಲ್ದಾಣದಲ್ಲಿ ಆರ್‌ಫಿಎಫ್ ಕಾನ್ಸ್‌ಟೆಬಲ್ ಅನಿಲ್ ಕುಮಾರ್ ಪ್ರಾಣ ಪಣಕ್ಕಿಟ್ಟು ರೈಲ್ವೆ ಹಳಿ ದಾಟುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ. ರೈಲು ಬರುತ್ತಿದ್ದಾಗ ಹಳಿ ಮೇಲೆ ಹೋಗುತ್ತಿದ್ದ ವ್ಯಕ್ತಿಯನ್ನ ಪ್ಲಾಟ್‌ಫಾರ್ಮ್ […]
ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳು ದೇಶವೇ ಬೆಚ್ಚಿ ಬೀಳುವಂತೆ ಮಾಡಿವೆ. ರೇಪಿಸ್ಟ್‌ಗಳು ಕ್ಷಮಾದಾನಕ್ಕೆ ಅರ್ಹರೇ ಅಲ್ಲ ಅಂತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ. ಫೋಕ್ಸೋ ಕಾಯ್ದೆಯಡಿಯ ಅಪರಾಧಿಗಳು ಕ್ಷಮಾದಾನ ಅರ್ಜಿಗೆ ಅರ್ಹರಲ್ಲ. ಆದ್ರೆ ಕಾನೂನನ್ನ ಪಾಲಿಸಲೇಬೇಕು ಅಂತಾನೂ ರಾಷ್ಟ್ರಪತಿ ಹೇಳಿದ್ದಾರೆ.
ಪ್ರಾಣ ಪಣಕ್ಕಿಟ್ಟು ಜೀವ ಉಳಿಸಿದ: ಥಾಣೆ ರೈಲ್ವೆ ನಿಲ್ದಾಣದಲ್ಲಿ ಆರ್‌ಫಿಎಫ್ ಕಾನ್ಸ್‌ಟೆಬಲ್ ಅನಿಲ್ ಕುಮಾರ್ ಪ್ರಾಣ ಪಣಕ್ಕಿಟ್ಟು ರೈಲ್ವೆ ಹಳಿ ದಾಟುತ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ. ರೈಲು ಬರುತ್ತಿದ್ದಾಗ ಹಳಿ ಮೇಲೆ ಹೋಗುತ್ತಿದ್ದ ವ್ಯಕ್ತಿಯನ್ನ ಪ್ಲಾಟ್‌ಫಾರ್ಮ್ ಮೇಲೆ ಎಳೆದ ಅನಿಲ್ ಪಕ್ಕದ ಹಳಿಗೆ ಜಿಗಿದಿದ್ದಾರೆ. ಆ ಮೂಲಕ ಓರ್ವನ ಜೀವ ಉಳಿಸಿದ್ದಾರೆ. ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದು, ಕಾನ್ಸ್‌ಟೆಬಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೃತ್ಯದ ಮೂಲಕ ಟ್ರಾಫಿಕ್ ಕಂಟ್ರೋಲ್: ಛತ್ತೀಸ್‌ಗಢ್‌ದ ರಾಯ್‌ಪುರದ ಟ್ರಾಫಿಕ್ ಪೊಲೀಸ್ ಮೊಹಮ್ಮದ್ ತನ್ನ ವಿಭಿನ್ನ ನೃತ್ಯದ ಮೊಲಕ ಟ್ರಾಫಿಕ್ ಕಂಟ್ರೋಲ್ ಮಾಡುತ್ತಾ ಗಮನಸೆಳೆಯುತ್ತಿದ್ದಾರೆ. ಸಿಗ್ನಲ್‌ನಲ್ಲಿ ನಿಂತ ವಾಹನಗಳಿಗೆ ಡ್ಯಾನ್ಸ್ ಮಾಡುತ್ತಾ ಮಾರ್ಗ ಸೂಚಿಸುತ್ತಿದ್ದಾರೆ. ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು,ನಾನು ನನ್ನ ಕರ್ತವ್ಯವನ್ನು ಆನಂದಿಸುತ್ತೇನೆ ಎಂದಿದ್ದಾರೆ.
63,493 ಕಾರುಗಳನ್ನು ಹಿಂದಕ್ಕೆ: ಸಿಯಾಜ್, ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಮಾದರಿಯ 63,493 ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಕಾರಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಮೋಟಾರ್ ಜನರೇಟರ್ ಘಟಕದಲ್ಲಿ ದೋಷಯುಕ್ತ ಭಾಗ ಸರಿಪಡಿಸಲು ವಾಪಸ್ ಪಡೆಯುತ್ತಿದೆ.