AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ತನ್ನದೇ ಕುಟುಂಬದ 8 ಸದಸ್ಯರನ್ನು ಕೊಲ್ಲಲು ಗೋಧಿ ಹಿಟ್ಟಿಗೆ ವಿಷ ಬೆರೆಸಿದ್ದ ಮಹಿಳೆ

ತನ್ನದೇ ಕುಟುಂಬದವರನ್ನು ಕೊಲ್ಲಲು ಮಹಿಳೆಯೊಬ್ಬಳು ಗೋಧಿ ಹಿಟ್ಟಿಗೆ ವಿಷ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಸಂಚು ಸಕಾಲದಲ್ಲಿ ಬಯಲಾಗಿದ್ದು, ಎಲ್ಲಾ ಜೀವಗಳು ಉಳಿದಿವೆ, ಮಹಿಳೆ ಮತ್ತೆ ಆಕೆಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲಕಿಯಾ ಬಾಜಾ ಖುರ್ರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ರಿಜೇಶ್ ಕುಮಾರ್ ಅವರ ಪತ್ನಿ ಮಾಲತಿದೇವಿ ನಿರಂತರ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದಾಗಿ ತನ್ನ ತಂದೆ ಜತೆ ಸೇರಿ ಯೋಜನೆ ರೂಪಿಸಿದ್ದಳು.

ಉತ್ತರ ಪ್ರದೇಶ: ತನ್ನದೇ ಕುಟುಂಬದ 8 ಸದಸ್ಯರನ್ನು ಕೊಲ್ಲಲು ಗೋಧಿ ಹಿಟ್ಟಿಗೆ ವಿಷ ಬೆರೆಸಿದ್ದ ಮಹಿಳೆ
ಮಾಲತಿ ದೇವಿ
ನಯನಾ ರಾಜೀವ್
|

Updated on: Jul 22, 2025 | 2:57 PM

Share

ಕೌಶಾಂಬಿ, ಜುಲೈ 22: ಮಹಿಳೆಯೊಬ್ಬಳು ತನ್ನದೇ ಕುಟುಂಬದ 8 ಸದಸ್ಯರನ್ನು ಕೊಲ್ಲಲು ಗೋಧಿ ಹಿಟ್ಟಿನಲ್ಲಿ ವಿಷ(Poison) ಬೆರೆಸಿದ್ದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಘಟನೆ ನಡೆದಿದೆ. ಮಹಿಳೆ ಎಲ್ಲರನ್ನೂ ಕೊಲ್ಲುವ ಉದ್ದೇಶದಿಂದ ತಂದೆ ಜತೆಗೆ ಸೇರಿ ಈ ಕೃತ್ಯವೆಸಗಿದ್ದಳು. ಗೋಧಿ ಹಿಟ್ಟಿಗೆ ಸಲ್ಫೋಸ್ ಬೆರೆಸಿದ್ದಳು.

ಈ ಸಂಚು ಸಕಾಲದಲ್ಲಿ ಬಯಲಾಗಿದ್ದು, ಎಲ್ಲರ ಜೀವ ಉಳಿದಿವೆ, ಮಹಿಳೆ ಮತ್ತೆ ಆಕೆಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲಕಿಯಾ ಬಾಜಾ ಖುರ್ರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ರಿಜೇಶ್ ಕುಮಾರ್ ಅವರ ಪತ್ನಿ ಮಾಲತಿದೇವಿ ನಿರಂತರ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದಾಗಿ ತನ್ನ ತಂದೆ ಜತೆ ಸೇರಿ ಯೋಜನೆ ರೂಪಿಸಿದ್ದಳು.

ಮಾಲತಿ ತನ್ನ ಅತ್ತಿಗೆ ಮಂಜು ದೇವಿ ಜತೆಗೆ ದೀರ್ಘಕಾಲದಿಂದ ನಡೆಯುತ್ತಿದ್ದ ಜಗಳದಿಂದ ಅಸಮಾಧಾನಗೊಂಡು ಇಡೀ ಕುಟುಂಬವನ್ನೇ ನಿರ್ಮೂಲನೆ ಮಾಡಲು ಮುಂದಾಗಿದ್ದಳು. ಮಂಜು ದೇವಿ ಆಹಾರ ಸಿದ್ಧಪಡಿಸಲು ಹೋದಾಗ ಗೋಧಿ ಹಿಟ್ಟಿನಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದಾಗ ಮಾಲತಿಯಯ ಉದ್ದೇಶ ಏನಿರಬಹುದು ಎಂಬುದು ತಿಳಿಯಿತು. ಕೂಡಲೇ ಕುಟುಂಬದ ಎಲ್ಲಾ ಸದಸ್ಯರಿಗೂ ಮಾಹಿತಿ ನೀಡಲಾಗಿತ್ತು. ವಿಚಾರಣೆ ಸಮಯದಲ್ಲಿ ಆಕೆ ಸಲ್ಫೋಸ್ ಮಿಶ್ರಣ ಮಾಡಿರುವುದು ಹೌದೆಂದು ಒಪ್ಪಿಕೊಂಡಿದ್ದಾಳೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದರು. ಮಾಲತಿ ದೇವಿ ಮತ್ತು ಆಕೆಯ ತಂದೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಮತ್ತೊಂದು ಘಟನೆ ಅವಳಿಗೆ ಸಾಯಬೇಕೆನಿಸಿತ್ತು, ಅದಕ್ಕೆ ಕೊಂದೆ; ಮಾಜಿ ಪ್ರೇಯಸಿಗೆ ವಿಷ ಹಾಕಿ ಸಾಯಿಸಿದ ಬಳಿಕ ತಪ್ಪೊಪ್ಪಿಕೊಂಡ ಯುವಕ!

ಮಾಜಿ ಲಿವ್ ಇನ್ ರಿಲೇಷನ್​​ ಸಂಗಾತಿಗೆ ವಿಷ ಹಾಕಿ ಕೊಂದಿರುವ ಯುವಕನೊಬ್ಬ ‘ಅವಳು ಸಾಯಲು ಬಯಸಿದ್ದಳು, ಅದಕ್ಕೆ ನಾನೇ ಅವಳನ್ನು ಕೊಂದೆ’ ಎಂದು ಹೇಳುವ ಮೂಲಕ ಪೊಲೀಸರಿಗೇ ಶಾಕ್ ನೀಡಿದ್ದಾನೆ.

ಉತ್ತರ ಪ್ರದೇಶದ ಲಲಿತಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಮಾಜಿ ಪ್ರೇಯಸಿಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿದ ನಂತರ ಯುವಕ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಯುವತಿ ರಾಣಿಯ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಪೊಲೀಸರಿಗೆ ಅವಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ಆ ಯುವತಿಯ ಕೈಯಲ್ಲಿ ‘ಆರ್-ಜಗದೀಶ್’ ಎಂದು ಬರೆದಿದ್ದರಿಂದ ಅದು ಮಹಿಳೆಯನ್ನು ಗುರುತಿಸಲು ಸಹಾಯ ಮಾಡಿತು.

ಉತ್ತರ ಪ್ರದೇಶದ ಲಲಿತಪುರದಲ್ಲಿ ಒಬ್ಬ ವ್ಯಕ್ತಿ ತನ್ನ ಮಾಜಿ ಸಂಗಾತಿಯ ವಿಘಟನೆಯ ನಂತರ ಆಕೆಗೆ ವಿಷಪ್ರಾಶನ ಮಾಡಿ ಕೊಂದನು. ಆರೋಪಿ ಜಗದೀಶ್ ರಾಯ್ಕ್ವಾರ್ ತನ್ನ ಪ್ರಿಯತಮೆಯನ್ನು ಹೇಗೆ ಕೊಲ್ಲುವುದು ಮತ್ತು ನಂತರ ಆಕೆಗೆ ವಿಷ ಕುಡಿಸಿ ದೇಹವನ್ನು ನದಿಗೆ ಎಸೆಯುವುದು ಎಂದು ಗೂಗಲ್‌ನಲ್ಲಿ ಹುಡುಕಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ