ಮಹಾರಾಷ್ಟ್ರ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಆಕೆಯ ಪತಿ ಶಾಸಕ ರವಿ ರಾಣಾ ಬಂಧನವಾಗಿದೆ. ಸದ್ಯ ಅವರು ಪ್ರತ್ಯೆಕ ಜೈಲಿನಲ್ಲಿ ಇದ್ದಾರೆ. ಇವರಿಬ್ಬರೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆಯ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿದೆ. ಈ ದಂಪತಿ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಇದೆಲ್ಲದರ ಮಧ್ಯೆ ನವನೀತ್ ರಾಣಾ ಪೊಲೀಸರ ವಿರುದ್ಧ ಆರೋಪ ಮಾಡಿದ್ದರು. ಪೊಲೀಸರು ತನ್ನನ್ನು ಬಂಧಿಸಿ ಕರೆದುಕೊಂಡು ಹೋದ ಬಳಿಕ ನನ್ನೊಂದು ಅಮಾನವೀಯವಾಗಿ ವರ್ತಿಸಿದ್ದಾರೆ. ಹೀಗಾಗಿ ಪೊಲೀಸ್ ಮುಖ್ಯಸ್ಥ ಸಂಜಯ್ ಪಾಂಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದ್ದರು. ನವನೀತ್ ರಾಣಾ ಆರೋಪ ಮಾಡಿದ ಬೆನ್ನಲ್ಲೇ, ಈ ಬಗ್ಗೆ ವರದಿ ನೀಡುವಂತೆ ಮಹಾರಾಷ್ಟ್ರ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
ಆದರೆ ನವನೀತ್ ರಾಣಾ ಆರೋಪವನ್ನು ಮುಂಬೈ ಪೊಲೀಸ್ ಮುಖ್ಯಸ್ಥ ಸಂಜಯ್ ಪಾಂಡೆ ಖಂಡಿಸಿದ್ದಾರೆ. ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಅವರು, ನಾನೇನೂ ಹೇಳುವುದಿಲ್ಲ. ಎಲ್ಲವನ್ನೂ ಈ ವಿಡಿಯೋವೇ ಹೇಳುತ್ತದೆ ಎಂದಿದ್ದಾರೆ. ಅದರಲ್ಲಿ ನವನೀತ್ ರಾಣಾ ಮತ್ತು ಆಕೆಯ ಪತಿ ಇಬ್ಬರೂ ಪೊಲೀಸ್ ಸ್ಟೇಶನ್ನಲ್ಲಿ ಆರಾಮಾಗಿ ಕುಳಿತು, ಟೀ ಕುಡಿಯುತ್ತಿರುವ ದೃಶ್ಯವಿದೆ.
Do we say anything more pic.twitter.com/GuUxldBKD5
— Sanjay Pandey (@sanjayp_1) April 26, 2022
ಹಾಗೇ, ಹನುಮಾನ್ ಚಾಲೀಸಾ ಪಠಿಸುತ್ತೇನೆ ಎಂದು ಹೇಳಿದ್ದಕ್ಕೆ ಈ ರಾಜಕಾರಣಿ ದಂಪತಿಯನ್ನು ಬಂಧಿಸಿದ್ದಕ್ಕೆ ಬಿಜೆಪಿ ಕೂಡ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಸುದ್ದಿಗೋಷ್ಠಿ ನಡೆಸಿ, ಹನುಮಾನ್ ಚಾಲೀಸಾ ಪಠಿಸುವುದು ಅಷ್ಟು ದೊಡ್ಡ ಅಪರಾಧವಾಗಿದ್ದರೆ, ದೇಶದ್ರೋಹವಾಗಿದ್ದರೆ, ನಮ್ಮೆಲ್ಲರನ್ನೂ ಬಂಧಿಸಲಿ ಎಂದು ಹೇಳಿದ್ದರು. ಇನ್ನೊಂದೆಡೆ ಎನ್ಸಿಪಿ ನಾಯಕಿ ಫಹ್ಮಿದಾ ಹಸನ್ ಖಾನ್ ಪ್ರಧಾನಿ ಅಮಿತ್ ಶಾ ಅವರಿಗೆ ಪತ್ರ ಬರೆದು, ತಾನು ಪ್ರಧಾನಿ ನಿವಾಸದ ಎದುರು ನಮಾಜ್ ಮಾಡಲು, ಹನುಮಾನ್ ಚಾಲೀಸಾ ಪಠಿಸಲು ಬಯಸುತ್ತೇನೆ ಅನುಮತಿ ಕೊಡಿ ಎಂದು ಕೇಳಿದ್ದಾರೆ.
ಇದನ್ನೂ ಓದಿ: Heatwave: ಭಾರತದಲ್ಲಿ ತೀವ್ರಗೊಳ್ಳುತ್ತಿದೆ ಉಷ್ಣ ಅಲೆ; ತಾಪಮಾನ ಏರಿಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ
Published On - 4:27 pm, Tue, 26 April 22