Delhi Chalo: ಗಡಿಯಲ್ಲಿ ಹೆದ್ದಾರಿಗೆ ಅಳವಡಿಸಿದ್ದ ಮೊಳೆಗಳು ತೆರವು
ಗಾಜಿಪುರ ಗಡಿಯಲ್ಲಿ ಹೊಡೆಯಲಾದ ಮೊಳೆಗಳನ್ನು ಪೊಲೀಸ್ ಸಿಬ್ಬಂದಿ ತೆರವುಗೊಳಿಸಿದೆ.

ಅಳವಡಿಸಿದ್ದ ಮೊಳೆ ತೆರವು
ದೆಹಲಿ: ದೆಹಲಿಯ ಹೆದ್ದಾರಿಗೆ ಮೊಳೆ ಅಳವಡಿಸಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆ ಇದೀಗ ಗಾಜಿಪುರ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ಮೊಳೆಗಳ ತೆರವುಗೊಳಿಸಿದ್ದಾರೆ.
ಜನವರಿ 26ರಂದು ನಡೆದ ಹಿಂಸಾಚಾರದಿಂದ ಕೇಂದ್ರ ಸರ್ಕಾರ ಗಡಿ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾರಿಕೇಡ್ ಮೂಲಕ ರಸ್ತೆಗಳನ್ನು ಮುಚ್ಚಿದೆ. ಇದರ ಜೊತೆಗೆ ರಸ್ತೆಗಳಿಗೆ ಮೊಳೆಗಳನ್ನು ಹೊಡೆಯಲಾಗಿತ್ತು. ಈ ಕುರಿತು ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಪೊಲೀಸ್ ಸಿಬ್ಬಂದಿ ಅಳವಡಿಸಿದ್ದ ಮೊಳೆಯನ್ನು ತೆರವುಗೊಳಿಸಿದ್ದಾರೆ.



