ಪೆಟ್ರೋಲ್​ ಹಣ ಕೇಳಿದ್ದಕ್ಕೆ ಬಂಕ್ ಸಿಬ್ಬಂದಿಗೆ ಕಾರಿನಿಂದ ಗುದ್ದಿದ ಪೊಲೀಸ್ ಅಧಿಕಾರಿ

|

Updated on: Jul 16, 2024 | 2:56 PM

ಕೆಲವು ಜನರು ಮಾನವೀಯತೆ, ಕರ್ತವ್ಯವನ್ನು ಮರೆತು ವರ್ತಿಸುತ್ತಾರೆ. ಕಾರಿಗೆ ಪೆಟ್ರೋಲ್ ತುಂಬಿಸಿದ ಮೇಲೆ ಹಣ ಕೊಡಲೇಬೇಕು, ಆದರೆ ಹಣ ಕೇಳಿದ ಬಂಕ್ ಸಿಬ್ಬಂದಿಗೆ ಕಾರು ಗುದ್ದಿಸಿದ ಪೊಲೀಸ್​ ಅಧಿಕಾರಿಯನ್ನು ಅಮಾನತುಗೊಳಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

ಪೆಟ್ರೋಲ್​ ಹಣ ಕೇಳಿದ್ದಕ್ಕೆ ಬಂಕ್ ಸಿಬ್ಬಂದಿಗೆ ಕಾರಿನಿಂದ ಗುದ್ದಿದ ಪೊಲೀಸ್ ಅಧಿಕಾರಿ
ಕಾರು
Follow us on

ಕಾರಿಗೆ ಫುಲ್​ ಟ್ಯಾಂಕ್ ಪೆಟ್ರೋಲ್​ ತುಂಬಿಸಿ ಹಣ ಕೊಡದೆ ಹೊರಟಿದ್ದ ಪೊಲೀಸ್​ ಅಧಿಕಾರಿಯನ್ನು ಪ್ರಶ್ನಿಸಿದ್ದಕ್ಕೆ ಬಂಕ್​ ಸಿಬ್ಬಂದಿಗೆ ಕಾರನ್ನು ಗುದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಣ್ಣೂರಿನಲ್ಲಿ ಘಟನೆ ನಡೆದಿದೆ, ಎಎಸ್​ಐ ಕೆ ಸಂತೋಷ್​ ಕುಮಾರ್ ಎಂಬುವವರು ಪೆಟ್ರೋಲ್ ಬಂಕ್ ನೌಕರ ಅನಿಲ್​ಗೆ ಡಿಕ್ಕಿ ಹೊಡೆದಿದ್ದಾರೆ, ಅದರ ಪರಿಣಾಮ ಅನಿಲ್​ ಕಾರಿನ ಬಾನೆಟ್​ ಮೇಲೆ ಬಿದ್ದಿದ್ದಾರೆ ಅದನ್ನು ಲೆಕ್ಕಿಸದೆ ಕಿಲೋಮೀಟರ್​ಗಳವರೆಗೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ, ಕೆ ಸಂತೋಷ್​ ಎಂಬುವವರು ತಮ್ಮ ಕಾರಿಗೆ ಪೆಟ್ರೋಲ್ ತುಂಬಿಸಿ ಬಳಿಕ ಹಣ ಕೊಡಲು ನಿರಾಕರಿಸಿದ್ದರು.ಸಂತೋಷ್ ಕುಮಾರ್ ಅವರನ್ನು ಹೊರಹೋಗದಂತೆ ತಡೆಯಲು ಅನಿಲ್ ಪ್ರಯತ್ನಿಸುತ್ತಿದ್ದಂತೆ, ಪೊಲೀಸ್ ಅಧಿಕಾರಿ ಕಾರು ಗುದ್ದಿಸಿದ್ದಾರೆ. ಕ್ಯಾಮರಾದಲ್ಲಿ ಈ ಘಟನೆ ಸೆರೆಯಾಗಿದೆ.

ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆದ ನಂತರ ಎಎಸ್‌ಐ ಸಂತೋಷ್ ಕುಮಾರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಕೈಗಳಿಗೆ ಗಾಯವಾಗಿರುವ ಅನಿಲ್ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತಷ್ಟು ಓದಿ: Video Viral: BMW ಕಾರು ಓಡಿಸಿದ ಅಪ್ರಾಪ್ತ ಮಗ, ಕಾರಿನ ಬಾನೆಟ್ ಮೇಲೆ ಮಲಗಿ ಅಪ್ಪನ ಸವಾರಿ

ಕಣ್ಣೂರು ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್ ಅವರು ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:25 am, Tue, 16 July 24