ನನ್ನ ರಕ್ಷಣೆಗೆಂದು ನಿಯೋಜಿಸಲ್ಪಟ್ಟ ಪೊಲೀಸರೇ ನನ್ನ ಮೇಲೆ ಗುಂಡು ಹಾರಿಸಬಹುದು; ಅಪನಂಬಿಕೆ ವ್ಯಕ್ತಪಡಿಸಿದ ಆಜಮ್​ ಖಾನ್​ ಪುತ್ರ

ನನ್ನ ರಕ್ಷಣೆಗೆಂದು ನಿಯೋಜಿಸಲ್ಪಟ್ಟ ಪೊಲೀಸರೇ ನನ್ನ ಮೇಲೆ ಗುಂಡು ಹಾರಿಸಬಹುದು; ಅಪನಂಬಿಕೆ ವ್ಯಕ್ತಪಡಿಸಿದ ಆಜಮ್​ ಖಾನ್​ ಪುತ್ರ
ಆಜಮ್​ ಖಾನ್​ ಮತ್ತು ಅಬ್ದುಲ್ಲಾ ಆಜಮ್​ ಖಾನ್​

ಎಸ್​ಪಿ ನಾಯಕ ಆಜಮ್​ ಖಾನ್ ಸರ್ಕಾರಿ ಭೂಕಬಳಿಕೆ ಆರೋಪದಡಿ​ 2020ರ ಫೆಬ್ರವರಿಯಿಂದಲೂ ಜೈಲಿನಲ್ಲಿ ಇದ್ದಾರೆ. ಆಜಮ್​ ಖಾನ್ ಅಷ್ಟೇ ಅಲ್ಲ, ಅವರೊಂದಿಗೆ ಪುತ್ರ ಅಬ್ದುಲ್ಲಾ ಆಜಮ್​ ಖಾನ್ ಮತ್ತು ಪತ್ನಿ ತಜೀನ್​ ಫಾತಮಾ ಕೂಡ ಜೈಲಿಗೆ ಹೋಗಿದ್ದರು. 

TV9kannada Web Team

| Edited By: Lakshmi Hegde

Jan 29, 2022 | 4:04 PM

ಉತ್ತರಪ್ರದೇಶದಲ್ಲಿ ಚುನಾವಣಾ (Uttar Pradesh Assembly Election 2022) ಕಾವು ಏರುತ್ತಿದೆ. ಬಿಜೆಪಿ, ಸಮಾಜವಾದಿ ಪಕ್ಷಗಳಂತೂ ನೇರ ಹಣಾಹಣಿಯಲ್ಲಿ ತೊಡಗಿವೆ. ಈ ಮಧ್ಯೆ ಸಮಾಜವಾದಿ ಪಕ್ಷದ ನಾಯಕ, ಸದ್ಯ ಜೈಲಿನಲ್ಲಿರುವ ಆಜಮ್ ಖಾನ್ (SP Leader Azam Khan) ಪುತ್ರ ಅಬ್ದುಲ್ಲಾ ಆಜಮ್​ ಖಾನ್​ (Abdullah Azam Khan) ಹೇಳಿಕೆಯೊಂದನ್ನು ನೀಡಿ, ನನಗಂತೂ ಯಾರ ಮೇಲೆಯೂ ನಂಬಿಕೆಯೆಂಬುದೇ ಇಲ್ಲ. ನನ್ನ ರಕ್ಷಣೆಗೆ ಎಂದು ನಿಯೋಜಿಸಲ್ಪಟ್ಟ ಪೊಲೀಸರೇ ನನ್ನ ಮೇಲೆ ಗುಂಡು ಹಾರಿಸದರೂ ಆಶ್ಚರ್ಯವಿಲ್ಲ ಎಂದಿದ್ದಾರೆ. ಇನ್ನು ಉತ್ತರಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಫೆ.10ರಿಂದ ಪ್ರಾರಂಭವಾಗಲಿದ್ದು, ಮಾರ್ಚ್​ 7ರವರೆಗೆ ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್​ 10ರಂದು ಮತ ಎಣಿಕೆ ಇದೆ. 

ಇಂದು ಮಾಧ್ಯಮಗಳ ಮೂಲಕ ಉತ್ತರ ಪ್ರದೇಶ ಬಿಜೆಪಿಯನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ಲಾ ಆಜಮ್ ಖಾನ್​, ನಿಮ್ಮೊಂದಿಗೆ ಎರಡು ಸರ್ಕಾರವಿದೆ. ನಿಮ್ಮ ರಕ್ಷಣೆಗೆ ಪೊಲೀಸ್ ಅಧಿಕಾರಿಗಳು ಇದ್ದಾರೆ. ಆದರೆ ನಾನು ಒಂಟಿ. ನನಗೆ ಯಾರೂ ಇಲ್ಲ. ನಾನೂ ಕೂಡ ಯಾರನ್ನೂ ನಂಬುವುದೂ ಇಲ್ಲ. ನನ್ನೊಂದಿಗೆ ಇರುವ ಪೊಲೀಸ್​ ಸಿಬ್ಬಂದಿ ಕೂಡ ನನ್ನ ಮೇಲೆ ಗುಂಡು ಹಾರಿಸಬಹುದು. ಯಾಕೆಂದರೆ ಈ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಿದ್ದು ನನ್ನ ರಕ್ಷಣೆಗಾಗಿ ಅಲ್ಲ, ನನ್ನ ಬಗ್ಗೆ ಬೇಹುಗಾರಿಕೆ ಮಾಡಲು ಇದ್ದಾರೆ ಇವರೆಲ್ಲ ಎಂದು ಹೇಳಿದರು.

ಜಾಮೀನು ಪಡೆದು ಹೊರಗಿದ್ದಾರೆ ಎಸ್​ಪಿ ನಾಯಕ ಆಜಮ್​ ಖಾನ್ ಸರ್ಕಾರಿ ಭೂಕಬಳಿಕೆ ಆರೋಪದಡಿ​ 2020ರ ಫೆಬ್ರವರಿಯಿಂದಲೂ ಜೈಲಿನಲ್ಲಿ ಇದ್ದಾರೆ. ಆಜಮ್​ ಖಾನ್ ಅಷ್ಟೇ ಅಲ್ಲ, ಅವರೊಂದಿಗೆ ಪುತ್ರ ಅಬ್ದುಲ್ಲಾ ಆಜಮ್​ ಖಾನ್ ಮತ್ತು ಪತ್ನಿ ತಜೀನ್​ ಫಾತಮಾ ಕೂಡ ಜೈಲಿಗೆ ಹೋಗಿದ್ದರು.  ನಂತರ ಅಬ್ದುಲ್ಲಾ ಮತ್ತು ತಜೀನ್​ಗೆ ಜಾಮೀನು ಸಿಕ್ಕಿ, ಇವರಿಬ್ಬರೂ ಬಿಡುಗಡೆಯಾಗಿದ್ದಾರೆ.  ಆದರೆ ಆಜಮ್​ ಖಾನ್​ ಇನ್ನೂ ಜೈಲಿನಲ್ಲಿಯೇ ಇದ್ದರೂ ಕೂಡ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಜೈಲಿನಿಂದ ಹೊರಬಂದಿದ್ದ ಅಬ್ದುಲ್ಲಾ ಆಗಲೂ ಕೂಡ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ನನ್ನ ತಂದೆ ವಿರುದ್ಧ ಯೋಗಿ ಸರ್ಕಾರ ಬೇಕೆಂತಲೇ ಪ್ರಕರಣ ದಾಖಲಿಸಿದೆ. ಉದ್ದೇಶಪೂರ್ವಕವಾಗಿಯೇ ಜಾಮೀನು ಕೂಡ ನಿರಾಕರಣೆ ಆಗುತ್ತಿದೆ. ಇಂಥದ್ದೇ ಉಳಿದ ಪ್ರಕರಣಗಳ ಆರೋಪಿಗಳು ನಿರೀಕ್ಷಣಾ ಜಾಮೀನು ಕೂಡ  ಪಡೆದಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಇನ್ನು ಅಬ್ದುಲ್ಲಾ ಮತ್ತು ಅವರ ತಾಯಿ ತಜೀನ್​ ಫಾತಮಾ ಇಬ್ಬರೂ ಕೂಡ ರಾಮಪುರ ಜಿಲ್ಲೆಯ ಸೂರ್​ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಸೂಪರ್ ಸ್ಮ್ಯಾಶ್​ನಲ್ಲಿ ಸಿಎಸ್​ಕೆ ಮಾಜಿ ಸ್ಪಿನ್ನರ್ ಸಿಡಿಲಬ್ಬರ: ಚಾಂಪಿಯನ್ ಪಟ್ಟಕ್ಕೇರಿದ ತಂಡ

Follow us on

Related Stories

Most Read Stories

Click on your DTH Provider to Add TV9 Kannada