ಸೂಪರ್ ಸ್ಮ್ಯಾಶ್​ನಲ್ಲಿ ಸಿಎಸ್​ಕೆ ಮಾಜಿ ಸ್ಪಿನ್ನರ್ ಸಿಡಿಲಬ್ಬರ: ಚಾಂಪಿಯನ್ ಪಟ್ಟಕ್ಕೇರಿದ ತಂಡ

ಸೂಪರ್ ಸ್ಮ್ಯಾಶ್​ನಲ್ಲಿ ಸಿಎಸ್​ಕೆ ಮಾಜಿ ಸ್ಪಿನ್ನರ್ ಸಿಡಿಲಬ್ಬರ: ಚಾಂಪಿಯನ್ ಪಟ್ಟಕ್ಕೇರಿದ ತಂಡ
Mitchell Santner

Mitchell Santner: ಐಪಿಎಲ್​ನಲ್ಲಿ ಸಿಎಸ್​ಕೆ ಪರ 6 ಪಂದ್ಯಗಳನ್ನು ಆಡಿರುವ ಮಿಚೆಲ್ ಸ್ಯಾಂಟ್ನರ್ 6 ವಿಕೆಟ್ ಕಬಳಿಸಿದ್ದಾರೆ. ಕಳೆದ ಮೂರು ಸೀಸನ್​ಗಳಿಂದ ಸಿಎಸ್​ಕೆ ಭಾಗವಾಗಿದ್ದರೂ ಸ್ಯಾಂಟ್ನರ್​ ತಂಡದಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ.

TV9kannada Web Team

| Edited By: Zahir PY

Jan 29, 2022 | 3:40 PM

ಐಪಿಎಲ್ 2022 ರ ಮೆಗಾ ಹರಾಜಿನ (Ipl 2022 Auction) ತಯಾರಿಗೆ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈ ತಲುಪಿದ್ದಾರೆ . ಫೆಬ್ರವರಿ 12-13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಸಲು ನಿರ್ಧರಿಸಲಾಗಿದ್ದು, ಅದಕ್ಕೂ ಮುನ್ನ ಸಿಎಸ್​ಕೆ ತಂಡವು ಬಿಡ್ಡಿಂಗ್ ಕಾರ್ಯತಂತ್ರಗಳನ್ನು ಮಾಡಿಕೊಳ್ಳಲು ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ. ಸದ್ಯ ಸಿಎಸ್​ಕೆ ತಂಡದಲ್ಲಿ ರವೀಂದ್ರ ಜಡೇಜಾ, ಧೋನಿ ಹಾಗೂ ರುತುರಾಜ್ ಗಾಯಕ್ವಾಡ್ ಇದ್ದು, ಹೀಗಾಗಿ ಹೊಸ ತಂಡವನ್ನು ಕಟ್ಟಲು ಯಾವ ಆಟಗಾರನನ್ನು ಆಯ್ಕೆ ಮಾಡಬೇಕು, ಯಾರಿಗಾಗಿ ಹೆಚ್ಚು ಬಿಡ್ ಮಾಡಬೇಕೆಂಬ ಪ್ಲ್ಯಾನ್​ನಲ್ಲಿದೆ ಚೆನ್ನೈ ಸೂಪರ್ ಕಿಂಗ್ಸ್ (CSK)​. ಇದರ ಬೆನ್ನಲ್ಲೇ ಅತ್ತ ಸಿಎಸ್​ಕೆ ತಂಡದ ಮಾಜಿ ಆಟಗಾರ ಮಿಚೆಲ್ ಸ್ಯಾಂಟ್ನರ್ ( Mitchell Santner) ನ್ಯೂಜಿಲೆಂಡ್‌ನಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ.

ನ್ಯೂಜಿಲೆಂಡ್​ನ T20 ಲೀಗ್ ಸೂಪರ್ ಸ್ಮ್ಯಾಶ್‌ನ ಫೈನಲ್​ ಪಂದ್ಯದಲ್ಲಿ ಕ್ಯಾಂಟರ್​ಬರಿ ತಂಡದ ವಿರುದ್ದ ಸ್ಯಾಂಟ್ನರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ನಾರ್ದನ್ ಡಿಸ್ಟ್ರಿಕ್ಟ್ ಪರ ಆಡುತ್ತಿರುವ ಮಿಚೆಲ್ ಸ್ಯಾಂಟ್ನರ್ ಕೇವಲ 40 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 92 ರನ್ ಬಾರಿಸಿದ್ದಾರೆ. 230 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಸ್ಯಾಂಟ್ನರ್ ಸಿಕ್ಸ್​ ಫೋರ್​ಗಳ ಮೂಲಕವೇ ಕೇವಲ 13 ಎಸೆತಗಳಲ್ಲಿ 70 ರನ್ ಗಳಿಸಿರುವುದು ವಿಶೇಷ. ಪರಿಣಾಮ ನಾರ್ಥನ್ ಡಿಸ್ಟ್ರಿಕ್ಟ್​ ತಂಡವು 20 ಓವರ್‌ಗಳಲ್ಲಿ 217 ರನ್‌ ಕಲೆಹಾಕಿತು.

218 ರನ್​ಗಳ ಬೃಹತ್ ಗುರಿ ಬೆನ್ನತ್ತಿ ಕ್ಯಾಂಟರ್​ಬರಿ ತಂಡವು 18.5 ಓವರ್​ಗಳಲ್ಲಿ 161 ರನ್​ಗೆ ಆಲೌಟ್​ ಆದರು. ಇದರೊಂದಿಗೆ 56 ರನ್​ಗಳ ಜಯದೊಂದಿಗೆ ನಾರ್ಥನ್ ಡಿಸ್ಟ್ರಿಕ್ಟ್​ ಸೂಪರ್ ಸ್ಮ್ಯಾಶ್​ನ ಚಾಂಪಿಯನ್​ ಪಟ್ಟಕ್ಕೇರಿತು.

ಐಪಿಎಲ್​ನಲ್ಲಿ ಸಿಎಸ್​ಕೆ ಪರ 6 ಪಂದ್ಯಗಳನ್ನು ಆಡಿರುವ ಮಿಚೆಲ್ ಸ್ಯಾಂಟ್ನರ್ 6 ವಿಕೆಟ್ ಕಬಳಿಸಿದ್ದಾರೆ. ಕಳೆದ ಮೂರು ಸೀಸನ್​ಗಳಿಂದ ಸಿಎಸ್​ಕೆ ಭಾಗವಾಗಿದ್ದರೂ ಸ್ಯಾಂಟ್ನರ್​ ತಂಡದಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಇತ್ತ ನ್ಯೂಜಿಲೆಂಡ್​ನ ಟಿ20 ತಂಡದ ಖಾಯಂ ಸದಸ್ಯರಾಗಿರುವ ಸ್ಯಾಂಟ್ನರ್ ಬ್ಯಾಟಿಂಗ್​ನಲ್ಲೂ ಮಿಂಚಬಲ್ಲೆ ಎಂಬುದನ್ನು ಇದೀಗ ಸೂಪರ್​ಸ್ಮ್ಯಾಶ್ ಲೀಗ್ ಮೂಲಕ ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಪ್ರಸ್ತುತ ಫಾರ್ಮ್ ಅನ್ನು ಪರಿಗಣಿಸಿ ಐಪಿಎಲ್​ನ ಬಹುತೇಕ ತಂಡಗಳು ಎಡಗೈ ಸ್ಪಿನ್ ಆಲ್​ರೌಂಡರ್​ನ ಖರೀದಿಗೆ ಪೈಪೋಟಿ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Mitchell Santner hit 92 runs in Super Smash Final ahead of IPL 2022 mega auction)

Follow us on

Related Stories

Most Read Stories

Click on your DTH Provider to Add TV9 Kannada