ತೃತೀಯಲಿಂಗಿಗಳು ನಮ್ಮ ದೇಶದ ಅನೇಕ ಸರ್ಕಾರಿ, ಸರ್ಕಾರೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸೇನೆಯಲ್ಲಿ ತೃತೀಯಲಿಂಗಿಗಳು ಸೇವೆ ಸಲ್ಲಿಸುತ್ತಿಲ್ಲ. ಭಾರತೀಯ ಸೇನೆಗಳಲ್ಲಿ ತೃತೀಯಲಿಂಗಿಗಳು ಸೇವೆ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದೆ. ಭಾರತವು ಕೂಡ ಇತರ ದೇಶಗಳಂತೆ ತೃತೀಯಲಿಂಗಿಗಳಿಗೆ ಸೇನೆಯಲ್ಲಿ ಅವಕಾಶವನ್ನು ನೀಡಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಒಂದು ಅಧ್ಯಯನವನ್ನು ಮಾಡಿ, ವರದಿ ನೀಡಲು ತಂಡವೊಂದನ್ನು ರಚನೆ ಮಾಡಲಾಗಿದೆ. ಈಗಾಗಲೇ ಅಮೆರಿಕ, ಬ್ರಿಟನ್ ಮತ್ತು ಇಸ್ರೇಲ್ ಸೇರಿದಂತೆ ವಿಶ್ವದ 19 ದೇಶಗಳ ಸೇನೆಗಳಲ್ಲಿ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಲಾಗಿದೆ. ಇದೀಗ ಭಾರತದಲ್ಲೂ ಈ ಕ್ರಮವನ್ನು ಅನುಸರಿಸಲು ಆಸಕ್ತಿ ತೋರಿಸಿದೆ. ಇನ್ನು ಟ್ರಾನ್ಸ್‌ಜೆಂಡರ್‌ಗಳನ್ನು ಸೇನೆಯಲ್ಲಿ ಸೇರಿಸಿಕೊಂಡಿದ ಮೊದಲ ದೇಶ ನೆದರ್ಲ್ಯಾಂಡ್ಸ್. 1974ರಲ್ಲಿ ವಿಶ್ವದಲ್ಲೇ ತೃತೀಯಲಿಂಗಿಗಳನ್ನು ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ ದೇಶ ಎಂಬ ಪ್ರಶಂಸೆಗೆ ಪಾತ್ರವಾಗಿತ್ತು.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಭಾರತೀಯ ಸಶಸ್ತ್ರ ಪಡೆಗಳು ಮೊದಲು ತೃತೀಯಲಿಂಗಿಗಳನ್ನು ಸೇನೆಯಲ್ಲಿ ನೇಮಕ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ತೃತೀಯಲಿಂಗಿಗಳು ಸೇನೆಯಲ್ಲಿ ಹೇಗೆ ಕೆಲಸ ಮಾಡುತ್ತಾರೆ. ಸೇನಾ ಯೋಜನೆಗಳ ಚಟುವಟಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಒಂದು ಆಧ್ಯಯನ ತಂಡವನ್ನು ರಚನೆ ಮಾಡಲಾಗಿದೆ. ಈ ಅಧ್ಯಯನ ಒಂದು ವೇಳೆ ಯಶಸ್ವಿಯಾದರೆ, ದೇಶದಲ್ಲಿ ಸಮಾನತೆ ಸಾಧಿಸುವಲ್ಲಿ ದೊಡ್ಡ ಹೆಜ್ಜೆ ಇಟ್ಟಂತೆ. ಈ ನೇಮಕಾತಿಯಿಂದ ಆಗುವ ಸಮಸ್ಯೆಗಳು, ಸೇನೆಯ ಮುಂದೆ ಬರುವ ಸವಾಲುಗಳು ಹಾಗೂ ಇತರ ದೇಶಗಳಲ್ಲಿ ಎಷ್ಟು ತೃತೀಯಲಿಂಗಿಗಳನ್ನು ನೇಮಕಾ ಮಾಡಿಕೊಳ್ಳಲಾಗುತ್ತಿದೆ. ಅವರ ಕಾರ್ಯವೈಖರಿ ಹೇಗಿದೆ ಎಂಬುದನ್ನು ಕೂಡ ತಿಳಿದುಕೊಳ್ಳಲಾವುದು.
ಇಲ್ಲಿಯವರೆಗೆ ಭಾರತ ಸೇನೆಯ ತನ್ನ ಯಾವ ವಿಭಾಗಕ್ಕೂ ತೃತೀಯಲಿಂಗಿಗಳು ಆಯ್ಕೆ ಮಾಡಿಲ್ಲ. ಆದರೆ ತೃತೀಯಲಿಂಗಿಗಳ ಆಯ್ಕೆ ಬಗ್ಗೆ ಅನೇಕ ಸಲಹೆಗಳು ಸೇನೆಗೆ ಬಂದಿದೆ. ಒಂದು ವೇಳೆ ಸೇನೆಗೆ ಇವರ ಆಯ್ಕೆಯಾದರೆ, ಸೇನೆಯ ಕೆಲವೊಂದು ಕ್ರಮಗಳನ್ನು ಅನುಸರಿಸಲೇಬೇಕು. ಈ ಕ್ರಮಗಳ ಬಗ್ಗೆ ವರದಿಗಳು ತಿಳಿಸಿರುವಂತೆ ತೃತೀಯಲಿಂಗಿಗಳಿಗೆ ಇತರ ಸೇನಾ ಸಿಬ್ಬಂದಿಗಳಿಗೆ ನೀಡಿದ ಸೌಲಭ್ಯಗಳನ್ನೇ ನೀಡಲಾಗುವುದು. ತರಬೇತಿಯಲ್ಲಿ ಯಾವುದೇ ರಿಯಾಯಿತಿ ಇಲ್ಲ. ಹಾಗೂ ಸೇನೆ ಹಾಕುವ ವಿವಿಧ ರೀತಿಯ ಪೋಸ್ಟಿಂಗ್‌ಗಳಲ್ಲಿ ಕೆಲಸ ಮಾಡಲೇಬೇಕಾಗುತ್ತದೆ. ಜತೆಗೆ ಸೇನೆ ಸೂಚಿಸಿದ ಶಿಸ್ತಿನ ಕ್ರಮಗಳನ್ನು ಕೂಡ ಇವರು ಪಾಲಿಸಬೇಕಾಗುತ್ತದೆ.
ಭಾರತೀಯ ನೌಕಾಪಡೆಯು ಈ ಹಿಂದೆ ಮನೀಶ್ ಕುಮಾರ್ ಗಿರಿ ಎಂಬ ನಾವಿಕ ಸಾಬಿ ಗಿರಿಯಾಗಿ ಲಿಂಗ ಬದಲಾಯಿಸಿಕೊಂಡ ನಂತರ ಸೇನೆ ಅವರನ್ನು 2017ರಲ್ಲಿ ವಜಾಗೊಳಿಸಿತ್ತು. ಮನೀಶ್ ಕುಮಾರ್ ಗಿರಿ ಅವರು ರಜೆಯಲ್ಲಿ ಹೋಗಿದ್ದಾಗ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವಿಚಾರವನ್ನು ಅವರು ಸೇನೆಗೆ ತಿಳಿಸಿಲ್ಲ. ಹಾಗೂ ಈ ಚಿಕಿತ್ಸೆಗಾಗಿ 20 ದಿನಗಳ ಕಾಲ ಸೇವೆಗೆ ಗೈರಾಗಿದ್ದರು. ಜತೆಗೆ ಇದರಿಂದ ಮಾನಸಿಕ ಖಿನ್ನತೆ ಒಳಲಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು. ಇದೀಗ ಈ ಘಟನೆಯ ನಂತರ ಸೇನೆ ತೃತೀಯಲಿಂಗಿಗಳನ್ನು ಸೇನೆಯಲ್ಲಿ ನೇಮಕಾ ಮಾಡಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ತೃತೀಯಲಿಂಗಿಗಳಿಗೆ ಉಚಿತ ಆರೋಗ್ಯ ಶಿಬಿರ
ಫಸ್ಟ್ ಪೋಸ್ಟ್‌ನ ವರದಿಯ ಪ್ರಕಾರ, 2020ರಲ್ಲಿ, ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಎಸ್‌ಎಸ್‌ಬಿ ಸಹಾಯಕ ಕಮಾಂಡೆಂಟ್‌ನ ಆಫೀಸರ್ ಕೇಡರ್ ಹುದ್ದೆಗೆ ಟ್ರಾನ್ಸ್‌ಜೆಂಡರ್‌ಗಳನ್ನು ನೇಮಿಸಿಕೊಳ್ಳಲು ಬಗ್ಗೆ ಈ ಹಿಂದೆ ಕೇಂದ್ರ ಸರ್ಕಾರವು ಹೇಳಿತ್ತು.
ಇದರ ಜತೆಗೆ 2015ರಲ್ಲಿ ತಮಿಳುನಾಡು ದೇಶದ ಮೊದಲ ತೃತೀಯಲಿಂಗಿಗಳ ಪೊಲೀಸ್ ಅಧಿಕಾರಿಯನ್ನು ನೇಮಿಸಿತು. ಅದೇ ಸಮಯದಲ್ಲಿ, ಛತ್ತೀಸ್‌ಗಢ ಕೂಡ ಈ ಕ್ರಮವನ್ನು ಅನುಸರಿಸಿತ್ತು. ಇದೀಗ ಸೇನೆಯಲ್ಲೂ ಅವರನ್ನು ನೇಮಕಾ ಮಾಡುವ ಯೋಚನೆಯನ್ನು ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ