AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Transgender: ಬೆಂಗಳೂರಿನಲ್ಲಿ ತೃತೀಯಲಿಂಗಿಗಳಿಗೆ ಉಚಿತ ಆರೋಗ್ಯ ಶಿಬಿರ

ಬೆಂಗಳೂರಿನ ಜೀವಾ ಫೌಂಡೇಶನ್‌ನಲ್ಲಿ ನಡೆದ ಈ ಕಾರ್ಯಕ್ರಮವು ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಕಷ್ಟವಾಗುವ ಸಮುದಾಯಕ್ಕೆ ಹಾಗೂ ಹೆಚ್ಚು ಅಗತ್ಯವಿರುವವರಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

Transgender: ಬೆಂಗಳೂರಿನಲ್ಲಿ ತೃತೀಯಲಿಂಗಿಗಳಿಗೆ ಉಚಿತ ಆರೋಗ್ಯ ಶಿಬಿರ
ಉಚಿತ ಶಿಬಿರದ ಚಿತ್ರImage Credit source: deccanherald
ಆಯೇಷಾ ಬಾನು
|

Updated on: Jun 28, 2023 | 6:54 AM

Share

ಬೆಂಗಳೂರು: ಸಮಾಜದಲ್ಲಿ ತೃತೀಯಲಿಂಗಿ(Transgender)  ಸಮುದಾಯದವರಿಗೆ ಉತ್ತಮ ಸ್ಥಾನಮಾನವಿಲ್ಲ. ಅವರನ್ನು ಕೀಳಾಗಿ ಕಾಣಲಾಗುತ್ತೆ. ಹೀಗಾಗಿ ತೃತೀಯಲಿಂಗಿಗಳನ್ನು ಬೆಂಬಲಿಸಲು ಹಾಘೂ ಸಾಮಾಜದಲ್ಲಿ ಅವರಿಗೂ ಸ್ಥಾನ ಇದೆ ಎಂದು ಸೂಚಿಸುವ ಪ್ರಯತ್ನದ ಸಲುವಾಗಿ ಸಾಧು ವಾಸ್ವಾನಿ ಮಿಷನ್‌ನ(Sadhu Vaswani Mission) ಯುವ ವಿಭಾಗದ ಬ್ರಿಡ್ಜ್ ಬಿಲ್ಡರ್ಸ್ ಬೆಂಗಳೂರು(Bridge Builders Bangalore), ಕೇರ್ ಆನ್ ಕಾಲ್(Care on Call) ಸಹಯೋಗದೊಂದಿಗೆ ಸೋಮವಾರ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿತ್ತು.

ಬೆಂಗಳೂರಿನ ಜೀವಾ ಫೌಂಡೇಶನ್‌ನಲ್ಲಿ ನಡೆದ ಈ ಕಾರ್ಯಕ್ರಮವು ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಕಷ್ಟವಾಗುವ ಸಮುದಾಯಕ್ಕೆ ಹಾಗೂ ಹೆಚ್ಚು ಅಗತ್ಯವಿರುವವರಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ಜೀವಾ ಸಂಸ್ಥೆಯ ಕಾರ್ಯಕರ್ತೆ ಮತ್ತು ನಿರ್ದೇಶಕಿಯಾಗಿರುವ ಉಮಾ ಮಾತನಾಡಿ, “ಟ್ರಾನ್ಸ್ಜೆಂಡರ್ ಸಮುದಾಯದವರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳು ಅನೇಕ ಸಮಸ್ಯೆ, ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಸುರಕ್ಷಿತ ಮತ್ತು ಬೆಂಬಲಿತ ವಾತಾವರಣದಲ್ಲಿ ನಾವು ಅವರಿಗೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದ್ದೇವೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯೆ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ವಿಭಾಗದ ಸ್ಪರ್ಧೆಗಳಲ್ಲಿ ತೃತೀಯ ಲಿಂಗಿ ಅಥ್ಲೆಟಿಕ್ಸ್​ಗಳಿಗೆ ಅವಕಾಶವಿಲ್ಲ -ಸೆಬಾಸ್ಟಿಯನ್ ಕೋ

ಈ ಶಿಬಿರದ ವೈದ್ಯರಲ್ಲಿ ಒಬ್ಬರಾದ ಡಾ.ರಿತಿಶಾ ಜೇಮ್ಸ್ ಮಾತನಾಡಿ, ತೃತೀಯಲಿಂಗಿ ಸಮುದಾಯವು ಎದುರಿಸುತ್ತಿರುವ ಆರೋಗ್ಯ ಅಸಮಾನತೆಗಳನ್ನು ಪರಿಹರಿಸಲು ಆರೋಗ್ಯ ಶಿಬಿರವು ಸಹಾಯ ಮಾಡುತ್ತದೆ ಎಂದರು.

ಸಂಪೂರ್ಣ ರಕ್ತದ ಎಣಿಕೆ, RBS, HbA1c, ಒಟ್ಟು ಕೊಲೆಸ್ಟ್ರಾಲ್, AST ALT, ಕ್ರಿಯೇಟಿನೈನ್, ಮೂತ್ರ ಪರೀಕ್ಷೆಯಂತಹ ಅಗತ್ಯ ಪರೀಕ್ಷೆಗಳನ್ನು ಶಿಬಿರಕ್ಕೆ ಬಂದ ತೃತೀಯಲಿಂಗಿಗಳಿಗೆ ಮಾಡಲಾಗುತ್ತೆ. ಬಳಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅವರ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಚಿಕಿತ್ಸೆ ನೀಡಲಾಗುತ್ತೆ ಎಂದು ವೈದ್ಯರೊಬ್ಬರು ತಿಳಿಸಿದರು.

“ಈ ಆರೋಗ್ಯ ಶಿಬಿರವು ಹೆಚ್ಚು ಅಂತರ್ಗತ ಸಮಾಜವನ್ನು ರಚಿಸುವ ಒಂದು ಸಣ್ಣ ಹೆಜ್ಜೆಯಾಗಿದೆ” ಎಂದು ಶಿಬಿರದ ಆಯೋಜಕರಲ್ಲೊಬ್ಬರಾದ ಡಾ.ನಿತ್ಯ ಹೇಳಿದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!