AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದವಸ ಧಾನ್ಯಗಳು, ತರಕಾರಿ ಬೆಲೆ ಏರಿಕೆಗೆ ಅಸಲಿ ಕಾರಣಗಳೇನು? ಇಲ್ಲಿದೆ ನೋಡಿ ವಿವರ

ದವಸ ಧಾನ್ಯಗಳು ಹಾಗೂ ತರಕಾರಿ ಬೆಲೆ ಏರಿಕೆಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ನಡುವೆ ಆರೋಪ-ಪ್ರತ್ಯಾರೋಪ, ಚರ್ಚೆಗಳು ನಡೆಯುತ್ತಿವೆ. ಹಾಗಾದ್ರೆ, ಬೆಲೆ ಏರಿಕೆ ಅಸಲಿ ಕಾರಣಗಳೇನು ಎನ್ನುವುದು ಇಲ್ಲಿದೆ ನೋಡಿ.

ದವಸ ಧಾನ್ಯಗಳು, ತರಕಾರಿ ಬೆಲೆ ಏರಿಕೆಗೆ ಅಸಲಿ ಕಾರಣಗಳೇನು? ಇಲ್ಲಿದೆ ನೋಡಿ ವಿವರ
ರಮೇಶ್ ಬಿ. ಜವಳಗೇರಾ
|

Updated on: Jun 28, 2023 | 7:42 AM

Share

ಬೆಂಗಳೂರು: ಕರ್ನಾಟಕದ (Karnataka) ಜನ ಒಂದು ಕಡೆ ಗ್ಯಾರಂಟಿ ಖುಷಿಯಲ್ಲಿದ್ದರೆ ಮತ್ತೊಂದೆಡೆ ಬೆಲೆ ಏರಿಕೆ ಬರೆ ಶುರುವಾಗಿದೆ. ತರಕಾರಿ(vegetable), ದಿನಸಿ ಪದಾರ್ಥಗಳ(Grocery Stores )ಬೆಲೆ ದಿಢೀರ್ (Prices hike) ಗಗನಕ್ಕೇರಿದೆ. ಇದರಿಂದ ಬೆಲೆ ಹೆಚ್ಚಾಗಿದ್ದರೂ ಅನಿವಾರ್ಯವಾಗಿ ಹೊಟ್ಟೆ ತುಂಬಿಸಿಕೊಳ್ಳಲು ಜೀವನ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಗೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ(BJP) ಹಾಗೂ ಆಡಳಿತರೂಢ ಕಾಂಗ್ರೆಸ್(Congress) ಪಕ್ಷದ ಕಾರ್ಯಕರ್ತರ ನಡುವೆ ಬೆಲೆ ಬೆಲೆ ಏರಿಕೆ ವಿಚಾರವಾಗಿ ಪರ-ವಿರೋಧಗಳ ಚರ್ಚೆಗಳು ಆಗುತ್ತಿವೆ. ಗ್ಯಾರಂಟಿಗೆ ಹಣ ಹೊಂದಿಸುವ ಸಲುವಾಗಿ ಬೆಲೆ ಏರಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಇದಕ್ಕೆ ಕೈ ಕಾರ್ಯಕರ್ತರು, ಇಷ್ಟು ದಿನ ಕೇಂದ್ರ ಸರ್ಕಾರ ಗ್ಯಾಸ್, ಪೆಟ್ರೋಲ್​-ಡೀಸೆಲ್ ಬೆಲೆ ಹೆಚ್ಚಿಸಿದಾಗ ಎಲ್ಲಿ ಮಲಗಿದ್ರಿ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದ್ರೆ, ದವಸ ಧಾನ್ಯಗಳು ಹಾಗೂ ತರಕಾರಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳು ಏನು? ಎನ್ನುವುದು ಈ ಕೆಳಗಿನಂತಿವೆ ನೋಡಿ.

ಇದನ್ನೂ ಓದಿ: Tomato Price: ಕರ್ನಾಟಕದಲ್ಲಿ ದಶಕ ಬಾರಿಸಿದ ಟೊಮ್ಯಾಟೋ ದರ, ಇದಕ್ಕೆ ಕಾರಣ ಏನು?

ದಿನಸಿ ಪದಾರ್ಥಗಳ ಬೆಲೆ ಏರಿಕೆಗೆ ಕಾರಣಗಳು

ಈ ಬಾರಿ ಮುಂಗಾರು ಜುಲೈ ಮೊದಲ ವಾರದಲ್ಲೇ ಕರ್ನಾಟಕಕ್ಕೆ ಆಗಮಿಸಬೇಕಿತ್ತು. ಆದ್ರೆ, ಮಳೆ ಈ ಬಾರಿ ನಿಗದಿತ ಸಮಯಕ್ಕೆ ಬಂದಿಲ್ಲ. ಹೀಗಾಗಿ ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ರೈತರು ಪ್ರತಿ ಬಾರಿ ಜೂನ್ ಆರಂಭದಲ್ಲೇ ಎಲ್ಲಾ ಬೆಳೆಗಳು ಹಾಗೂ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದರು. ಈ ಬಾರಿ ಮುಂಗಾರು ಕೈ ಕೊಟ್ಟ ಕಾರಣ ಮಾರಾಟ ಸ್ವಲ್ಪ ತಡ ಮಾಡುತ್ತಿದ್ದಾರೆ. ಹಂತ ಹಂತವಾಗಿ ಮಾರಾಟವನ್ನು ಮಾಡುತ್ತಿದ್ದಾರೆ. ಜೊತೆಗೆ ದೇಶದ ಎಲ್ಲಾ ರಾಜ್ಯಗಳಲ್ಲೂ ಡಿಮ್ಯಾಂಡ್ ಹೆಚ್ಚಾಗಿದೆ. ಭಾರತ ಹೆಚ್ಚಾಗಿ ಆಫ್ರಿಕಾ ದೇಶಗಳಿಂದ 30 % ಬೇಳೆ ಆಮದು ಮಾಡಿಕೊಳ್ಳುತ್ತೆ. ಆದರೂ ಈಗ ಭಾರತದಲ್ಲಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಮ್ಮಲ್ಲಿ ಈಗ ಕೊರತೆ ಎದುರಾಗಿದೆ.

ಜೊತೆಗೆ ರಾಜ್ಯ ಸರ್ಕಾರ ಅಕ್ಕಿ ಖರೀದಿಗೆ ಹುಡುಕಾಟ ಮಾಡುತ್ತಿದೆ. ಇದರಿಂದಲೂ ಕೆಲ ರಾಜ್ಯಗಳು ಇನ್ನಷ್ಟು ಬೆಲೆ ಹೆಚ್ಚಳದ ನೀರಿಕ್ಷೆಯಲ್ಲಿ ಮಾರಾಟ ಮಾಡುವುದನ್ನು ನಿಧಾನ ಮಾಡುತ್ತಿದ್ದಾರೆ. ಎಂಎನ್​ಸಿ ಕಂಪನಿಗಳು ಕೆಲವೊಂದು ಸ್ಟಾಕ್ ಹೋಲ್ಡ್ ಮಾಡಿರುವ ಅನುಮಾನಗಳು ಸಹ ವ್ಯಕ್ತವಾಗಿವೆ. ಎಪಿಎಂಸಿನಂತೆ ಅವರಿಗೆ ನಿರ್ಬಂಧವಿಲ್ಲ, ಹೀಗಾಗಿ ಸ್ಟಾಕ್ ಹೋಲ್ಡ್ ಆಗಿರಬಹುದು ಎನ್ನಲಾಗಿದೆ. ಹೀಗಾಗಿ ಇನ್ನೊಂದು 2-3 ತಿಂಗಳು ಕಾಲ ಇದೇ ರೀತಿ ಹೆಚ್ಚು ಬೆಲೆ ಇರುವ ಸಾಧ್ಯತೆ ಇದೆ.

ಇದನ್ನೂ ಓದಿ: ತರಕಾರಿ ಕೊಳ್ಳಲಾಗದೆ ಸರ್ಕಾರದ ವಿರುದ್ಧ ಗ್ರಾಹಕರ ಆಕ್ರೋಶ; ಉತ್ತಮ ಬೆಲೆ ಸಿಕ್ಕಿದ್ದಕ್ಕೆ ರೈತರ ಮುಖದಲ್ಲಿ ಮಂದಹಾಸ

ತರಕಾರಿಗಳ ಬೆಲೆ ಏರಿಕೆಗೆ ಕಾರಣವೇನು?

ಇನ್ನು ತರಕಾರಿಗಳ ಬೆಲೆ ಏರಿಕೆಗೂ ಮಳೆ ಕಾರಣವಾಗಿದೆ. ಟೊಮ್ಯಾಟೋ ಹೆಚ್ಚು ಬೆಳೆಯುವುದು ಕೋಲಾರ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತೆ. ಆದ್ರೆ ಈ ಬಾರೀ ರೈತರು ಹೆಚ್ಚು ಬೆಳೆದಿಲ್ಲ. ಕಳೆದ ವರ್ಷ ಬೇಸಿಗೆಯಲ್ಲಿ ಬೆಳೆದಾಗ ಸೂಕ್ತವಾದ ಬೆಲೆ ಸಿಕ್ಕಿರಲಿಲ್ಲ. ಹೀಗಾಗಿ ರೈತರು ಈ ವರ್ಷ ಹೆಚ್ಚು ಬೆಳೆದಿಲ್ಲ. ಇದರ ಜೊತೆಗೆ ತರಕಾರಿ ಚನ್ನೈ, ಆಂಧ್ರ ಪ್ರದೇಶಗಳಲ್ಲೂ ಸಹ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಲೆ ಏರಿಕೆ ಆಗಿದೆ. ಬೆಲೆ ಹೆಚ್ಚಳವಾಗಿದ್ದರಿಂದ ಈಗ ಮತ್ತೆ ರೈತರು ತರಕಾರಿಗಳನ್ನ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಇದರಿಂದ ಇನ್ನು 20 ರಿಂದ 30 ದಿನದಲ್ಲಿ ತರಕಾರಿ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ