AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತರಕಾರಿ ಕೊಳ್ಳಲಾಗದೆ ಸರ್ಕಾರದ ವಿರುದ್ಧ ಗ್ರಾಹಕರ ಆಕ್ರೋಶ; ಉತ್ತಮ ಬೆಲೆ ಸಿಕ್ಕಿದ್ದಕ್ಕೆ ರೈತರ ಮುಖದಲ್ಲಿ ಮಂದಹಾಸ

ಗ್ಯಾರೆಂಟಿ ಯೋಜನೆಗಳ ಖುಷಿಯಲ್ಲಿರುವಾಗ್ಲೆ ಜನರಿಗೆ ದರ ಏರಿಕೆ ಬಿಸಿ ತಟ್ಟಿದೆ. ಯಶವಂತಪುರ ಎಪಿಎಮ್​ಸಿ ಮಾರುಕಟ್ಟೆಯಲ್ಲ ತರಕಾರಿಯನ್ನು ಕೇಳೋರೆ ಇಲ್ಲದಂತಾಗಿದೆ. ತರಕಾರಿ ಗಗನಕ್ಕೆರಿರುವ ಹಿನ್ನೆಲೆ ವ್ಯಾಪಾರ ಕಡಿಮೆ ಎಂದು ವ್ಯಾಪರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ತರಕಾರಿ ಕೊಳ್ಳಲಾಗದೆ ಸರ್ಕಾರದ ವಿರುದ್ಧ ಗ್ರಾಹಕರ ಆಕ್ರೋಶ; ಉತ್ತಮ ಬೆಲೆ ಸಿಕ್ಕಿದ್ದಕ್ಕೆ ರೈತರ ಮುಖದಲ್ಲಿ ಮಂದಹಾಸ
ತರಕಾರಿ
ಆಯೇಷಾ ಬಾನು
|

Updated on:Jun 27, 2023 | 12:18 PM

Share

ಬೆಂಗಳೂರು: ಅಡುಗೆಗೆ ಹೆಚ್ಚಾಗಿ ಬಳಸುವ ಟೊಮ್ಯಾಟೋ ಬೆಲೆ(Tomato Rate Hike) ತಲೆ ಸುತ್ತುವಂತಿದೆ. ಕೇವಲ ಒಂದೇ ವಾರದಲ್ಲಿ ತರಕಾರಿ ಬೆಲೆ ದಿಢೀರನೆ ಏರಿಕೆ ಕಂಡಿದ್ದು ಮಾರುಕಟ್ಟೆಗಳಲ್ಲಿ ಕೆಜಿ ಟೊಮ್ಯಾಟೋವನ್ನು 100 ರಿಂದ 120 ರೂ.ಗೆ ಮಾರಾಟವಾಗುತ್ತಿದೆ. ಅದರಲ್ಲೂ ಬಕ್ರೀದ್ ಹಬ್ಬಕ್ಕೇ(Bakrid) ಎರಡು ಮೂರು ದಿನಗಳು ಮಾತ್ರ ಬಾಕಿ ಇದೆ. ಹಬ್ಬದ ಹೊಸ್ತಿಲ್ಲಲಿ ಬೆಲೆ ಏರಿಕೆ ಭಾರೀ ಹೊಡೆತ ಕೊಟ್ಟಿದೆ. ಮಾಂಸದ ಅಡುಗೆ, ಬಿರಿಯಾನಿ, ಪಲಾವ್, ಸಾಂಬಾರು ಹೀಗೆ ಏನೇ ಮಾಡಿದರೂ ಟೊಮ್ಯಾಟೋ ಬಳಸಲೇ ಬೇಕು. ಅಡುಗೆಯ ರುಚಿ ಹೆಚ್ಚಿಸುವುದೇ ತರಕಾರಿಗಳು. ಹೀಗಾಗಿ ಗೃಹಿಣಿಯರೆಲ್ಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗ್ಯಾರೆಂಟಿ ಯೋಜನೆಗಳ ಖುಷಿಯಲ್ಲಿರುವಾಗ್ಲೆ ಜನರಿಗೆ ದರ ಏರಿಕೆ ಬಿಸಿ ತಟ್ಟಿದೆ. ಯಶವಂತಪುರ ಎಪಿಎಮ್​ಸಿ ಮಾರುಕಟ್ಟೆಯಲ್ಲ ತರಕಾರಿಯನ್ನು ಕೇಳೋರೆ ಇಲ್ಲದಂತಾಗಿದೆ. ತರಕಾರಿ ಗಗನಕ್ಕೆರಿರುವ ಹಿನ್ನೆಲೆ ವ್ಯಾಪಾರ ಕಡಿಮೆ ಎಂದು ವ್ಯಾಪರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬಿಟ್ಟಿ ಭಾಗ್ಯದ ಕೃಪೆ. ಹೆಣ್ಣು ಮಕ್ಕಳು ಮನೇಲಿ ಇದ್ರೆ ತಾನೇ ತರಕಾರಿ ತಗೋಳೊಕೆ ಬರೋದು. ಎಲ್ಲ ಬಸ್ ನಲ್ಲಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಹೇಗೆ ಬದುಕಬೇಕು ಎಂದು ಸರ್ಕಾರದ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಗ್ರಾಹಕರ ಆಕ್ರೋಶ

ಇನ್ನು ರಾಯಚೂರು ಜಿಲ್ಲೆಯಲ್ಲೂ ಜನ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ತರಕಾರಿ ರೇಟ್ ದುಪ್ಪಟ್ಟಾದ ಹಿನ್ನೆಲೆ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ರಾಯಚೂರು ನಗರದ ಉಸ್ಮಾನಿಯಾ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕಿಡಿಕಾರಿದ್ದಾರೆ. ಬಸ್​ನಲ್ಲಿ‌ ಹೆಣ್ಮಕ್ಕಳಿಗೆ ಫ್ರೀ. ಗಂಡು ಮಕ್ಕಳಾದ ನಾವೇ ದುಡಿಯಬೇಕು. ನಾವೇ ಕಾಯಿಪಲ್ಲೆ ತರಬೇಕು. ತರಕಾರಿ ಕೊಂಡು ಕೊಳ್ಳೊಕೆ ಆಗ್ತಿಲ್ಲ. ಸಿದ್ದರಾಮಯ್ಯ ಬಂದು ಲಾಭ ಇಲ್ಲ. ಕರೆಂಟ್ ಬಿಲ್ ಜಾಸ್ತಿ ಆಗಿದೆ. ತರಕಾರಿ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಅಕ್ಕಿ ಹಾಕಿದರೇ ಹೇಗೆ? ಕಾಯಿಪಲ್ಲೆನೂ ಬೇಕು ಅಂತ ಸರ್ಕಾರದ ವಿರುದ್ಧ ರಾಕೇಶ್ ಎಂಬ ಗ್ರಾಹಕ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಖುಷಿ ನಡುವೆ ಜನರಿಗೆ ಬೆಲೆ ಏರಿಕೆ ಬರೆ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ತರಕಾರಿ ದರ ವಿವರ ಇಲ್ಲಿದೆ

ಟೊಮ್ಯಾಟೋ ಖರೀದಿಗೆ ಮುಗಿಬಿದ್ದ ವರ್ತಕರು

ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಹೋಲ್ ಸೇಲ್ ದರದಲ್ಲಿ ಖರೀದಿ ಮಾಡಲು ವರ್ತಕರು ಮುಗಿಬಿದ್ದಿದ್ದು, ಬೇಕಾಗುಷ್ಟು ಟೊಮ್ಯಾಟೋ ದೊರೆಯುತ್ತಿಲ್ಲ. ಇದ್ರಿಂದ ರೈತರು ಹೇಳಿದಷ್ಟು ಹಣ ಕೊಟ್ಟು ವರ್ತಕರು ಟೊಮ್ಯಾಟೋ ಖರೀದಿ ಮಾಡ್ತಿದ್ದಾರೆ.

ರೈತರ ಮುಖದಲ್ಲಿ ಮಂದಹಾಸ

ಟೊಮ್ಯಾಟೋ ಬೆಲೆಯಲ್ಲಿ ಭಾರಿ ಏರಿಕೆ ಹಿನ್ನಲೆ ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಯಾವಾಗಲು ಟೊಮ್ಯಾಟೋಗೆ ಬೆಲೆ ಬರಲ್ಲ. ಈ ಭಾರಿ ತುಂಬಾ ಬಿಸಿಲು ಇದೆ. ಬಹುತೇಕ ಕಡೆ ಟೊಮ್ಯಾಟೊಗೆ ಕಾಯಿಲೆ ಬಂದಿದೆ. ನಾಟಿ ಹಂತದಲ್ಲಿ ಟೊಮ್ಯಾಟೋ ಸರಿಯಾಗಿ ಬೆಳೆದಿಲ್ಲ. ಎಲ್ಲಿಯೂ ಟೊಮ್ಯಾಟೋ ತೋಟಗಳು ಕಾಣಿಸ್ತಿಲ್ಲ. 80 ಸಾವಿರ ರೂಪಾಯಿ ಖರ್ಚು ಮಾಡಿ ಒಂದೂವರೆ ಎಕರೆ ಟೊಮ್ಯಾಟೋ ಬೆಳೆದಿದ್ದೇನೆ. ಇಂದು ಒಂದು ಟನ್ ಟೊಮ್ಯಾಟೋ ಮಾರುಕಕಟ್ಟೆಗೆ ತಂದಿದ್ದೇನೆ. 14 ಕೆಜಿಯ ತಲಾ ಬಾಕ್ಸ್ ಗೆ ಸಾವಿರ ರೂಪಾಯಿ ಬೀಟ್ ಆಗಿದೆ. ಟೊಮ್ಯಾಟೋಗೆ ಈಗ ಉತ್ತಮ ಬೆಲೆ ಬಂದಿದೆ. ಟೊಮ್ಯಾಟೋದಿಂದ ಈಗ ಕಾಸು ನೋಡುತ್ತಿದ್ದೇನೆ ಎಂದು ಟಿವಿ9ಗೆ ರೈತ ಸದಾಶಿವ ರೆಡ್ಡಿ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:52 am, Tue, 27 June 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್