ನನ್ನ ಹೆಂಡತಿ ಗರ್ಭಿಣಿ; ಒಂದೇ ಕಾರಣ ನೀಡಿ ಮಹಾಕುಂಭ ಮೇಳದ ಕರ್ತವ್ಯದಿಂದ ರಜೆ ಕೇಳಿದ 700 ಪೊಲೀಸರು

|

Updated on: Dec 19, 2024 | 4:34 PM

ಉತ್ತರ ಪ್ರದೇಶದಲ್ಲಿ ಮಹಾ ಕುಂಭ ಮೇಳದ ತಯಾರಿಗಳು ಬಿರುಸಿನಿಂದ ನಡೆಯುತ್ತಿವೆ. ಆದರೆ, ಮಹಾ ಕುಂಭಮೇಳದ ಭದ್ರತಾ ವ್ಯವಸ್ಥೆಗಳಿಗೆ ಪೊಲೀಸರ ರಜೆಯಿಂದಾಗಿ ಅಡ್ಡಿಯಾಗಿದೆ. ಮಹಾ ಕುಂಭ ಮೇಳದ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ 1,200 ಪೊಲೀಸರು ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 700ಕ್ಕೂ ಹೆಚ್ಚು ಪೊಲೀಸರು ಒಂದೇ ಕಾರಣವನ್ನು ಉಲ್ಲೇಖಿಸಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತ್ನಿಗೆ ಹೆರಿಗೆ ಸಮಯ ಎಂಬ ಕಾರಣ ನೀಡಿ ರಜೆ ಕೇಳಿದ್ದಾರೆ.

ನನ್ನ ಹೆಂಡತಿ ಗರ್ಭಿಣಿ; ಒಂದೇ ಕಾರಣ ನೀಡಿ ಮಹಾಕುಂಭ ಮೇಳದ ಕರ್ತವ್ಯದಿಂದ ರಜೆ ಕೇಳಿದ 700 ಪೊಲೀಸರು
Maha Kumbh Mela
Follow us on

ಪ್ರಯಾಗರಾಜ್: 2025ರ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಕುಂಭ ಮೇಳಕ್ಕೆ ಕೋಟಿಗಟ್ಟಲೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅವರ ಭದ್ರತೆಗಾಗಿ ವಿವಿಧ ರಾಜ್ಯಗಳಿಂದ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಮಹಾಕುಂಭಕ್ಕೆ ಸುಮಾರು 6,000 ಪೊಲೀಸರನ್ನು ನಿಯೋಜಿಸಲಾಗಿದ್ದು, ಅಕ್ಟೋಬರ್ 25ರಿಂದ ನಿಯೋಜನೆ ಆರಂಭವಾಗಿದೆ. ಈ ಪೈಕಿ 1,200 ಸಿಬ್ಬಂದಿ ಡಿಸೆಂಬರ್‌ನಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ರಜೆಗಾಗಿ ಅರ್ಜಿ ಸಲ್ಲಿಸಿದ 1,200 ಪೊಲೀಸರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 700 ಪೊಲೀಸರು ಒಂದೇ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಅವರ ಪತ್ನಿಯ ಹೆರಿಗೆ ಅಥವಾ ಅನಾರೋಗ್ಯದ ಕಾರಣ ನೀಡಿ ರಜೆ ಕೇಳಿದ್ದಾರೆ. ಕೆಲವು ಪೋಲೀಸರ ಪತ್ನಿಗೆ ಜನವರಿಯಲ್ಲಿ ಹೆರಿಗೆಯಾಗಲಿದ್ದು, ಇನ್ನು ಕೆಲವರ ಪತ್ನಿಯರಿಗೆ ಡಿಸೆಂಬರ್‌ನಲ್ಲಿ ಹೆರಿಗೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: PM Modi: ಮಹಾ ಕುಂಭ ಏಕತೆಯ ಮಹಾ ಯಜ್ಞ; ಪ್ರಯಾಗರಾಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ

ಮಹಾಕುಂಭದ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳನ್ನು ಈ ಅಸಾಮಾನ್ಯ ಪ್ರವೃತ್ತಿ ಆಶ್ಚರ್ಯಗೊಳಿಸಿದೆ. ಈ ಪೊಲೀಸರಲ್ಲಿ ಹೆಚ್ಚಿನವರು 2018 ಮತ್ತು 2023ರಲ್ಲಿ ನೇಮಕಗೊಂಡ ಕಾನ್ಸ್‌ಟೇಬಲ್‌ಗಳು. ಉತ್ತರ ಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಗಳ ಪೊಲೀಸರು ನಿಯೋಜನೆಯ ಭಾಗವಾಗಿದ್ದಾರೆ. ಇದಲ್ಲದೇ ಪೋಷಕರ ಅನಾರೋಗ್ಯದ ಹಿನ್ನೆಲೆಯಲ್ಲಿ 250 ಪೊಲೀಸರು ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇತರರು ಸಂಬಂಧಿಕರ ‘ತೆಹ್ರ್ವಿ’ (ಸಾವಿನ ನಂತರ 13ನೇ ದಿನದ ಸಮಾರಂಭ) ಅಥವಾ ಅಂತಹುದೇ ಕಾರ್ಯಕ್ರಮಗಳಿಗೆ ಹಾಜರಾಗುವಂತಹ ವಿವಿಧ ಕಾರಣಗಳಿಗಾಗಿ ರಜೆ ಕೋರಿದ್ದಾರೆ.

ಮಹಾ ಕುಂಭ ಮೇಳ:

ಮಹಾ ಕುಂಭಮೇಳವು ಜನವರಿ 13ರಂದು ಪೌಶ್ ಪೂರ್ಣಿಮಾ ಸ್ನಾನದೊಂದಿಗೆ ಪ್ರಾರಂಭವಾಗುತ್ತದೆ. ಫೆಬ್ರವರಿ 26 ರಂದು ಕುಂಭ ಮೇಳ ಮುಕ್ತಾಯಗೊಳ್ಳುತ್ತದೆ. ಈ ಪ್ರಮುಖ ಕಾರ್ಯಕ್ರಮವು 2019ರ ಕುಂಭ ಮೇಳದಲ್ಲಿ ದಾಖಲಾದ 25 ಕೋಟಿ ಜನರನ್ನು ಮೀರಿಸಿ, 40 ಕೋಟಿ ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ