AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವದೆಹಲಿಯಲ್ಲಿ ಇಂದು ‘ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023′ ಪ್ರದಾನ ಮಾಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನವದೆಹಲಿಯಲ್ಲಿ ಸ್ವಚ್ಛ ಭಾರತ್ ಮಿಷನ್ , ಗ್ರಾಮೀಣ ಜಲ ಜೀವನ್ ಮಿಷನ್ ಮತ್ತು ರಾಷ್ಟ್ರೀಯ ಜಲ ಮಿಷನ್‌ನ ವಿವಿಧ ವರ್ಗಗಳ ಅಡಿಯಲ್ಲಿ ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023ಅನ್ನು ಪ್ರಧಾನ ಮಾಡಲಿದ್ದಾರೆ.

ನವದೆಹಲಿಯಲ್ಲಿ ಇಂದು ‘ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023' ಪ್ರದಾನ ಮಾಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Mar 04, 2023 | 8:58 AM

Share

ನವದೆಹಲಿ:  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಂದು (ಮಾ.4)  ಕೇಂದ್ರ ಜಲಶಕ್ತಿ ಸಚಿವಾಲಯವು ಸ್ವಚ್ಚ ಸೃಜಲ್​ ಶಕ್ತಿ ಸಮ್ಮಾನ್ 2023(Swachh Sujal Shakti Samman 2023) ಅನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗಿಯಾಗಲಿದ್ದಾರೆ. ಈ ಸಮಾರಂಭದಲ್ಲಿ ರಾಷ್ಟ್ರಪತಿ ಸಚಿವಾಲಯದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಅಸಾಧಾರಣ ಕೊಡುಗೆ ನೀಡಿದ ಮಹಿಳೆಯರಿಗೆ ಅಭಿನಂದಿಸಲಿದ್ದಾರೆ.

ಈ ವೇಳೆ ಸ್ವಚ್ಛ ಭಾರತ್ ಮಿಷನ್ – ಗ್ರಾಮೀಣ, ಜಲ ಜೀವನ್ ಮಿಷನ್ ಮತ್ತು ರಾಷ್ಟ್ರೀಯ ಜಲ ಮಿಷನ್ ಯೋಜನೆಗಳ ವಿವಿಧ ವಿಭಾಗಗಳ ಅಡಿಯಲ್ಲಿ ಒಟ್ಟು 18 ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ನೀಡಲಿದ್ದಾರೆ. ನಂತರ ರಾಷ್ಟ್ರಪತಿಯವರು ಜಲ ಶಕ್ತಿ ಅಭಿಯಾನ ಮಳೆನೀರು ಸಂಗ್ರಹಿಸಿ ಅಭಿಯಾನ 2023, ಜಲ ಶಕ್ತಿ ಸೆ ನಾರಿ ಶಕ್ತಿ ಕುರಿತ ವೀಡಿಯೊ ಮತ್ತು ಸ್ಮರಣಾರ್ಥ ಅಂಚೆಚೀಟಿಯನ್ನು ಸಹ ಬಿಡುಗಡೆ ಗೊಳಿಸಲಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಲಿದ್ದಾರೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ

ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ಶ್ರೀ ದೇವುಸಿನ್ಹ್ ಜೆಸಿಂಗ್‌ಭಾಯ್ ಚೌಹಾಣ್, ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಖಾತೆಯ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಕೇಂದ್ರ ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಶ್ರೀ ಬಿಶ್ವೇಶ್ವರ ತುಡು ಮತ್ತು ವಿವಿಧ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳು, ಅಭಿವೃದ್ಧಿ ಪಾಲುದಾರರು, ವಾಶ್ ಕಾರ್ಯಕರ್ತರು, ಸಿ.ಎಸ್‌.ಒ., ವಾಶ್ ವಲಯ ಮುಂತಾದ ಕ್ಷೇತ್ರಗಳ ಮಹಿಳಾ ಪ್ರತಿನಿಧಿಗಳು ಮತ್ತು ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:25 am, Sat, 4 March 23