ನವದೆಹಲಿ: ಮೂವರು ಮಹಿಳೆಯರನ್ನು ಒಳಗೊಂಡಂತೆ ಒಂಬತ್ತು ಹೊಸ ನ್ಯಾಯಾಧೀಶರನ್ನು ಗುರುವಾರ ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಕಾತಿ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಶೀಘ್ರವೇ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಮೂಲಕ 2027ರಲ್ಲಿ ಕರ್ನಾಟಕ ಮೂಲಕ ನ್ಯಾ.ಬಿ.ವಿ.ನಾಗರತ್ನ ಅವರು 2027ರಲ್ಲಿ ಸುಪ್ರೀಂಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ.
ನ್ಯಾ.ಬಿ.ವಿ ನಾಗರತ್ನ ಸೇರಿದಂತೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ, ನ್ಯಾಯಮೂರ್ತಿ ಹೇಮಾ ಕೊಹ್ಲಿ, ನ್ಯಾಯಮೂರ್ತಿ ಸಿ ಟಿ ರವಿಕುಮಾರ್, ನ್ಯಾಯಮೂರ್ತಿ ಎಂ ಎಂ ಸುಂದ್ರೇಶ್ ಮತ್ತು ಹಿರಿಯ ವಕೀಲ ಹಾಗೂ ಮಾಜಿ ಸಾಲಿಸಿರ್ ಜನರಲ್ ಪಿವಿ ನರಸಿಂಹ ಅವರನ್ನು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ. ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್, ಜಿತೇಂದ್ರ ಕುಮಾರ್ ಮಹೇಶ್ವರು ಅವರೂ ಕೂಡಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ನಿರ್ದೇಶಿಸಲಾಗಿದ್ದ ಎಲ್ಲಾ ಒಂಬತ್ತು ಜನರನ್ನು ಸರ್ಕಾರ ಆಯ್ಕೆ ಮಾಡಿದೆ. ಆಯ್ಕೆಯಾಗಿರುವ ನ್ಯಾಯಮೂರ್ತಿಗಳು ಆಗಸ್ಟ್ 31ರಂದು ಪ್ರಮಾಣ ಸ್ವೀಕರಿಸುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್ನಲ್ಲಿ ಒಟ್ಟು 34 ನ್ಯಾಯಮೂರ್ತಿಯ ಸ್ಥಾನವಿದ್ದು, ಒಂಬತ್ತು ಜನ ಹೊಸ ನ್ಯಾಯಮೂರ್ತಿಗಳನ್ನು ನಿರ್ದೇಶಿಸಿರುವುದರಿಂದ ಕೇವಲ ಒಂದು ಸ್ಥಾನ ಖಾಲಿ ಉಳಿದಿದೆ. ಈ ಬಾರಿ ಆಯ್ಕೆ ಮಾಡಿರುವ ಒಂಬತ್ತು ಜನ ನ್ಯಾಯಮೂರ್ತಿಗಳಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿರುವುದು ವಿಶೇಷ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಮೂರನೇ ಅಲೆ ಆತಂಕದ ಹಿನ್ನಲೆ ಕಡ್ಡಾಯ ವ್ಯಾಕ್ಸಿನ್ ಗೆ ಬಿಬಿಎಂಪಿ ಆದೇಶ
(President Gives nod to appointment of justice BV Nagarathna)
Published On - 12:37 pm, Thu, 26 August 21