ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿಯನ್ನು ಭೇಟಿಯಾದ ದ್ರೌಪದಿ ಮುರ್ಮು
ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿದ್ದಾರೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು ಭಾರತ ಆಪರೇಷನ್ ಸಿಂಧೂರ್ ನಡೆಸಿದಾಗ, ಪಾಕಿಸ್ತಾನವು ಭಾರತೀಯ ಮಹಿಳಾ ಪೈಲಟ್ ಅನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿತ್ತು. ನಂತರ ಪಾಕಿಸ್ತಾನವು ಪೈಲಟ್ ಅನ್ನು ಶಿವಾಂಗಿ ಸಿಂಗ್ ಎಂದು ಗುರುತಿಸಿತ್ತು. ಆದಾಗ್ಯೂ, ಭಾರತವು ಒಂದೇ ಒಂಡು ಫೋಟೊ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಎಲ್ಲಾ ಸುಳ್ಳುಗಳನ್ನು ಬಹಿರಂಗಪಡಿಸಿದೆ.

ನವದೆಹಲಿ, ಅಕ್ಟೋಬರ್ 29: ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಭೇಟಿಯಾಗಿದ್ದಾರೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು ಭಾರತ ಆಪರೇಷನ್ ಸಿಂಧೂರ್ ನಡೆಸಿದಾಗ, ಪಾಕಿಸ್ತಾನವು ಭಾರತೀಯ ಮಹಿಳಾ ಪೈಲಟ್ ಅನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿತ್ತು. ನಂತರ ಪಾಕಿಸ್ತಾನವು ಪೈಲಟ್ ಅನ್ನು ಶಿವಾಂಗಿ ಸಿಂಗ್ ಎಂದು ಗುರುತಿಸಿತ್ತು. ಆದಾಗ್ಯೂ, ಭಾರತವು ಒಂದೇ ಒಂಡು ಫೋಟೊ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಎಲ್ಲಾ ಸುಳ್ಳುಗಳನ್ನು ಬಹಿರಂಗಪಡಿಸಿದೆ.
ಬುಧವಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ರಫೇಲ್ ಯುದ್ಧ ವಿಮಾನದಲ್ಲಿ ಕುಳಿತು ಹಾರಾಟ ನಡೆಸುವ ಮೊದಲು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಲ್ಲಿ ಶಿವಾಂಗಿ ಸಿಂಗ್ ಅವರೊಂದಿಗೆ ಫೋಟೊ ತೆಗೆಸಿಕೊಂಡರು. ಶಿವಾಂಗಿ ಸಿಂಗ್ ರಾಷ್ಟ್ರಪತಿ ಮುರ್ಮು ಅವರಿದ್ದ ರಫೇಲ್ ಅನ್ನು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ವಾಯುನೆಲೆಯಲ್ಲಿ ಹಾಜರಿದ್ದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತೊಂದು ವಿಮಾನವನ್ನು ಹಾರಿಸಿದ್ದಾರೆ.
ಶಿವಾಂಗಿ ಸಿಂಗ್ ಯಾರು?
ಉತ್ತರ ಪ್ರದೇಶದ ವಾರಾಣಸಿಯ ಫುಲ್ವಾರಿಯಾದಲ್ಲಿ ಜನಿಸಿದ ಶಿವಾಂಗಿ ಸಿಂಗ್ ತಮ್ಮ ಮನೆಯಿಂದ ದೊಡ್ಡ ಕನಸುಗಳನ್ನು ಕಂಡರು. ಅವರ ತಂದೆ ಕುಮಾರೇಶ್ವರ ಸಿಂಗ್, ತಾಯಿ ಸೀಮಾ ಸಿಂಗ್ ಮತ್ತು ಮೂವರು ಒಡಹುಟ್ಟಿದವರು, ಈ ಕುಟುಂಬದಲ್ಲಿ ದೇಶಭಕ್ತಿ ಆಳವಾಗಿ ಬೇರೂರಿತ್ತು. ಅವರ ತಾಯಿಯ ಅಜ್ಜ ಬಿ.ಎನ್. ಸಿಂಗ್, ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು.
ಮತ್ತಷ್ಟು ಓದಿ: Video: ಫೈಟರ್ ಪ್ಲೇಟ್ ಸೂಟ್ ಧರಿಸಿ ರಫೇಲ್ ಯುದ್ಧ ವಿಮಾನದಲ್ಲಿ ಕುಳಿತು ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು
ಶಿವಾಂಗಿ ವಾರಾಣಸಿಯ ಸೇಂಟ್ ಮೇರಿ ಶಾಲೆ ಮತ್ತು ನಂತರ ಸೇಂಟ್ ಜಾರ್ಜ್ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಯಾವಾಗಲೂ ತನ್ನ ಅಧ್ಯಯನದಲ್ಲಿ ಅಗ್ರಸ್ಥಾನ ಗಳಿಸುತ್ತಿದ್ದ ಶಿವಾಂಗಿ 12 ನೇ ತರಗತಿಯಲ್ಲಿ ಶೇ.89 ಅಂಕಗಳನ್ನು ಗಳಿಸಿದ್ದರು. ಅವರು ಭಗವಾನ್‌ಪುರದ ಸನ್‌ಬೀಮ್ ಮಹಿಳಾ ಕಾಲೇಜಿನಿಂದ ಬಿ.ಎಸ್ಸಿ ಪದವಿಯನ್ನು ಪಡೆದರು. ಮತ್ತು ಅದೇ ಸಮಯದಲ್ಲಿ ಎನ್‌ಸಿಸಿಗೆ ಸೇರುವ ಮೂಲಕ ತಮ್ಮ ಮಿಲಿಟರಿ ಕನಸುಗಳನ್ನು ರೂಪಿಸಿಕೊಳ್ಳಲು ಪ್ರಾರಂಭಿಸಿದರು.
ಅವರು ಕ್ರೀಡಾ ಕ್ಷೇತ್ರದಲ್ಲಿ ಅಷ್ಟೇ ಪ್ರವೀಣರಾಗಿದ್ದರು, ಜಾವೆಲಿನ್ ಥ್ರೋನಲ್ಲಿ ರಾಷ್ಟ್ರೀಯ ಚಿನ್ನದ ಪದಕವನ್ನು ಗೆದ್ದರು. ಅವರು 2013 ರ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಉತ್ತರ ಪ್ರದೇಶ ಎನ್‌ಸಿಸಿ ತುಕಡಿಯನ್ನು ಪ್ರತಿನಿಧಿಸಿದರು. ಒಮ್ಮೆ ತಮ್ಮ ತಾಯಿಯ ಅಜ್ಜನೊಂದಿಗೆ ವಾಯುಪಡೆಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದು. ವಾಯುಪಡೆಯಿಂದ ಅವರು ತುಂಬಾ ಪ್ರಭಾವಿತರಾದರು, ಶಿವಾಂಗಿ ಸಿಂಗ್ ಯುದ್ಧ ವಿಮಾನ ಪೈಲಟ್ ಆಗಲು ನಿರ್ಧರಿಸಿದರು.
President Droupadi Murmu took a sortie in a Rafale aircraft at Air Force Station, Ambala, Haryana. She is the first President of India to take sortie in two fighter aircrafts of the Indian Air Force. Earlier, she took a sortie in Sukhoi 30 MKI in 2023. pic.twitter.com/Rvj1ebaCou
— President of India (@rashtrapatibhvn) October 29, 2025
2015 ರಲ್ಲಿ ಶಿವಾಂಗಿ ಭಾರತೀಯ ವಾಯುಪಡೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಒಂದೂವರೆ ವರ್ಷಗಳ ಕಾಲ ಕಠಿಣ ತರಬೇತಿಯನ್ನು ಪಡೆದರು. 2017 ರಲ್ಲಿ, ಅವರು ದೇಶದ ಮೊದಲ ಐದು ಮಹಿಳಾ ಯುದ್ಧ ವಿಮಾನ ಪೈಲಟ್‌ಗಳ ಐತಿಹಾಸಿಕ ತಂಡದಲ್ಲಿ ಸೇರಿಸಲ್ಪಟ್ಟರು.
ತರಬೇತಿಯ ನಂತರ, ಅವರು MiG-21 ನಂತಹ ಸೂಪರ್‌ಸಾನಿಕ್ ಯುದ್ಧ ವಿಮಾನಗಳನ್ನು ಹಾರಿಸಿದರು. ಈ ಸಮಯದಲ್ಲಿ, ಅವರನ್ನು ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ವಾಯುನೆಲೆಗೆ ನಿಯೋಜಿಸಲಾಯಿತು. ಅಲ್ಲಿ ಅವರು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರೊಂದಿಗೆ ಕೆಲಸ ಮಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




