ಕಾರ್ಗಿಲ್ ದಿವಸ್ ಆಚರಣೆಗಾಗಿ ಜಮ್ಮು-ಕಾಶ್ಮೀರ, ಲಡಾಖ್ಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್
Kargil Vijay Diwas: ಭಾರತ 1999ರ ಜುಲೈ 26ರಂದು ಪಾಕ್ ವಿರುದ್ಧ ಕಾರ್ಗಿಲ್ ಯುದ್ಧವನ್ನು ಗೆದ್ದಿದೆ. ಅಂದು ಭಾರತದ ಅದೆಷ್ಟೋ ವೀರಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಕಾರ್ಗಿಲ್ ದಿವಸ್ ಆಚರಿಸಲಾಗುತ್ತದೆ.
ಜುಲೈ 26ರಂದು ಕಾರ್ಗಿಲ್ ದಿವಸ್ ಆಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಅವರು ಬರುವ ವಾರ ಮೂರು ದಿನಗಳ ಕಾಲ ಜಮ್ಮು-ಕಾಶ್ಮೀರ ಮತ್ತು ಲಡಾಖ್ಗೆ ಭೇಟಿ ಕೊಡಲಿದ್ದಾರೆ. ಅವರು ಜುಲೈ 25ರಂದು ಜಮ್ಮುಕಾಶ್ಮೀರ (Jammu-Kashmir) ಕ್ಕೆ ತೆರಳಿ, ಮರುದಿನ ಕಾರ್ಗಿಲ್ ದಿವಸ್(Kargil Diwas) ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿಯವರು ತಮ್ಮ ಭೇಟಿ ಸಮಯದಲ್ಲಿ ಕಾರ್ಗಿಲ್ ಯುದ್ಧದ ಸ್ಮಾರಕಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ. ಆದರೆ ಅವರ ಪ್ರವಾಸದ ಸಂಪೂರ್ಣ ಯೋಜನೆಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎನ್ನಲಾಗಿದೆ.
ಭಾರತ 1999ರ ಜುಲೈ 26ರಂದು ಪಾಕ್ ವಿರುದ್ಧ ಕಾರ್ಗಿಲ್ ಯುದ್ಧವನ್ನು ಗೆದ್ದಿದೆ. ಅಂದು ಭಾರತದ ಅದೆಷ್ಟೋ ವೀರಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ವಿಜಯದ ಸಂಭ್ರಮ ನೆನಪಿಸಿಕೊಳ್ಳುವ ನಿಮಿತ್ತ ಪ್ರತಿವರ್ಷವೂ ಜುಲೈ 26ರಂದು ಕಾರ್ಗಿಲ್ ದಿವಸ್ ಆಚರಿಸುತ್ತದೆ. ಹಾಗೇ ಈ ಬಾರಿ ಆಪರೇಶನ್ ವಿಜಯ್ (Operation Vijay)ದ 22ನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ.
ಪಾಕಿಸ್ತಾನ ಸೈನಿಕರು ಮತ್ತು ನುಸುಳುಕೋರರಿಂದ ಆಕ್ರಮಿಸಲ್ಪಟ್ಟಿದ್ದ ಕಾರ್ಗಿಲ್ ವಲಯದಲ್ಲಿ ಭಾರತೀಯ ಯೋಧರು ಆಪರೇಶನ್ ವಿಜಯ್ ನಡೆಸಿದ ಬಳಿಕ ಎರಡೂ ದೇಶಗಳ ನಡುವೆ ಯುದ್ಧ ನಡೆದಿತ್ತು. 1999ರ ಮೇ ತಿಂಗಳಿನಿಂದಲೂ 1999ರ ಜುಲೈ 26ರವರೆಗೆ ಯುದ್ಧ ನಡೆದು, ಅಂತಿಮವಾಗಿ ವಿಜಯ ಭಾರತಕ್ಕೆ ದಕ್ಕಿತ್ತು. ಈಗಲೂ ಸಹ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಸದಾ ಕಾಲುಕೆರೆದುಕೊಂಡು ಬರುತ್ತಲೇ ಇರುತ್ತದೆ. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗಿನಿಂದ ಪಾಕ್ ಮತ್ತಷ್ಟು ಕಿಡಿಕಾರುತ್ತಿದೆ.
ಇದನ್ನೂ ಓದಿ: Viral Video: ವಿದೇಶಿ ಮಗುವಿನ ಬಾಯಲ್ಲಿ ನಮಸ್ತೇ ಇಂಡಿಯಾ! ವಿಡಿಯೋ ನೋಡಿ ದೃಷ್ಟಿ ತೆಗೆದ ಭಾರತೀಯರು
President Kovind to visit Jammu Kashmir and Ladakh to celebrate Kargil Diwas
Published On - 2:39 pm, Sun, 18 July 21