ರಾಷ್ಟ್ರಪತಿ ಭಾಷಣದಲ್ಲಿ ಯಾವುದೇ ದೂರದೃಷ್ಟಿ ಇಲ್ಲ, ದೇಶದ ಪ್ರಮುಖ ಸವಾಲುಗಳನ್ನು ಹೇಳಲಿಲ್ಲ: ರಾಹುಲ್ ಗಾಂಧಿ

Parliament Budget Session ದೇಶದಲ್ಲಿ ನಿರುದ್ಯೋಗ ಸಮಸ್ಯೆ 50 ವರ್ಷಗಳಲ್ಲೇ ಅತ್ಯಂತ ಗಂಭೀರವಾಗಿದೆ. ನೀವು ಉದ್ಯೋಗ ನೀಡುವ ಬಗ್ಗೆ ಮಾತನಾಡುತ್ತಿದ್ದೀರಿ, 2021 ರಲ್ಲಿ 3 ಕೋಟಿ ಯುವಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇಂದು ಭಾರತವು 50 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ಎದುರಿಸುತ್ತಿದೆ.

ರಾಷ್ಟ್ರಪತಿ ಭಾಷಣದಲ್ಲಿ ಯಾವುದೇ ದೂರದೃಷ್ಟಿ ಇಲ್ಲ, ದೇಶದ ಪ್ರಮುಖ ಸವಾಲುಗಳನ್ನು ಹೇಳಲಿಲ್ಲ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 02, 2022 | 7:58 PM

ದೆಹಲಿ: ರಾಷ್ಟ್ರಪತಿಯವರ ಭಾಷಣದ ಕುರಿತು ಬುಧವಾರ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul  Gandhi) ಆ ಭಾಷಣ ಇಂಥದ್ದನ್ನೆಲ್ಲ ಸರ್ಕಾರವು ಮಾಡಿದೆ ಎಂದು ಹೇಳಿಕೊಳ್ಳುವ ವಿಷಯಗಳ ದೀರ್ಘ ಪಟ್ಟಿಯಾಗಿದೆ. ಆದರೆ ನಾವು ನೋಡಲು ಇಷ್ಟಪಡುವ ಆಳವಾದ ಕಾರ್ಯತಂತ್ರದ ವಿಷಯಗಳನ್ನು ನಿಜವಾಗಿಯೂ ಒಳಗೊಂಡಿಲ್ಲ ಎಂದು ಹೇಳಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರ ಭಾಷಣ ನಮ್ಮ ದೇಶ  ಎದುರಿಸುತ್ತಿರುವ ಕೆಲವು ಪ್ರಮುಖ ಸವಾಲುಗಳನ್ನು ಮುಟ್ಟಲಿಲ್ಲ ಎಂದು ಅವರು ಹೇಳಿದರು.  ರಾಷ್ಟ್ರಪತಿ ಭಾಷಣವು ಕಾರ್ಯತಂತ್ರದ ದೃಷ್ಟಿಗೆ ಬದಲಾಗಿ ಅಧಿಕಾರಶಾಹಿ ವಿಚಾರಗಳ ಪಟ್ಟಿ ಎಂದು ನನಗೆ ತೋರುತ್ತದೆ. ಇದು ನಾಯಕತ್ವದ ದೃಷ್ಟಿಕೋನದಿಂದ ಅಲ್ಲ, ಆದರೆ ಏನನ್ನಾದರೂ ಕಾಗದದ ಮೇಲೆ ಹಾಕಬೇಕಾದ ಅಧಿಕಾರಶಾಹಿಗಳ ಗುಂಪಿನಿಂದ ನಿರ್ಮಿಸಲ್ಪಟ್ಟಿದೆ ಎಂದು ನನಗೆ ಅನಿಸಿದೆ.  ರಾಷ್ಟ್ರಪತಿಯವರ ಭಾಷಣದಲ್ಲಿ ಮೂರು ಮೂಲಭೂತ ವಿಷಯಗಳ ಬಗ್ಗೆ ಮಾತನಾಡಲಿಲ್ಲ ಎಂದು ನಾನು ಭಾವಿಸುತ್ತೇನೆ. ಮೊದಲನೆಯದು, ಮತ್ತು ನಾನು ಅತ್ಯಂತ ಮುಖ್ಯವೆಂದು ಪರಿಗಣಿಸುವುದು, ಈಗ ಎರಡು ಭಾರತಗಳಿವೆ ಎಂಬ ಕಲ್ಪನೆ. ಈಗ ಒಂದೇ ಭಾರತವಿಲ್ಲ.

ಈ ಬಗ್ಗೆ ವಿವರಿಸಿದ ರಾಹುಲ್, ಎರಡು ಭಾರತಗಳಿವೆ, ಒಂದು ಭಾರತವು ಅತ್ಯಂತ ಶ್ರೀಮಂತರಿಗೆ – ಅಪಾರ ಸಂಪತ್ತು, ಅಪಾರ ಶಕ್ತಿ ಹೊಂದಿರುವವರಿಗೆ, ಉದ್ಯೋಗದ ಅಗತ್ಯವಿಲ್ಲದವರಿಗೆ, ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕಗಳ ಅಗತ್ಯವಿಲ್ಲದವರಿಗೆ, ಆದರೆ ದೇಶದ ಹೃದಯ ಬಡಿತವನ್ನು ನಿಯಂತ್ರಿಸುವವರಿಗೆ. ಇನ್ನೊಂದು ಬಡವರಿಗಾಗಿರುವ ಭಾರತ. ಈ ಎರಡು ಭಾರತಗಳ ನಡುವಿನ ಅಂತರವು ಹೆಚ್ಚುತ್ತಿದೆ.

ರಾಷ್ಟ್ರಪತಿ ಭಾಷಣದಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದ ಇರಲಿಲ್ಲ. ದೇಶಾದ್ಯಂತ ಯುವಕರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ನಿಮ್ಮ ಸರ್ಕಾರಕ್ಕೆ ಅದನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಭಾಷಣವು ಕಾರ್ಯತಂತ್ರದ ದೃಷ್ಟಿಗೆ ಬದಲಾಗಿ ಅಧಿಕಾರಶಾಹಿ ವಿಚಾರಗಳ ಪಟ್ಟಿ ಎಂದು ನನಗೆ ತೋರುತ್ತದೆ. ಇದು ನಾಯಕತ್ವದ ದೃಷ್ಟಿಕೋನದಿಂದ ಅಲ್ಲ, ಆದರೆ  ಅಧಿಕಾರಶಾಹಿಗಳ ಗುಂಪು  ಕಾಗದದಲ್ಲಿ ಏನೂ ಬರೆದು ಗೀಚಿದಂತೆ ನನಗೆ ಅನಿಸಿದೆ.  ರಾಷ್ಟ್ರಪತಿಯವರ ಭಾಷಣದಲ್ಲಿ ಮೂರು ಮೂಲಭೂತ ವಿಷಯಗಳ ಬಗ್ಗೆ ಮಾತನಾಡಲಿಲ್ಲ ಎಂದು ನಾನು ಭಾವಿಸುತ್ತೇನೆ. ಮೊದಲನೆಯದು  ಮತ್ತು ನಾನು ಅತ್ಯಂತ ಮುಖ್ಯವೆಂದು ಪರಿಗಣಿಸುವುದು, ಈಗ ಎರಡು ಭಾರತಗಳಿವೆ ಎಂಬ ಕಲ್ಪನೆ. ಈಗ ಒಂದೇ ಭಾರತವಿಲ್ಲ. ಈ ಬಗ್ಗೆ ವಿವರಿಸಿದ ರಾಹುಲ್, ಎರಡು ಭಾರತಗಳಿವೆ, ಒಂದು ಭಾರತವು ಅತ್ಯಂತ ಶ್ರೀಮಂತರಿಗೆ – ಅಪಾರ ಸಂಪತ್ತು, ಅಪಾರ ಶಕ್ತಿ ಹೊಂದಿರುವವರಿಗೆ, ಉದ್ಯೋಗದ ಅಗತ್ಯವಿಲ್ಲದವರಿಗೆ, ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕಗಳ ಅಗತ್ಯವಿಲ್ಲದವರಿಗೆ, ಆದರೆ ದೇಶದ ಹೃದಯ ಬಡಿತವನ್ನು ನಿಯಂತ್ರಿಸುವವರಿಗೆ. ಇನ್ನೊಂದು ಬಡವರಿಗಾಗಿರುವ ಭಾರತ. ಈ ಎರಡು ಭಾರತಗಳ ನಡುವಿನ ಅಂತರವು ಹೆಚ್ಚುತ್ತಿದೆ. ರಾಷ್ಟ್ರಪತಿ ಭಾಷಣದಲ್ಲಿ ನಿರುದ್ಯೋಗದ ಬಗ್ಗೆ ಒಂದೇ ಒಂದು ಪದ ಇರಲಿಲ್ಲ. ದೇಶಾದ್ಯಂತ ಯುವಕರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ನಿಮ್ಮ ಸರ್ಕಾರಕ್ಕೆ ಅದನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದ ವಿದೇಶಾಂಗ ನೀತಿಯಲ್ಲಿ ಪ್ರಸ್ತುತ ಸರ್ಕಾರ ಮೂಲಭೂತ ತಪ್ಪು ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು. “ಇದು ಭಾರತದ ಜನರ ವಿರುದ್ಧ ನೀವು ಮಾಡಿದ ಏಕೈಕ ದೊಡ್ಡ ಪಾಪ. ಚೀನಾ ಅವರು ಡೋಕ್ಲಾಮ್ ಮತ್ತು ಲಡಾಖ್‌ನಲ್ಲಿ ಜಾರಿಗೆ ತಂದ ಸ್ಪಷ್ಟವಾದ ಯೋಜನೆಯನ್ನು ಹೊಂದಿದೆ. ಇದು ಭಾರತೀಯ ರಾಷ್ಟ್ರಕ್ಕೆ ಅತ್ಯಂತ ಗಂಭೀರವಾದ ಅಪಾಯವಾಗಿದೆ. ನಮ್ಮ ವಿದೇಶಾಂಗ ನೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರದ ತಪ್ಪು ಮಾಡಿದ್ದೇವೆ ಎಂದು ರಾಹುಲ್ ಹೇಳಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ 50 ವರ್ಷಗಳಲ್ಲೇ ಅತ್ಯಂತ ಗಂಭೀರವಾಗಿದೆ. ನೀವು ಉದ್ಯೋಗ ನೀಡುವ ಬಗ್ಗೆ ಮಾತನಾಡುತ್ತಿದ್ದೀರಿ, 2021 ರಲ್ಲಿ 3 ಕೋಟಿ ಯುವಕರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇಂದು ಭಾರತವು 50 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ಎದುರಿಸುತ್ತಿದೆ. ನೀವು ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾದ ಬಗ್ಗೆ ಮಾತನಾಡುತ್ತೀರಿ, ಆದರೆ ಯುವಕರಿಗೆ ಅವರು ನಿರೀಕ್ಷಿಸಿದ ನಿರುದ್ಯೋಗ ಸಿಕ್ಕಿಲ್ಲ.

“ನೀವು ಮೇಡ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತೀರಿ. ಆದರೆ ಇಂದು ಮೇಡ್ ಇನ್ ಇಂಡಿಯಾ ಸಾಧ್ಯವಿಲ್ಲ. ಮೇಡ್ ಇನ್ ಇಂಡಿಯಾದಲ್ಲಿ ತೊಡಗಿರುವವರು ಯಾರು ಎಂಬ ಕಾರಣಕ್ಕೆ ಸಂಗತಿ ಕೊನೆಗೊಂಡಿದೆ. ನೀವು ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಅಸಂಘಟಿತ ವಲಯವನ್ನು ಮುಗಿಸಿದ್ದೀಪಿ ಮೇಡ್ ಇನ್ ಇಂಡಿಯಾ ನಡೆಯುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ಯುಪಿಎ ಸರ್ಕಾರ 10 ವರ್ಷಗಳಲ್ಲಿ 27 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ. ಇದು ನಮ್ಮ ಡೇಟಾ ಅಲ್ಲ, ಇದು ವಾಸ್ತವಿಕ ಡೇಟಾ. ನೀವು 23 ಕೋಟಿ ಜನರನ್ನು ಮತ್ತೆ ಬಡತನಕ್ಕೆ ತಳ್ಳಿದ್ದೀರಿ. ನ್ಯಾಯಾಂಗ, ಚುನಾವಣಾ ಆಯೋಗ, ಪೆಗಾಸಸ್, ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಪಡಿಸುವ ಸಾಧನಗಳಾಗಿವೆ.

ಎರಡು ವಿಷನ್ ಇದೆ. ಅದರಲ್ಲಿ ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಇದು ಪಾಲುದಾರಿಕೆಯಾಗಿದೆ, ಸಾಮ್ರಾಜ್ಯವಲ್ಲ. ಎರಡನೆಯ ವಿಷನ್ ಬೆತ್ತ ಹಿಡಿದು ಭಾರತವನ್ನು ಆಳುತ್ತಿರುವುದು. ಕಾಂಗ್ರೆಸ್ 1947 ರಲ್ಲಿ ರಾಜನ ಕಲ್ಪನೆಯನ್ನು ಒಡೆದುಹಾಕಿತು, ಆದರೆ ಈಗ ಅದು ಮತ್ತೆ ಬಂದಿದೆ. ಎಲ್ಲಾ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ನಿಮ್ಮ ದೃಷ್ಟಿಯಲ್ಲಿ ರೈತರ ಧ್ವನಿ ಇಲ್ಲ. ‘ರಾಜ’ ಯಾರ ಮಾತನ್ನೂ ಕೇಳುವುದಿಲ್ಲ.

“ನೀವು ತುಂಬಾ ಅಪಾಯಕಾರಿ ಸಂಗತಿಯೊಂದಿಗೆ ಗುದ್ದಾಡುತ್ತಿದ್ದೀರಿ. ಈ ದೇಶಕ್ಕಾಗಿ ರಕ್ತವನ್ನು ತ್ಯಾಗ ಮಾಡಿರುವುದು ನಾನಲ್ಲ, ಆದರೆ ನನ್ನ ಕುಟುಂಬದ ಸದಸ್ಯರಿಂದಾಗಿ ನನಗೆ ಭಾರತದ ಕಲ್ಪನೆಯ ಬಗ್ಗೆ ಸ್ವಲ್ಪ ತಿಳಿದಿದೆ. ನನ್ನ ತಂದೆ ಸ್ಫೋಟದಲ್ಲಿ ಛಿದ್ರವಾಗಿದ್ದರು ಎಂದು ರಾಹುಲ್ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆ ಕೇಳಬೇಕು ಎಂದು ಕೋರಿದ ರಾಹುಲ್ ಗಾಂಧಿ, ‘ಕೆಲವು ದಿನಗಳ ಹಿಂದೆ ಮಣಿಪುರದಿಂದ ಕೆಲವು ರಾಜಕೀಯ ನಾಯಕರು ನನ್ನ ಬಳಿಗೆ ಬಂದರು. ಅವರು ತುಂಬಾ ಸಿಟ್ಟಿನಲ್ಲಿದ್ದರು. ಅವರು ಅಮಿತ್ ಶಾ ಅವರ ಮನೆಗೆ ಹೋದಾಗ ಶೂ ತೆಗೆಯುವಂತೆ ಅವರಿಗೆ ಹೇಳಲಾಗಿತ್ತಂತೆ. ಇದರಿಂದ  ಅವರು ಅಮಮಾನಿತರಾಗಿದ್ದರು. ಆದರೆ ಒಳಗೆ ಅಮಿತ್ ಶಾ ಶೂ ಧರಿಸಿದ್ದರು. ಇದು ಭಾರತದ ಜನರೊಂದಿಗೆ ವ್ಯವಹರಿಸುವ ವಿಧಾನವಲ್ಲ ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು, ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ?: ಮಲ್ಲಿಕಾರ್ಜುನ ಖರ್ಗೆ

Published On - 7:23 pm, Wed, 2 February 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್