Presidential Election: ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ; ಚುನಾವಣಾ ಕಣದಲ್ಲಿ ದ್ರೌಪದಿ ಮುರ್ಮು, ಯಶವಂತ ಸಿನ್ಹಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 18, 2022 | 7:51 AM

ಸಂಸದರು ಹಸಿರು ಬಣ್ಣದ ಮತಪತ್ರ ಮತ್ತು ಶಾಸಕರು ಮತ ಚಲಾಯಿಸಲು ಗುಲಾಬಿ ಬಣ್ಣದ ಮತಪತ್ರ ಪಡೆಯುತ್ತಾರೆ. ಪ್ರತಿ ಶಾಸಕ ಮತ್ತು ಸಂಸದರ ಮತದ ಮೌಲ್ಯವನ್ನು ತಿಳಿಯಲು ಪ್ರತ್ಯೇಕ ಬಣ್ಣಗಳು ಚುನಾವಣಾ ಅಧಿಕಾರಿಗೆ ಸಹಾಯ ಮಾಡುತ್ತವೆ.

Presidential Election: ಭಾರತದ 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ; ಚುನಾವಣಾ ಕಣದಲ್ಲಿ ದ್ರೌಪದಿ ಮುರ್ಮು, ಯಶವಂತ ಸಿನ್ಹಾ
ದ್ರೌಪದಿ ಮುರ್ಮು - ಯಶವಂಕ ಸಿನ್ಹಾ
Follow us on

ಭಾರತದ 15 ನೇ ರಾಷ್ಟ್ರಪತಿಯನ್ನು(President of India) ಆಯ್ಕೆ ಮಾಡಲು ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಇಂದು ಜುಲೈ 18 ರಂದು ಮತ ಚಲಾಯಿಸಲಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು (Droupadi Murmu) ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ (Yashwant Sinha) ಕಣದಲ್ಲಿದ್ದಾರೆ. ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮತದಾನ ನಡೆಯಲಿದೆ. ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳಲಿದೆ. ಬಿಜೆಡಿ, ವೈಎಸ್ಆರ್-ಸಿಪಿ, ಬಿಎಸ್ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ ಮತ್ತು ಶಿವಸೇನಾದಂಥಾ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಪಡೆದ ನಂತರ, ದ್ರೌಪದಿ ಮುರ್ಮು ಅವರ ಮತಗಳ ಪ್ರಮಾಣವು ಈಗಾಗಲೇ ಶೇ 60 ದಾಟಿದೆ. ಒಟ್ಟು 10,86,431 ಮತಗಳ ಪೈಕಿ ವಿವಿಧ ಪ್ರಾದೇಶಿಕ ಪಕ್ಷಗಳ ಬೆಂಬಲದ ನಂತರ ಅವರು ಈಗ 6.67 ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಒಡಿಶಾದ ಮಾಜಿ ಸಚಿವೆ ದ್ರೌಪದಿ ಮುರ್ಮು ಆಯ್ಕೆಯಾದರೆ ಅವರು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ. ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ಎಲೆಕ್ಟೋರಲ್ ಕಾಲೇಜ್ ಚುನಾಯಿತ ಸಂಸದರು ಮತ್ತು ರಾಜ್ಯ ಶಾಸಕಾಂಗ ಸಭೆಗಳ ಸದಸ್ಯರನ್ನು ಒಳಗೊಂಡಿರುತ್ತದೆ. ನಾಮನಿರ್ದೇಶಿತ ಸಂಸದರು ಮತ್ತು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಸಕಾಂಗ ಸಭೆ ಇಲ್ಲದ ಕಾರಣ ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಸದಸ್ಯರ ಮತದ ಮೌಲ್ಯ 708 ರಿಂದ 700 ಕ್ಕೆ ಇಳಿದಿದೆ. ರಾಜ್ಯಗಳಲ್ಲಿ, ಪ್ರತಿ ಶಾಸಕರ ಮತದ ಮೌಲ್ಯವು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತದೆ. ಉತ್ತರ ಪ್ರದೇಶದಲ್ಲಿ, ಪ್ರತಿ ಶಾಸಕರ ಮತದ ಮೌಲ್ಯವು 208 ರಷ್ಟಿದೆ. ಜಾರ್ಖಂಡ್ ಮತ್ತು ತಮಿಳುನಾಡಿನಲ್ಲಿ 176, ಮಹಾರಾಷ್ಟ್ರದಲ್ಲಿ ಇದು 175 ಆಗಿದೆ. ಸಿಕ್ಕಿಂನಲ್ಲಿ ಪ್ರತಿ ಶಾಸಕರ ಮತದ ಮೌಲ್ಯ ಏಳು ಆಗಿದ್ದರೆ, ನಾಗಾಲ್ಯಾಂಡ್‌ನಲ್ಲಿ 9 ಮತ್ತು ಮಿಜೋರಾಂನಲ್ಲಿ 8 ಆಗಿದೆ.

ಒಂದು ಬಾರಿ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆ ನಡೆಯುತ್ತದೆ. ಅಭ್ಯರ್ಥಿಗಳ ಹೆಸರುಗಳ ಮುಂದೆ ಎರಡನೇ ಕಾಲಂನಲ್ಲಿಅವನ / ಅವಳ ಆದ್ಯತೆಯ ಕ್ರಮದಲ್ಲಿ, ಪ್ರತಿ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 1, 2, 3 ಮತ್ತು ಇನ್ನಿತರ ಸ್ಥಾನಗಳನ್ನು ಇಟ್ಟುಕೊಂಡು ಆದ್ಯತೆಗಳನ್ನು ಗುರುತಿಸಬೇಕು.

ಇದನ್ನೂ ಓದಿ
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ; ಬಿಜೆಪಿ ಶಾಸಕರು, ಸಚಿವರಿಗೆ ಅಣಕು ಮತದಾನದ ಮೂಲಕ ತರಬೇತಿ
President of India: ಭಾರತದ ರಾಷ್ಟ್ರಪತಿಯ ವೇತನವೆಷ್ಟು? ನಿವಾಸ ಹೇಗಿದೆ? ಬಳಸುವ ಕಾರು ಎಂಥದ್ದು? ಇತ್ಯಾದಿ ವಿವರಗಳು ಇಲ್ಲಿದೆ
Presidential election: ರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಪ್ರಜೆಯೂ ಸ್ಪರ್ಧಿಸಬಹುದು? ಸ್ಪರ್ಧಿಸೋಕೆ ಇರುವ ನಿಯಮಗಳು ಇಲ್ಲಿದೆ
EC on President Election 2022 Date ರಾಷ್ಟ್ರಪತಿ ಚುನಾವಣೆ: ಜುಲೈ 18ಕ್ಕೆ ಮತದಾನ, 21ಕ್ಕೆ ಮತ ಎಣಿಕೆ

ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ, ಸಂಸದರು ಹಸಿರು ಬಣ್ಣದ ಮತಪತ್ರ ಮತ್ತು  ಶಾಸಕರು ಮತ ಚಲಾಯಿಸಲು ಗುಲಾಬಿ ಬಣ್ಣದ ಮತಪತ್ರ ಪಡೆಯುತ್ತಾರೆ. ಪ್ರತಿ ಶಾಸಕ ಮತ್ತು ಸಂಸದರ ಮತದ ಮೌಲ್ಯವನ್ನು ತಿಳಿಯಲು ಪ್ರತ್ಯೇಕ ಬಣ್ಣಗಳು ಚುನಾವಣಾ ಅಧಿಕಾರಿಗೆ ಸಹಾಯ ಮಾಡುತ್ತವೆ. ಮತದಾನದ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಚುನಾವಣಾ ಆಯೋಗವು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾರರು ತಮ್ಮ ಮತಪತ್ರಗಳಲ್ಲಿ ಗುರುತು ಹಾಕಲು ನೇರಳೆ ಶಾಯಿಯ ವಿಶೇಷವಾಗಿ ವಿನ್ಯಾಸಗೊಳಿಸಿದ ಪೆನ್ ಬಿಡುಗಡೆ ಮಾಡಿದೆ.

Published On - 7:00 am, Mon, 18 July 22