ಶ್ರೀಲಂಕಾ ಬಿಕ್ಕಟ್ಟು: ಭಾರತದ ಹಸ್ತಕ್ಷೇಪಕ್ಕೆ ಡಿಎಂಕೆ, ಎಐಎಡಿಎಂಕೆ ಒತ್ತಾಯ, ಜುಲೈ 19ಕ್ಕೆ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಜೋಷಿ, ಕೇಂದ್ರ ಸಚಿವರಾದ ನಿರ್ಮಲಾಸೀತಾರಾಮನ್ ಮತ್ತು ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶ್ರೀಲಂಕಾ ಪರಿಸ್ಥಿತಿ ಕುರಿತು ಸರ್ಕಾರ ಸರ್ವಪಕ್ಷ ಸಭೆ ನಡೆಸಲಿದೆ ಎಂದು ಹೇಳಿದರು.

ಶ್ರೀಲಂಕಾ ಬಿಕ್ಕಟ್ಟು: ಭಾರತದ ಹಸ್ತಕ್ಷೇಪಕ್ಕೆ ಡಿಎಂಕೆ, ಎಐಎಡಿಎಂಕೆ ಒತ್ತಾಯ, ಜುಲೈ 19ಕ್ಕೆ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ
ಶ್ರೀಲಂಕಾ ಬಿಕ್ಕಟ್ಟು
TV9kannada Web Team

| Edited By: Rashmi Kallakatta

Jul 17, 2022 | 8:19 PM

ದೆಹಲಿ: ಶ್ರೀಲಂಕಾ ಬಿಕ್ಕಟ್ಟು (Sri Lanka crisis) ಬಗ್ಗೆ ಕೇಂದ್ರ ಸರ್ಕಾರ  ಜುಲೈ 19, ಮಂಗಳವಾರ ಸರ್ವಪಕ್ಷಗಳ (all-party meeting) ಸಭೆ ಕರೆದಿದೆ. ಈ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಶ್ರೀಲಂಕಾದ ಬಿಕ್ಕಟ್ಟು ಬಗ್ಗೆ ವಿವರಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಹ್ಲಾದ್ ಜೋಷಿ ಭಾನುವಾರ ಹೇಳಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ನೆರೆಯ ದೇಶವಾದ ಶ್ರೀಲಂಕಾದಲ್ಲಿನ ತಮಿಳು ಜನರ ಪರಿಸ್ಥಿತಿ ಕುರಿತು  ಭಾರತ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿವೆ. ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಶ್ರೀಲಂಕಾದ ಸಮಸ್ಯೆಯನ್ನು ವಿಶೇಷವಾಗಿ ದೇಶದ ತಮಿಳು ಜನಸಂಖ್ಯೆಯ ಸ್ಥಿತಿಯನ್ನು ಎತ್ತಿದವು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಎಡಿಎಂಕೆ ನಾಯಕ ಎಂ ತಂಬಿದುರೈ, ಶ್ರೀಲಂಕಾದಲ್ಲಿನ ಬಿಕ್ಕಟ್ಟು ಪರಿಹರಿಸಲು ಭಾರತ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಾರೆ. ಡಿಎಂಕೆ ನಾಯಕ ಟಿಆರ್ ಬಾಲು ಅವರ ಶ್ರೀಲಂಕಾದ ಪರಿಸ್ಥಿತಿ ವಿವರಿಸಿ ಭಾರತ ಹಸ್ತಕ್ಷೇಪ ನಡೆಸಬೇಕೆಂದು ಒತ್ತಾಯಿಸಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಜೋಷಿ, ಕೇಂದ್ರ ಸಚಿವರಾದ ನಿರ್ಮಲಾಸೀತಾರಾಮನ್ ಮತ್ತು ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶ್ರೀಲಂಕಾ ಪರಿಸ್ಥಿತಿ ಕುರಿತು ಸರ್ಕಾರ ಸರ್ವಪಕ್ಷ ಸಭೆ ನಡೆಸಲಿದೆ ಎಂದು ಹೇಳಿದರು. ಶ್ರೀಲಂಕಾವು ಏಳು ದಶಕಗಳಲ್ಲಿ ಅತೀ ಕೆಟ್ಟದಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.ತೀವ್ರ ವಿದೇಶಿ ವಿನಿಮಯ ಕೊರತೆಯು ಆಹಾರ, ಇಂಧನ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಆಮದುಗೆ ಅಡ್ಡಿಯಾಗಿದೆ.

ಸರ್ಕಾರದ ವಿರುದ್ಧ ಜನಾಂದೋಲನದ ನಂತರ ಆರ್ಥಿಕ ಬಿಕ್ಕಟ್ಟು ದೇಶದಲ್ಲಿ ರಾಜಕೀಯ ಬಿಕ್ಕಟ್ಟನ್ನು ಹುಟ್ಟುಹಾಕಿತು. ಜುಲೈ 16 ರ ಕಚೇರಿ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ ಮಾತನಾಡಿದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಸಭೆಯನ್ನು ಸಂಸತ್​​ನ ಮುಂಗಾರು ಅಧಿವೇಶನದ ಎರಡನೇ ದಿನವಾದ ಜುಲೈ 19 ರ ಸಂಜೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜುಲೈ 18 ರಂದು ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಆಗಸ್ಟ್ 12 ರವರೆಗೆ ನಡೆಯಲಿದೆ.

’ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಪ್ರಕ್ಷುಬ್ಧತೆಯ ನಡುವೆ ನಿರ್ಣಾಯಕ ಘಟ್ಟದಲ್ಲಿರುವ ದೇಶದಲ್ಲಿ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಬೆಂಬಲವನ್ನು ಮುಂದುವರಿಸುವುದಾಗಿ ಭಾರತವು ಶ್ರೀಲಂಕಾಕ್ಕೆ ಭರವಸೆ ನೀಡಿದೆ. ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರನ್ನು ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಅವರು ಶನಿವಾರ ಭೇಟಿ ಮಾಡಿದಾಗ ಈ ಭರವಸೆ ನೀಡಿದರು. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಯನ್ನು ಸ್ಪೀಕರ್ ಅಬೇವರ್ಧನ ಅಂಗೀಕರಿಸಿದ ಒಂದು ದಿನದ ನಂತರ ಈ ಸಭೆ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada