Monsoon Session 2022: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ; 32 ಮಸೂದೆಗಳ ಮಂಡನೆ ಸಾಧ್ಯತೆ
Parliament Session: ಸಂಸತ್ತಿನ ಮುಂಗಾರು ಅಧಿವೇಶನ ಇಂದು (ಜುಲೈ 18) ಆರಂಭವಾಗಲಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ. ಈ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ನಡೆಯಲಿದೆ.
ನವದೆಹಲಿ: ಇಂದಿನಿಂದ ಸಂಸತ್ನಲ್ಲಿ ಮುಂಗಾರು ಅಧಿವೇಶನ (Monsoon Session) ಶುರುವಾಗಲಿದೆ. ಮುಂಗಾರು ಅಧಿವೇಶನದ ಎರಡು ಸದನಗಳಲ್ಲಿ ಮಂಡಿಸಲು ವಿವಿಧ ಇಲಾಖೆಗಳು ಈಗಾಗಲೇ 32 ಮಸೂದೆಗಳನ್ನು ಸೂಚಿಸಿವೆ. ಆ 32 ಮಸೂದೆಗಳಲ್ಲಿ 14 ಮಂಡನೆಗೆ ಸಿದ್ಧವಾಗಿವೆ. ಸಂಸತ್ತಿನ ಮುಂಗಾರು ಅಧಿವೇಶನ ಇಂದು (ಜುಲೈ 18) ಆರಂಭವಾಗಲಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ. ಈ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ (President Polls) ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ನಡೆಯಲಿದೆ. ಹಾಗಾಗಿ, ಈ ಮುಂಗಾರು ಅಧಿವೇಶನ ಹೆಚ್ಚಿನ ಮಹತ್ವ ಹೊಂದಿದೆ.
2022ರ ಮುಂಗಾರು ಅಧಿವೇಶನದಲ್ಲಿ 18 ಸಿಟ್ಟಿಂಗ್‌ಗಳು ನಡೆಯಲಿದ್ದು, ಒಟ್ಟು 108 ಗಂಟೆಗಳ ಕಾಲಾವಕಾಶ ಲಭ್ಯವಾಗಲಿದೆ. 108 ಗಂಟೆಗಳಲ್ಲಿ ಸುಮಾರು 62 ಗಂಟೆಗಳು ಸರ್ಕಾರಿ ವ್ಯವಹಾರಕ್ಕಾಗಿ ಮೀಸಲಿರುತ್ತದೆ. ಉಳಿದ ಸಮಯವನ್ನು ಪ್ರಶ್ನೋತ್ತರ ಸಮಯ, ಶೂನ್ಯ ವೇಳೆ ಮತ್ತು ಖಾಸಗಿ ಸದಸ್ಯರ ವ್ಯವಹಾರಕ್ಕೆ ನಿಗದಿಪಡಿಸಲಾಗಿದೆ. ಸಂಸತ್ತಿನ ಹಿಂದಿನ ಅಧಿವೇಶನಗಳಂತೆ ಈ ಅಧಿವೇಶನದಲ್ಲಿಯೂ ಸರಿಯಾದ ಕೊವಿಡ್ ಪ್ರೋಟೋಕಾಲ್ ಅನುಸರಿಸಲಾಗುವುದು. ಈ ನಿಟ್ಟಿನಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ.
Ahead of the monsoon session of Parliament, a meeting of Rajya Sabha floor leaders is underway at Vice President M Venkaiah Naidu’s residence in Delhi pic.twitter.com/8NV1vRcfOD
— ANI (@ANI) July 17, 2022
ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಈ 32 ಮಸೂದೆಗಳ ಪೈಕಿ ಕೆಲವನ್ನು ಈಗಾಗಲೇ ಸಂಸತ್ತಿನ ಸ್ಥಾಯಿ ಸಮಿತಿಗಳು ಚರ್ಚಿಸಿವೆ. ಸಂಸತ್ತಿನ ಈ ಅಧಿವೇಶನದಲ್ಲಿ ಮಂಡಿಸಲು ವಿವಿಧ ಇಲಾಖೆಗಳು 32 ಮಸೂದೆಗಳನ್ನು ಸೂಚಿಸಿವೆ. ಅದರಲ್ಲಿ 14 ಮಸೂದೆಗಳು ಸಿದ್ಧವಾಗಿವೆ. ಆದರೆ ನಾವು ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಸರ್ವಪಕ್ಷಗಳ ಸಭೆಯಲ್ಲಿ ಸರ್ಕಾರವು ಸುಮಾರು 45 ಪಕ್ಷಗಳನ್ನು ಆಹ್ವಾನಿಸಲಾಗಿತ್ತು. ಅದರಲ್ಲಿ 36 ಪಕ್ಷಗಳು ಭಾಗವಹಿಸಿದ್ದವು.
ಇಂದು (ಜುಲೈ 18ಕ್ಕೆ) ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ 24ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರವಧಿ ಕೊನೆಗೊಳ್ಳಲಿದ್ದು, ಆಗಸ್ಟ್ 10ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವುದಕ್ಕಾಗಿ ವಿಪಕ್ಷಗಳು ನಾಳೆ ಸಭೆ ಸೇರಲಿದೆ. ಬಿಜೆಪಿ ಶನಿವಾರ ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ದನ್ಖರ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
Monsoon session of Parliament | The meeting of the Business Advisory Committee of the Lok Sabha chaired by Speaker Om Birla is scheduled to be held today.
— ANI (@ANI) July 18, 2022
ಈ ಬಾರಿಯ ಅಧಿವೇಶನದಲ್ಲಿ ವಿಪಕ್ಷಗಳು ಅಗ್ನಿಪಥ್ ಯೋಜನೆ, ನಿರುದ್ಯೋಗ, ಹಣದುಬ್ಬರ ಸೇರಿದಂತೆ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನಿಸಲಿವೆ. ಇದೇ ವೇಳೆ ಕೇಂದ್ರ ಸರ್ಕಾರ ಹಲವಾರು ಕಾಯ್ದೆಗಳನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಈಗಾಗಲೇ ಇಂಡಿಯನ್ ಅಂಟಾರ್ಟಿಕಾ ಮಸೂದೆ 2022 ಲೋಕಸಭೆಯಲ್ಲಿ ಬಾಕಿ ಇದೆ. ಅಂತರ್ ರಾಜ್ಯ ನದಿ ನೀರು ವಿವಾದ (ತಿದ್ದುಪಡಿ) ಮಸೂದೆ 2019 ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ಮುಂದಿನ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳು (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ತಿದ್ದುಪಡಿ ಮಸೂದೆ 2022 ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಇದೆ. ಅರಣ್ಯ ಜೀವಿ (ರಕ್ಷಣೆ) ತಿದ್ದುಪಡಿ ಮಸೂದೆ 2021, ಆ್ಯಂಟಿ ಮೆರಿಟೈಮ್ ಪೈರಸಿ ಮಸೂದೆ 2019, ರಾಷ್ಟ್ರೀಯ ಡೋಪಿಂಗ್ ವಿರೋಧಿ ಮಸೂದೆ 2021 ಲೋಕಸಭೆಯಲ್ಲಿ ಬಾಕಿ ಇದೆ.
32 bills have been indicated from various departments will be presented in this session of Parliament. 14 bills are ready. We will not pass the bills without discussion: Union Parliamentary Affairs minister Pralhad Joshi on Monsoon session of Parliament pic.twitter.com/hIzhECnLFv
— ANI (@ANI) July 17, 2022
ಇದನ್ನೂ ಓದಿ: Monsoon session ನಾಳೆ ಸಂಸತ್ ಮುಂಗಾರು ಅಧಿವೇಶನ: ಕೇಂದ್ರ ಸರ್ಕಾರದಿಂದ ಸರ್ವಪಕ್ಷಗಳ ಸಭೆ, ಮೋದಿ ಗೈರು
ಸಂವಿಧಾನದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ) ಆದೇಶಗಳು (ಎರಡನೇ ತಿದ್ದುಪಡಿ) ಮಸೂದೆ 2022 (ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ಜಿಲ್ಲೆಗಳ ಹೆಸರು ಬದಲಾವಣೆ) ಮಾರ್ಚ್ 2022ರಲ್ಲಿ ಲೋಕಸಭೆಯಲ್ಲಿ ಮಂಡನೆ ಆಗಿತ್ತು.
ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ 2022, ಕೌಟುಂಬಿಕ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆ, 2022 ಸೇರಿದಂತೆ ಹಲವು ಮಸೂದೆಗಳು ಮಂಡನೆಯಾಗಲಿವೆ.
Published On - 9:18 am, Mon, 18 July 22