ಯಶವಂತ್ ಸಿನ್ಹಾಗೆ ಬೆಂಬಲ ನೀಡುವಂತೆ ರಾಹುಲ್ AIADMKಯನ್ನು ಕೇಳಿದ್ದು ಸುಳ್ಳು: ಕಾಂಗ್ರೆಸ್

| Updated By: ನಯನಾ ರಾಜೀವ್

Updated on: Jul 03, 2022 | 12:08 PM

ವಿಪಕ್ಷ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಐಎಡಿಎಂಕೆಯನ್ನು ಕೋರಿದ್ದು ಸುಳ್ಳು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ರಾಹುಲ್ ಗಾಂಧಿಯು ಯಶವಂತ್ ಸಿನ್ಹಾ ಅವರಿಗೆ ಬೆಂಬಲ ನೀಡುವಂತೆ ಕೋರಿ ಎಐಎಡಿಎಂಕೆಯ ನಾಯಕ ಇ ಪಳನಿಸ್ವಾಮಿಗೆ ಕರೆ ಮಾಡಿದ್ದಾರೆ ಎನ್ನುವ ವಿಷಯವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.

ಯಶವಂತ್ ಸಿನ್ಹಾಗೆ ಬೆಂಬಲ ನೀಡುವಂತೆ ರಾಹುಲ್ AIADMKಯನ್ನು ಕೇಳಿದ್ದು ಸುಳ್ಳು: ಕಾಂಗ್ರೆಸ್
Rahul Gandhi
Follow us on

ವಿಪಕ್ಷ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಐಎಡಿಎಂಕೆಯನ್ನು ಕೋರಿದ್ದು ಸುಳ್ಳು ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ರಾಹುಲ್ ಗಾಂಧಿಯು ಯಶವಂತ್ ಸಿನ್ಹಾ ಅವರಿಗೆ ಬೆಂಬಲ ನೀಡುವಂತೆ ಕೋರಿ ಎಐಎಡಿಎಂಕೆಯ ನಾಯಕ ಇ ಪಳನಿಸ್ವಾಮಿಗೆ ಕರೆ ಮಾಡಿದ್ದಾರೆ ಎನ್ನುವ ವಿಷಯವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.

ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, ಅಂತಹ ಯಾವುದೇ ದೂರವಾಣಿ ಕರೆ ಮಾಡಿಲ್ಲ ಮತ್ತು ಡಿಎಂಕೆ-ಕಾಂಗ್ರೆಸ್ ಮೈತ್ರಿಯನ್ನು ದುರ್ಬಲಗೊಳಿಸುವ ಇಂತಹ ಪ್ರಯತ್ನಗಳು ಸಾಕಷ್ಟು ನಡೆಯುತ್ತಿರುತ್ತವೆ ಎಂದಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿನ್ಹಾ ಅವರನ್ನು ಜೂನ್ 21 ರಂದು ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು.

ವಿಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ಕೋರಿ ರಾಹುಲ್ ಗಾಂಧಿ ಇ ಪಳನಿಸ್ವಾಮಿಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿತ್ತು.ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ.

ಮುಂದಿನ ತಿಂಗಳ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿ ಸಿನ್ಹಾ ಅವರು ಗುರುವಾರ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಕರೆ ಮಾಡಿ ತಮಿಳುನಾಡಿನ ಆಡಳಿತ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ಬೆಂಬಲವನ್ನು ಕೋರಿದರು.

ಸಿನ್ಹಾ ಅವರು ಜೂನ್ 28 ರಿಂದ ತಮಿಳುನಾಡಿನ ಚೆನ್ನೈನಿಂದ ತಮ್ಮ ಪ್ರಚಾರವನ್ನು ಆರಂಭಿಸಿದ್ದಾರೆ, ಬಿಜೆಪಿ ನೇತೃತ್ವದ ಎನ್‌ಡಿಎ ಜಾರ್ಖಂಡ್‌ನ ಮಾಜಿ ಗವರ್ನರ್ ಮತ್ತು ದ್ರೌಪದಿ ಮುರ್ಮು ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.