Vande Bharat Express: ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಇಂದು (ಮೇ 29) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.
ಇಂದು (ಮೇ 29) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈಶಾನ್ಯ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ವಂದೇ ಭಾರತ್ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ಅಸ್ಸಾಂನ ಗುವಾಹಟಿಗೆ ಹೊರಟಿದೆ. ಈ ಅತ್ಯಾಧುನಿಕ ರೈಲು, ವೇಗ, ಸೌಕರ್ಯ ಮತ್ತು ವರ್ಧಿತ ಸಂಪರ್ಕವನ್ನು ಒದಗಿಸುವ ಜತೆಗೆ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಎಂದು ಪ್ರಧಾನಿ ಮೋದಿ ಭಾನುವಾರ ಟ್ವೀಟ್ ಮಾಡಿದ್ದಾರೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ಕೃಷ್ಟಗೊಳಿಸುತ್ತದೆ ಎಂದು ಹೇಳಿದ್ದಾರೆ.
ಈ ರೈಲು ವಾರದಲ್ಲಿ ಆರು ದಿನಗಳು ಚಲಿಸುತ್ತದೆ ಮತ್ತು ಆರು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ನ್ಯೂ ಅಲಿಪುರ್ದೂರ್, ಕೊಕ್ರಜಾರ್, ನ್ಯೂ ಬೊಂಗೈಗಾಂವ್ ಮತ್ತು ಕಾಮಾಖ್ಯ, ಹಾಗೆಯೇ ನ್ಯೂ ಜಲ್ಪೈಗುರಿ ಮತ್ತು ಗುವಾಹಟಿಯಲ್ಲಿ ಜಂಕ್ಷನ್‌ಗಳ್ಲಿ ಇವುಗಳ ಸೇವೆ ಇದೆ.
Northeast gets its first Vande Bharat Express today. It will boost tourism, enhance connectivity. https://t.co/6DpRIeQUjg
— Narendra Modi (@narendramodi) May 29, 2023
ಇದನ್ನು ಓದಿ: Kerala Vande Bharat Express : ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಚಾಲನೆ
ರೈಲು ನ್ಯೂ ಜಲ್ಪೈಗುರಿಯಿಂದ ಬೆಳಿಗ್ಗೆ 6.10 ಕ್ಕೆ ಹೊರಟು ಮಧ್ಯಾಹ್ನ ಗುವಾಹಟಿಗೆ ತಲುಪುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಗುವಾಹಟಿಯಿಂದ ಸಂಜೆ 4.30 ಕ್ಕೆ ಹೊರಟು ನ್ಯೂ ಜಲ್ಪೈಗುರಿಗೆ ರಾತ್ರಿ 10.20ರ ಸುಮಾರಿಗೆ ತಲುಪಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Mon, 29 May 23