Vande Bharat Express: ಕಳೆದ ವಾರವಷ್ಟೇ ಉದ್ಘಾಟನೆಗೊಂಡಿದ್ದ ಹೌರಾ-ಪುರಿ ವಂದೇ ಭಾರತ್ ರೈಲಿಗೆ ಹಾನಿ, ಸಂಚಾರ ಸ್ಥಗಿತ
ಒಂದು ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿದ್ದ ಹೌರಾ-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹಾನಿಯಾಗಿದ್ದು, ಸೋಮವಾರ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಒಂದು ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿದ್ದ ಹೌರಾ-ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹಾನಿಯಾಗಿದ್ದು, ಸೋಮವಾರ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಗುಡುಗು ಸಹಿತ ಮಳೆಯಿಂದಾಗಿ ರೈಲಿನ ರೇಕ್ಗೆ ಹಾನಿಗೊಳಗಾಗಿರುವುದರಿಂದ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾನುವಾರ ಒಡಿಶಾದ ಬೈತರಾಣಿ ರಸ್ತೆ ಮತ್ತು ಮಂಜೂರಿ ರಸ್ತೆ ನಿಲ್ದಾಣಗಳ ನಡುವೆ ದೊಡ್ಡ ಮರವೊಂದು ರೈಲಿನ ಮೇಲೆ ಬಿದ್ದು ಮುಂಭಾಗದ ಭಾಗಕ್ಕೆ ಭಾಗಶಃ ಹಾನಿಯಾಗಿತ್ತು. ಮೇ18 ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಿದ್ದರು. ಚಾಲಕರ ಕ್ಯಾಬಿನ್ ಮುಂಭಾಗ, ಕಿಟಕಿಗಳಿಗೆ ಹಾನಿಯಾಗಿದೆ.
ಶ್ರೀ ಜಗನ್ನಾಥ ಎಕ್ಸ್‌ಪ್ರೆಸ್ 18 ನಿಲ್ದಾಣಗಳಲ್ಲಿ ನಿಲುಗಡೆಗಳೊಂದಿಗೆ ಪುರಿ ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ, ವಂದೇ ಭಾರತ್ ಹೌರಾದಿಂದ ಪುರಿಯನ್ನು 6.25 ಗಂಟೆಗಳಲ್ಲಿ ಅಂದ್ರೆ, ಗಂಟೆಗೆ ಸರಾಸರಿ 78 ಕಿ.ಮೀ. ವೇಗದಲ್ಲಿ ತಲುಪುತ್ತದೆ.
ವೇಳಾಪಟ್ಟಿ ಪ್ರಕಾರ ಇದು ಸಂಜೆ 4 ರಿಂದ 4.10ರ ನಡುವೆ ಜಾಜ್ಪುರ ಜಂಕ್ಷನ್ ತಲುಪುತ್ತದೆ. ಸಂಜೆ 5.20 ರಿಂದ 5.30ರನಡುವೆ ಭದ್ರಕ್ ತಲುಪುತ್ತದೆ. ಸಂಜೆ 6.40 ರಿಂದ 6.50ರ ಸಮಯದಲ್ಲಿ ಬಾಲಸೋರ್ ತಲುಪುತ್ತದೆ. ರಾತ್ರಿ 8.15 ರಿಂದ 8.25ರ ನಡುವೆ ಖರಗ್ಪುರ ತಲುಪುತ್ತದೆ. ಅಂತಿಮವಾಗಿ ರೈಲು ಹೌರಾ ನಿಲ್ದಾಣವನ್ನು ರಾತ್ರಿ 8.22ಕ್ಕೆ ತಲುಪುತ್ತದೆ.
ಮತ್ತಷ್ಟು ಓದಿ: Vande Bharat Express: ಮುಂದಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುರಿ ಮತ್ತು ಹೌರಾ ನಡುವೆ ಸಂಚರಿಸುವ ಸಾಧ್ಯತೆ
ಹೌರಾದಿಂದ ಪುರಿಗೆ ಎಕ್ಸಿಕ್ಯೂಟಿವ್ ವರ್ಗದ ದರವು ಆಹಾರ ಹಾಗೂ ಪಾನೀಯ ಸೇರಿದಂತೆ 2,400 ರೂ. ಮತ್ತು ಯಾವುದೇ ಪ್ರಯಾಣಿಕರು ಆಹಾರ ಮತ್ತು ಪಾನೀಯವನ್ನು ತೆಗೆದುಕೊಳ್ಳಲು ಬಯಸದಿದ್ದರೆ ಆ ಸಂದರ್ಭದಲ್ಲಿ ದರವು 2245ರೂ.ಗೆ ಇಳಿಯುತ್ತದೆ. ಮತ್ತೊಂದೆಡೆ ಪುರಿಯಿಂದ ಹೌರಾಗೆ ಹೋಗುತ್ತಿದ್ದರೆ ಎಕಾನಮಿ ಸೀಟಿನಲ್ಲಿ 1,410 ರೂ. ಮತ್ತು ಆಹಾರವಿಲ್ಲದೆ 1125 ರೂ. ಆಗಿರುತ್ತದೆ. ಕಾರ್ಯನಿರ್ವಾಹಕ ವರ್ಗದಲ್ಲಿ ಪುರಿಯಿಂದ ಹೌರಾಗೆ ಪ್ರಯಾಣ ದರವು 2,595 ರೂ.ಗಳು ಮತ್ತು ಊಟದ ಜತೆಗೆ 2245 ರೂ. ಆಗಿರುತ್ತದೆ. ಈ ರಾಜ್ಯವು ಪಿಆರ್ಎಸ್ ಮತ್ತು ಇಂಟರ್ನೆಟ್ ಮೂಲಕ ಟಿಕೆಟ್ ಬುಕಿಂಗ್ ಅನ್ನು ಮೇ 17ರಿಂದ ಪ್ರಾರಂಭಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ