Raksha Bandhan: ಪ್ರಧಾನಿ ನಿವಾಸದಲ್ಲಿ ರಕ್ಷಾಬಂಧನ ಸಂಭ್ರಮ.. ಮೋದಿಗೆ ರಾಖಿ ಕಟ್ಟಿದ ಆ ಮಕ್ಕಳು ಯಾರು?

Narendra Modi: ಈ ಟ್ವೀಟ್ ಫೋಟೋಗಳಲ್ಲಿ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿದ ಹುಡುಗಿಯರು ಮೋದಿಗೆ ರಾಖಿ ಕಟ್ಟುತ್ತಿರುವುದನ್ನು ಕಾಣಬಹುದು. ರಾಖಿ ಕಟ್ಟಲು ಹುಡುಗಿಯರು ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದಂತೆ, ಪ್ರಧಾನಿಯವರು ಅವರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಮೋದಿ ಅವರು ಬಾಲಕಿಯರನ್ನು ಆಶೀರ್ವದಿಸಿದರು.

Raksha Bandhan: ಪ್ರಧಾನಿ ನಿವಾಸದಲ್ಲಿ ರಕ್ಷಾಬಂಧನ ಸಂಭ್ರಮ.. ಮೋದಿಗೆ ರಾಖಿ ಕಟ್ಟಿದ ಆ ಮಕ್ಕಳು ಯಾರು?
ರಕ್ಷಾ ಬಂಧನ: ಪ್ರಧಾನಿ ನಿವಾಸದಲ್ಲಿ ರಕ್ಷಾಬಂಧನ ಸಂಭ್ರಮ.. ಮೋದಿಗೆ ರಾಖಿ ಕಟ್ಟಿದ ಆ ಮಕ್ಕಳು ಯಾರು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 11, 2022 | 5:55 PM

Raksha Bandhan: ಸಹೋದರ-ಸಹೋದರಿಯರಿಗೆ ವಿಶೇಷ ಪ್ರೀತಿಯನ್ನು ತೋರಿಸುವ ಮೂಲಕ ರಕ್ಷಾ ಬಂಧನವನ್ನು ಆಚರಿಸುವುದು ಪ್ರತಿವರ್ಷ ಸಂಪ್ರದಾಯವಾಗಿದೆ. ಈ ಹಬ್ಬವನ್ನು ಹುಡುಗಿಯರು ರಾಖಿ ಕಟ್ಟಿ ಆಚರಿಸುತ್ತಾರೆ.

ಪ್ರಧಾನಿ ಕಚೇರಿ ಸಿಬ್ಬಂದಿಯ ಪುತ್ರಿಯರು ಪ್ರಧಾನಿ ಮೋದಿಗೆ ರಾಖಿ ಕಟ್ಟಿದರು: ಅಣ್ಣ-ತಮ್ಮಂದಿರಿಗೆ ವಿಶೇಷ ಪ್ರೀತಿ ತೋರಿಸುವ ಮೂಲಕ ರಕ್ಷಾ ಬಂಧನವನ್ನು ಆಚರಿಸುವುದು ಪ್ರತಿ ವರ್ಷ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಮಹಿಳೆಯರು ರಾಖಿ ಕಟ್ಟಿ ಸಂಭ್ರಮದಿಂದ ಈ ಹಬ್ಬ ಆಚರಿಸುತ್ತಾರೆ. ಈ ಹಬ್ಬದಂದು ಸಹೋದರರು ಸಹ ಅವರ ಬಗ್ಗೆ ವಿಶೇಷ ಪ್ರೀತಿಯನ್ನು ತೋರಿಸುತ್ತಾರೆ. ರಾಖಿ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿಯ ಪವಿತ್ರ ಬಂಧವನ್ನು ಸಂಕೇತಿಸುತ್ತದೆ. ಈ ಹಬ್ಬವು ಸಹೋದರತ್ವವನ್ನು ಸೂಚಿಸುತ್ತದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ ಮತ್ತು ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತಾರೆ.

ಈ ರಾಖಿ ಹಬ್ಬದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ನಿವಾಸದಲ್ಲಿ ಬಾಲಕಿಯರ ಮಧ್ಯೆ ಸಂಭ್ರಮಿಸಿದರು. ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ತೋಟಗಾರರು, ಕಸ ಗುಡಿಸುವವರು, ಕ್ಲೀನರ್‌ಗಳು, ಚಾಲಕರು ಮತ್ತು ಇತರ ಸಿಬ್ಬಂದಿಯ ಪುತ್ರಿಯರು ಪ್ರಧಾನಿ ಮೋದಿಗೆ ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ನಗುಮುಖದಿಂದ ಸ್ವಾಗತಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಟ್ವೀಟ್ ಫೋಟೋಗಳಲ್ಲಿ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿದ ಹುಡುಗಿಯರು ಮೋದಿಗೆ ರಾಖಿ ಕಟ್ಟುತ್ತಿರುವುದನ್ನು ಕಾಣಬಹುದು. ರಾಖಿ ಕಟ್ಟಲು ಹುಡುಗಿಯರು ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದಂತೆ, ಪ್ರಧಾನಿಯವರು ಅವರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಮೋದಿ ಅವರು ಬಾಲಕಿಯರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮೋದಿ ಮಕ್ಕಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.

To read more in Telugu Click here

Published On - 5:50 pm, Thu, 11 August 22