ಪ್ರಧಾನಿ ನರೇಂದ್ರ ಮೋದಿ
ಒಳಗೊಳ್ಳುವಿಕೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಎಂಬುದು ಭಾರತೀಯ ಸಮುದಾಯಕ್ಕೆ ಪ್ರತಿ ಕ್ಷಣವೂ ಜೀವಿಸುವ ಶಕ್ತಿಯನ್ನು ನೀಡುತ್ತದೆ ಈ ಮೌಲ್ಯಗಳನ್ನು ಸಾವಿರಾರು ವರ್ಷಗಳಿಂದ ಭಾರತೀಯರಲ್ಲಿ ಅಳವಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯವಾಗಿ ತಮ್ಮೆಲ್ಲಾ ಭಾಷಣಗಳಲ್ಲಿ ಹೇಳುವುದನ್ನು ಕೇಳಿರಬಹುದು. ಪ್ರಧಾನಿ ನರೇಂದ್ರ ಮೊದಿಯವರು ಪ್ರತಿ ರಾಜ್ಯದ ಸಂಸ್ಕೃತಿಯನ್ನು ತನ್ನದೆಂದು ಭಾವಿಸಿ ಅಲ್ಲಿನ ಹಬ್ಬಗಳನ್ನು ಆಚರಿಸುವ ಪರಿಯು ಎಲ್ಲರಲ್ಲಿ ತಾವೆಲ್ಲಾ ಒಂದೇ ಎನ್ನುವ ಭಾವನೆಯನ್ನು ಮೂಡಿಸುತ್ತಿದೆ. ಜಾತಿ ಧರ್ಮದ ಭೇದವಿಲ್ಲದೆ ಪ್ರಧಾನಿ ಮೋದಿಯವರು ಪ್ರತಿಯೊಂದು ಕಾರ್ಯಕ್ರಮಕ್ಕೂ ಭೇಟಿ ನೀಡುವ ಮೂಲಕ ಎಲ್ಲರೂ ಒಂದೇ ಎನ್ನುವ ಒಗ್ಗಟ್ಟಿನ ಬೀಜ ಬಿತ್ತುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆ.25 ರಂದು ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಕನ್ನಡಿಗರ ಹೆಮ್ಮೆಗೆ ಪಾತ್ರರಾಗಿದ್ದರು. ಅವರು ಕೇವಲ ಒಂದು ರಾಜ್ಯದ ಸಂಸ್ಕೃತಿ ಮಾತ್ರವಲ್ಲ ಎಲ್ಲಾ ರಾಜ್ಯದ ಸಂಸ್ಕೃತಿಗಳನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುವ ಅವರಲ್ಲಿ ತಾನೂ ಒಬ್ಬನೆಂದು ಒಳಗೊಳ್ಳುವ ರೀತಿಗೆ ದೇಶದ ಜನರು ಫಿದಾ ಆಗಿದ್ದಾರೆ.
ಅಂದು ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಕೊಡುಗೆ ಅಪಾರವಾಗಿದ್ದು, ದೇಶ ಕಟ್ಟುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡಿಗರಿಗೆ ನಾನು ನಮಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು.
ಪೌರಾಣಿಕ ಕಾಲದಿಂದಲೂ ಕರ್ನಾಟಕವು ದೇಶದ ಅತ್ಯಂತ ಪ್ರಮುಖ ಭಾಗವಾಗಿದ್ದು, ಈ ದೇಶವನ್ನು ಮುನ್ನಡೆಸಲು ತನ್ನದೇ ಆದ ಕೊಡುಗೆಯನ್ನು ನೀಡಿದ ಎಂದು ಪ್ರಧಾನಿ ಮೋದಿ ಹೇಳಿದರು. ಕನ್ನಡಿಗರು ಯಾವಾಗಲು ಒಂದು ಭಾರತ ಶ್ರೇಷ್ಠ ಭಾರತದ ಕಲ್ಪನೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ನುಡಿದಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಕಾರ್ಯಕ್ರಮಗಳ ಪಟ್ಟಿ
- ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ತಿರು ಎಲ್ ಮುರುಗನ್ ಅವರ ನಿವಾಸದಲ್ಲಿ ತಮಿಳರ ಹೊಸ ವರ್ಷಾಚರಣೆ ಪುತಾಂಡುವಿನಲ್ಲಿ ಪಾಲ್ಗೊಂಡರು.
ಪ್ರಧಾನಿಯವರು ತಮಿಳು ಸಂಸ್ಕೃತಿಯ ಕಡೆಗೆ ತಮ್ಮ ಆಕರ್ಷಣೆ ಮತ್ತು ಭಾವನಾತ್ಮಕ ಬಾಂಧವ್ಯವನ್ನು ಪ್ರತಿಪಾದಿಸಿದರು. ಗುಜರಾತ್‌ನ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದಲ್ಲಿ ತಮಿಳು ಜನರ ಉಪಸ್ಥಿತಿ ಮತ್ತು ಅಪಾರ ಪ್ರೀತಿಯನ್ನು ನೆನಪಿಸಿಕೊಂಡ ಪ್ರಧಾನಿ, ತಮಿಳರ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
- ಮೋದಿ ಇಂದು ಅಸ್ಸಾಂನಲ್ಲಿ ನಡೆಯುವ ಬಿಹು ಸಂಭ್ರಮಾಚರಣೆಯಲ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ.
- ಹಾಗೆಯೇ ಕಳೆದ ವಾರವಷ್ಟೇ ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಚರ್ಚ್ನಲ್ಲಿ ನಡೆದ ಈಸ್ಟರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ಕಳೆದ ತಿಂಗಳು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಯೋಜಿಸಿದ್ದ ಯುಗಾದಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.
- ಫೆಬ್ರವರಿಯಲ್ಲಿ ದೆಹಲಿಯಲ್ಲಿ ಕನ್ನಡ ಸಂಘ ಏರ್ಪಡಿಸಿದ್ದ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ದೆಹಲಿಯಲ್ಲಿ ನಡೆದ ಗುರುನಾನಕ್ ಜಯಂತಿ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು.
- ಮಣಿಪುರ್ ಸಂಗಾಯ್ ಕಾರ್ಯಕ್ರಮದಲ್ಲೂ ಮೋದಿ ಭಾಗವಹಿಸಿ ಮಾತನಾಡಿದ್ದರು.
- ಅಕ್ಟೋಬರ್ 2022ರಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.
- 2022ರ ಸೆಪ್ಟೆಂಬರ್ನಲ್ಲಿ ಅಹಮದಾಬಾದ್ನಲ್ಲಿ ನಡೆದ ನವರಾತ್ರಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.
- 2022ರ ಆಗಸ್ಟ್ನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರ ನಿವಾಸದಲ್ಲಿ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- 2022ರ ಮೇ ತಿಂಗಳಲ್ಲಿ ನೇಪಾಳದ ಲುಂಬಿನಿಗೆ ಭೇಟಿ ನೀಡಿದ್ದರು ಹಾಗೆಯೇ ಖುಷಿನಗರದಲ್ಲಿರುವ ಮಹಾಪ್ರಿನಿರ್ವಾಣ ಸ್ತೂಪಕ್ಕೂ ಭೇಟಿ ನೀಡಿದ್ದರು.
- 2022ರ ಏಪ್ರಿಲ್ನಲ್ಲಿ ವಾರಾಣಸಿಯಲ್ಲಿ ನಡೆದ ದೀಪಾವಳಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
- ಮಕರ ಸಂಕ್ರಾಂತಿಯಂದು ರಾಮ್ ವಿಳಾಸ್ ಪಾಸ್ವಾನ್ ಅವರ ನಿವಾಸದಲ್ಲಿ ಚೂಡಾ ದಹಿ ಭೋಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ