Watch ಯುವಕಲಾವಿದ ರಚಿಸಿದ ಬುದ್ಧನ ರೇಖಾಚಿತ್ರದ ಮೇಲೆ ಪ್ರಧಾನಿ ಮೋದಿ ವಿಶೇಷ ಆಟೋಗ್ರಾಫ್

ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಲುಂಬಿನಿಯಲ್ಲಿ ಭಾರತೀಯ ಸಮುದಾಯದಿಂದ ಆತ್ಮೀಯ ಸ್ವಾಗತವನ್ನು ಸ್ವೀಕರಿಸುತ್ತಿರುವಾಗ ತನ್ನ ಮತ್ತು ಭಗವಾನ್ ಬುದ್ಧನ ರೇಖಾಚಿತ್ರದ ಮೇಲೆ ಆಟೋಗ್ರಾಫ್ ಮಾಡುತ್ತಿರುವುದು...

Watch ಯುವಕಲಾವಿದ ರಚಿಸಿದ ಬುದ್ಧನ ರೇಖಾಚಿತ್ರದ ಮೇಲೆ ಪ್ರಧಾನಿ ಮೋದಿ ವಿಶೇಷ ಆಟೋಗ್ರಾಫ್
ನರೇಂದ್ರ ಮೋದಿ
Edited By:

Updated on: May 16, 2022 | 5:25 PM

ದೆಹಲಿ: ಭಗವಾನ್ ಬುದ್ಧನ ಜನ್ಮಸ್ಥಳ ನೇಪಾಳದ (Nepal) ಲುಂಬಿನಿಗೆ (Lumbini)
ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತೀಯ ಸಮುದಾಯದಿಂದ ಆತ್ಮೀಯ ಸ್ವಾಗತ ದೊರೆಯಿತು. ಅಲ್ಲಿ ಮೋದಿಯವರ ಜನರೊಂದಿಗೆ ಸಂವಹನ ನಡೆಸಿದ್ದು ಯುವ ಕಲಾವಿದರೊಬ್ಬರು  ಪ್ರಧಾನಿ ಮೋದಿ ಬುದ್ಧನಿಂದ ಆಶೀರ್ವಾದ ಪಡೆಯುತ್ತಿರುವ  ರೇಖಾಚಿತ್ರಕ್ಕೆ  ಸಹಿ ಹಾಕಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವಿಡಿಯೊದಲ್ಲಿ, ಪ್ರಧಾನ ಮಂತ್ರಿ ಮೋದಿ ಅವರು ಕಲಾಕೃತಿಯ ಮೇಲೆ ತಮ್ಮ ಹಸ್ತಾಕ್ಷರವನ್ನು ನೀಡುತ್ತಿರುವಾಗ ಪ್ರೇಕ್ಷಕರು “ಭಾರತ್ ಮಾತಾ ಕಿ ಜೈ” ಮತ್ತು “ವಂದೇ ಮಾತರಂ” ಘೋಷಣೆಗಳನ್ನು ಕೂಗುತ್ತಿರುವುದು ಕಾಣಿಸುತ್ತದೆ. ನಂತರ  ಪ್ರಧಾನಿಯವರು ಕೈ ಮುಗಿಯುತ್ತಾ ಜನರನ್ನು ಭೇಟಿಯಾಗುತ್ತಿರುವುದು ವಿಡಿಯೊದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಲುಂಬಿನಿಯಲ್ಲಿ ಭಾರತೀಯ ಸಮುದಾಯದಿಂದ ಆತ್ಮೀಯ ಸ್ವಾಗತವನ್ನು ಸ್ವೀಕರಿಸುತ್ತಿರುವಾಗ ತನ್ನ ಮತ್ತು ಭಗವಾನ್ ಬುದ್ಧನ ರೇಖಾಚಿತ್ರದ ಮೇಲೆ ಆಟೋಗ್ರಾಫ್ ಮಾಡುತ್ತಿರುವುದು ಎಂದು ವಿಡಿಯೊ ಶೀರ್ಷಿಕೆ ನೀಡಲಾಗಿದೆ. ಪ್ರಧಾನಿ ಮೋದಿ ನೇಪಾಳಕ್ಕೆ ನಾಲ್ಕು ದಿನಗಳ ಪ್ರವಾಸದಲ್ಲಿದ್ದಾರೆ. ಕಳೆದ ತಿಂಗಳು ಭಾರತದಲ್ಲಿದ್ದ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಆಹ್ವಾನದ ಮೇರೆಗೆ ಅವರು ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ಲುಂಬಿನಿಯಲ್ಲಿ ಪ್ರಧಾನಿಯನ್ನು ನೇಪಾಳ ಪ್ರಧಾನಿ, ಅವರ ಪತ್ನಿ ಹಾಗೂ ಹಲವು ಸಚಿವರು ಬರಮಾಡಿಕೊಂಡರು.


ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಲುಂಬಿನಿಯಲ್ಲಿರುವ ಭಗವಾನ್ ಬುದ್ಧನ ಜನ್ಮಸ್ಥಳವೆಂದು ಪರಿಗಣಿಸಲಾದ ಮಾಯಾದೇವಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದ್ದಾರೆ. “ಬುದ್ಧ ಪೂರ್ಣಿಮೆಯಂದು ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಾನು ಆಶೀರ್ವಾದ ಪಡೆದಿದ್ದೇನೆ. ಭಗವಾನ್ ಬುದ್ಧ ನಮ್ಮೆಲ್ಲರನ್ನು ಆಶೀರ್ವದಿಸಲಿ ಮತ್ತು ನಮ್ಮ ಗ್ರಹವನ್ನು ಶಾಂತಿಯುತ ಮತ್ತು ಸಮೃದ್ಧಗೊಳಿಸಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


2020 ರಲ್ಲಿ ಗಡಿ ವಿವಾದದಿಂದಾಗಿ ಬಾಂಧವ್ಯಕ್ಕೆ ಧಕ್ಕೆಯಾದ ನಂತರ ನೇಪಾಳಕ್ಕೆ ಪ್ರಧಾನಿ ಮೋದಿಯವರದು ಮೊದಲ ಭೇಟಿಯಾಗಿದೆ ಇದು. ಈ ಭೇಟಿಯಲ್ಲಿ, ಪ್ರಧಾನಿ ಮೋದಿ ಅವರು ಭಾರತದ ಗಡಿಯಿಂದ ಕೇವಲ 10 ಕಿಮೀ ದೂರದಲ್ಲಿರುವ ಲುಂಬಿನಿಯಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಿದರು.