ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು; ಪತ್ರ ವೈರಲ್

ಕರ್ನಾಟಕ ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿ ಮಹತ್ವದ ತೀರ್ಮಾನ ತೆಗದುಕೊಂಡಿದೆ. ಈ ತೀರ್ಮಾನವನ್ನು ವಿರೋಧಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಪಿಎಸ್ಐ ಅಭ್ಯರ್ಥಿಗಳು; ಪತ್ರ ವೈರಲ್
ಪಿಎಸ್ಐ ಅಭ್ಯರ್ಥಿಗಳು ಬರೆದಿದ್ದಾರೆ ಎನ್ನಲಾದ ಪತ್ರ
Follow us
TV9 Web
| Updated By: sandhya thejappa

Updated on:May 16, 2022 | 8:34 AM

ಬೆಂಗಳೂರು: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ಬಯಲಾಗುತ್ತಿದ್ದಂತೆ ಕರ್ನಾಟಕ ಸರ್ಕಾರ (Karnataka Government) ಮರು ಪರೀಕ್ಷೆ ನಡೆಸುವುದಾಗಿ ಮಹತ್ವದ ತೀರ್ಮಾನ ತೆಗದುಕೊಂಡಿದೆ. ಈ ತೀರ್ಮಾನವನ್ನು ವಿರೋಧಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಜೊತೆಗೆ ದೇಶದ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ನೊಂದ ಪಿಎಸ್ಐ ಅಭ್ಯರ್ಥಿಗಳು ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ಪುಟಗಳ ಪತ್ರ ಬರೆದು ನ್ಯಾಯ ಓದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಈ ಪತ್ರ ಬರೆದವರು ಯಾರು ಎಂಬುದು ತಿಳಿದುಬಂದಿಲ್ಲ. ತಮ್ಮ ಹೆಸರನ್ನು ಪತ್ರದಲ್ಲಿ ನಮೂದಿಸಿಲ್ಲ. ಪಿಎಸ್ಐ ಪರೀಕ್ಷೆಯಲ್ಲಿ ಆಯ್ಕೆಯಲ್ಲಿ ಮೋಸ ಹೊದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಿ. ಆದರೆ ನಿಯತ್ತಿಂದ ಬರೆದವರಿಗೆ ಮೋಸ ಆಗಬಾರದು. 2021ರಲ್ಲಿ ನಡೆದ ಎಫ್​ಡಿಎ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದು ಬರೆದಿದ್ದಾರೆ.

ಟೆರರಿಸ್ಟ್​ಗಳ ಜೊತೆ ಕೈ ಜೋಡಿಸುವಂತೆ ಎಚ್ಚರಿಕೆ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ. ತನಿಖೆ ಮಾಡಿ ನ್ಯಾಯಾ ಕೋಡಿಸುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ನ್ಯಾಯಕೊಡಿಸದಿದ್ದರೆ ನಾವು ಮುಂದೆ ಟೆರರಿಸ್ಟ್​ಗಳಿಗೆ ಕೈಜೋಡಿಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಎನ್ನುವಂತ ವ್ಯವಸ್ಯೆ ಬಂದುಬಿಟ್ಟಿದೆ.  ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತು ಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನ ಬರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
Image
ಮದರಸಾಗಳಲ್ಲಿ ಕಡ್ಡಾಯ ರಾಷ್ಟ್ರಗೀತೆಗೆ ಶಾಸಕ ಹ್ಯಾರಿಸ್ ವಿರೋಧ: ಮೇ 25ಕ್ಕೆ ವಕ್ಫ್​ ಮಂಡಳಿಯಿಂದ ಮಹತ್ವದ ಸಭೆ
Image
ರಾಜ್ಯದಲ್ಲಿ ಇಂದಿನಿಂದ ಪ್ರಾಥಮಿಕ, ಪ್ರೌಢ ಶಾಲೆಗಳು ಆರಂಭ: ಶಾಲೆಗಳಲ್ಲಿ ಸಿಹಿ ವಿತರಿಸಿ ಮಕ್ಕಳ ಸ್ವಾಗತಕ್ಕೆ ತಯಾರಿ
Image
ಕರ್ನಾಟಕದ ಒಂದು ಮಗುವಿಗೆ ಶಂಕಿತ ಟೊಮೆಟೊ ಜ್ವರ: ಪೋಷಕರಲ್ಲಿ ಆತಂಕ, ಕೇರಳ ಗಡಿಯಲ್ಲಿ ಕಟ್ಟೆಚ್ಚರ
Image
Horoscope Today- ದಿನ ಭವಿಷ್ಯ; ವ್ಯಾಪಾರ ಮಾಡುವ ಈ ರಾಶಿಗೆ ಸೇರಿದವರು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ

ಟೆರರಿಸ್ಟ್ಗಳ ಜೊತೆ ನಕ್ಸಲೈಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದ ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ. ನಾವು ಎಂಟು ಮಂದಿ ಇದ್ದೇವೆ, ನಾವೆಲ್ಲರು ಈ ನಿರ್ಧಾರ ಮಾಡಿದ್ದೇವೆ ಎಂದು ನೊಂದ ಪಿಎಸ್ಐ ಅಭ್ಯರ್ಥಿಗಳು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖವಾಗಿದೆ

Published On - 8:32 am, Mon, 16 May 22