AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi Oath Taking Ceremony: ಪ್ರಧಾನಿ ನರೇಂದ್ರ ಮೋದಿ ಜೂ.9ಕ್ಕೆ ಪ್ರಮಾಣ ವಚನ ಸ್ವೀಕಾರ

ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ: ಪ್ರಧಾನಿ ನರೇಂದ್ರ ಮೋದಿ ಅವರು ಜೂ.9ಕ್ಕೆ (ಭಾನುವಾರ) ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

PM Modi Oath Taking Ceremony: ಪ್ರಧಾನಿ ನರೇಂದ್ರ ಮೋದಿ ಜೂ.9ಕ್ಕೆ ಪ್ರಮಾಣ ವಚನ ಸ್ವೀಕಾರ
ಅಕ್ಷಯ್​ ಪಲ್ಲಮಜಲು​​
|

Updated on:Jun 07, 2024 | 11:34 AM

Share

ದೆಹಲಿ ಜೂ.6: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂ.9ಕ್ಕೆ (ಭಾನುವಾರ) ಸಂಜೆ  ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಿಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು, ಆದರೆ ಇದೀಗ ಅಧಿಕೃತವಾಗಿ ಪ್ರಧಾನಿ ಮೋದಿ ಅವರು ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಬುಧವಾರ ನಡೆದ NDA ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇನ್ನು ಮೋದಿಯನ್ನು ಎನ್​​ಡಿಎಯ ನಾಯಕನಾಗಿ ಈ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಸಭೆಯ ನಂತರ ಮೋದಿ ಹಾಗೂ ಎನ್​ಡಿಎ ನಾಯಕರು ರಾಷ್ಟ್ರಪತಿಗೆ ಸರ್ಕಾರ ರಚನೆ ಬಗ್ಗೆ ಹಕ್ಕು ಮಂಡನೆ ಮಾಡಿದ್ದಾರೆ.

ಜವಾಹರಲಾಲ್ ನೆಹರು ನಂತರ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದಕ್ಷಿಣ ಏಷ್ಯಾದ ಹಲವು ನಾಯಕರನ್ನು ಆಹ್ವಾನಿಸಲಾಗಿದ್ದು, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಈಗಾಗಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಖಾತ್ರಿಪಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ವಿಶ್ವ ನಾಯಕರಿಗೆ ಆಹ್ವಾನ, ಈ ಇಬ್ಬರು ಬರುವುದು ಪಕ್ಕಾ

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’,  ಹಾಗೂ ಭೂತಾನ್ ಪ್ರಧಾನಿ ಟ್ಶೆರಿಂಗ್ ಟೊಬ್ಗೇ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರಿಗೂ ಆಹ್ವಾನಗಳನ್ನು ಕಳುಹಿಸಲಾಗಿದೆ. 2024ರ ಲೋಕಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, 2019ರಲ್ಲಿ 303 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 240 ಸ್ಥಾನಗಳಿಗೆ ಇಳಿದಿದೆ. ಕಳೆದ ಬಾರಿ ಎನ್‌ಡಿಎ 352 ಸ್ಥಾನಗಳನ್ನು ಪಡೆದಿತ್ತು, ಆದರೆ ಈ ಬಾರಿ ಆ ಸಂಖ್ಯೆ 293ಕ್ಕೆ ಇಳಿದಿದೆ.

2019ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚನೆ ಮಾಡಲು ಯಾರ ಬೆಂಬಲವು ಬೇಕಿರಲಿಲ್ಲ. ಆದರೆ ಈ ಬಾರಿ ಸರ್ಕಾರ ರಚನೆಗೆ ಮಿತ್ರಪಕ್ಷಗಳು ಬೆಂಬಲ ಬೇಕು ಹಾಗೂ ಈ ಬಾರಿ ಸರ್ಕಾರವನ್ನು ಮಿತ್ರಪಕ್ಷಗಳನ್ನು ಅವಲಂಬಿಸಿ ಮಾಡಬೇಕಿದೆ. ಮತ್ತು ಇದರಲ್ಲಿ ದೊಡ್ಡ ಪಾಲು ನಿತೀಶ್​​ ಕುಮಾರ್​ ಮತ್ತು ಚಂದ್ರಬಾಬು ನಾಯ್ಡು ಹೊಂದಿರುವ ಕಾರಣ ಅವರು ಬೆಂಬಲ ಅಗತ್ಯ ಇದೆ ಎಂದು ಹೇಳಲಾಗಿದೆ.

ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ನಿತೀಶ್​​ ಕುಮಾರ್​ ಮತ್ತು ಚಂದ್ರಬಾಬು ನಾಯ್ಡು, ಈ ಬಾರಿ ಬಿಜೆಪಿ ಜತೆಗೆ ಸೇರಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಚಂದ್ರಬಾಬು ನಾಯ್ಡು ಬೆಂಬಲವನ್ನು ನೀಡಿತ್ತು. ಇನ್ನು ಬಿಹಾರದಲ್ಲೂ ಬಿಜೆಪಿ ನಿತೀಶ್​​ ಕುಮಾರ್ ಅವರಿಗೆ ಬೆಂಬಲ ನೀಡಿದ್ದಾರೆ. ಇದರ ಜತೆಗೆ ಈ ಬಾರಿ ಮೋದಿ ಸರ್ಕಾರದಲ್ಲಿ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:09 pm, Thu, 6 June 24

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!