ದೆಹಲಿ: ದೇಶದ ಅತಿದೊಡ್ಡ ಡ್ರೋನ್ ಉತ್ಸವಕ್ಕೆ ದೆಹಲಿ ಸಿದ್ಧವಾಗಿದೆ. ಇಲ್ಲಿನ ಪ್ರಗತಿ ಮೈದಾನದಲ್ಲಿ(Pragati Maidan) ಭಾರತ್ ಡ್ರೋನ್ ಮಹೋತ್ಸವ್ 2022 ಕಾರ್ಯಕ್ರಮವನ್ನು (Bharat Drone Mahotsav 2022) ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ (ಶುಕ್ರವಾರ) ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಪ್ರಧಾನಿಯವರ ಕಚೇರಿಯ ಮಾಹಿತಿ ಪ್ರಕಾರ ಮೋದಿಯವರು ಕಿಸಾನ್ ಡ್ರೋನ್ ಪೈಲಟ್ ಗಳ ಜತೆ ಸಂವಾದ ನಡೆಸಲಿದ್ದು ಓಪನ್ ಏರ್ ಡ್ರೋನ್ ಪ್ರದರ್ಶನ ವೀಕ್ಷಿಸಲಿದ್ದಾರೆ. ಡ್ರೋನ್ ಪ್ರದರ್ಶನ ಕೇಂದ್ರದಲ್ಲಿ ಸ್ಟಾರ್ಟ್ ಅಪ್ ಜತೆಗೂ ಮೋದಿ ಸಂವಾದ ನಡೆಸಲಿದ್ದಾರೆ. ಮೇ 27ಮತ್ತು ಮೇ28ಕ್ಕೆ ಎರಡು ದಿನಗಳ ಕಾಲ ಭಾರತ್ ಡ್ರೋನ್ ಮಹೋತ್ಸವ್ ನಡೆಯಲಿದೆ. ಸರ್ಕಾರಿ ಅಧಿಕಾರಿಗಳು, ವಿದೇಶಿ ಪ್ರತಿನಿಧಿಗಳು, ಸಶಸ್ತ್ರ ಪಡೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಪಿಎಸ್ ಯು,ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟ್ ಅಪ್ ಸೇರಿದಂತೆ 1600ಕ್ಕಿಂತಲೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
70ಕ್ಕಿಂತಲೂ ಹೆಚ್ಚು ಪ್ರದರ್ಶನಕಾರರು ವಿವಿಧ ರೀತಿಯ ಡ್ರೋನ್ಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ ಎಂದು ಪ್ರಧಾನಿಯವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಮಹೋತ್ಸವವು ಡ್ರೋನ್ ಪೈಲಟ್ ಪ್ರಮಾಣಪತ್ರಗಳು, ಉತ್ಪನ್ನ ಬಿಡುಗಡೆ, ಪ್ಯಾನಲ್ ಚರ್ಚೆಗಳು, ಹಾರಾಟ ಪ್ರದರ್ಶನಗಳು, ಮೇಡ್ ಇನ್ ಇಂಡಿಯಾ ಡ್ರೋನ್ ಟ್ಯಾಕ್ಸಿ ಮಾದರಿಯ ಪ್ರದರ್ಶನ ಇತ್ಯಾದಿಗಳ ವರ್ಚುವಲ್ ಪ್ರಶಸ್ತಿಗೆ ಸಾಕ್ಷಿಯಾಗಲಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 2:30 pm, Thu, 26 May 22