ಒಲಿಂಪಿಕ್ಸ್​​ನಲ್ಲಿ ಭಾಗಿಯಾದ ಕ್ರೀಡಾಪಟುಗಳನ್ನು ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಗೆ ಆಹ್ವಾನಿಸಲಿದ್ದಾರೆ ಪ್ರಧಾನಿ ಮೋದಿ

ಒಲಿಂಪಿಕ್ಸ್​​ನಲ್ಲಿ ಭಾಗಿಯಾದ ಕ್ರೀಡಾಪಟುಗಳನ್ನು ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಗೆ ಆಹ್ವಾನಿಸಲಿದ್ದಾರೆ ಪ್ರಧಾನಿ ಮೋದಿ
ಸಾಂಕೇತಿಕ ಚಿತ್ರ

ಇಂದು ಬೆಳಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸೋಲು ಮತ್ತು ಗೆಲುವುಗಳೆಲ್ಲ ಸಾಮಾನ್ಯ. ನಮ್ಮ ಪುರುಷರ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ ಎಂದು ಹೇಳಿದ್ದಾರೆ.

TV9kannada Web Team

| Edited By: Lakshmi Hegde

Aug 03, 2021 | 4:01 PM

ದೆಹಲಿ: ಟೋಕಿಯೋ ಒಲಿಂಪಿಕ್ಸ್​​(Tokyo Olympics)ನಲ್ಲಿ ಭಾಗಿಯಾದ ಅಥ್ಲೀಟ್​ಗಳ ಜತೆ ಆಗಸ್ಟ್​ 15ರಂದು ಸಂವಾದ ನಡೆಸಲಿದ್ದಾರೆ. ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಗೆ ಒಲಿಂಪಿಕ್ಸ್​ ತಂಡವನ್ನು ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಲಿದ್ದಾರೆ. ನಂತರ ತಮ್ಮ ಮನೆಗೂ ಆಹ್ವಾನಿಸಿದ್ದು, ಅಲ್ಲಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi)ಯವರು ಮೊದಲಿನಿಂದಲೂ ಸಾಧರಕನ್ನು ಸನ್ಮಾನಿಸುವ, ಗೌರವಿಸುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಯಾವುದೇ ಕ್ರೀಡಾಪಟುಗಳು ಸಾಧನೆ ಮಾಡಿದರೂ ಅವರನ್ನು ಅಭಿನಂದಿಸುತ್ತಾರೆ.

ಈ ಬಾರಿಯ ಒಲಿಂಪಿಕ್ಸ್​ನಲ್ಲೂ ಅಷ್ಟೇ, ಭಾರತಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳನ್ನು ಶ್ಲಾಘಿಸಿ ಟ್ವೀಟ್​ ಮಾಡಿದ್ದಾರೆ. ಸೆಮಿಫೈನಲ್​​ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳನ್ನು ಅಭಿನಂದಿಸಿದ್ದಾರೆ. ಇಂದು ಬೆಳಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸೋಲು ಮತ್ತು ಗೆಲುವುಗಳೆಲ್ಲ ಸಾಮಾನ್ಯ. ನಮ್ಮ ಪುರುಷರ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ. ನಮ್ಮ ಆಟಗಾರರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಎಂದು ಹೇಳಿದ್ದಾರೆ. ಇಂದು ಭಾರತದ ಪುರುಷರ ಹಾಕಿ ತಂಡ ಬೆಲ್ಜಿಯಂ ತಂಡದ ವಿರುದ್ಧ ಸೋತಿದೆ. ಈ ಮೂಲಕ ಫೈನಲ್​ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್ ಮಾಡಿ, ಪುರುಷರ ಹಾಕಿ ತಂಡಕ್ಕೆ ಪ್ರೋತ್ಸಾಹತುಂಬುವ ಮಾತನಾಡಿದ್ದರು.

ಇದನ್ನೂ ಓದಿ: ಕ್ಯಾಬ್ ಚಾಲಕನ ಕೆನ್ನೆಗೆ ಹೊಡೆದ ಲಕ್ನೋ ಯುವತಿ ವಿರುದ್ಧ ಕೇಸ್ ದಾಖಲು; ಟ್ವಿಟ್ಟರ್​ನಲ್ಲಿ ಹೊಸ ಅಭಿಯಾನ ಶುರು

Prime Modi Narendra Modi to Invite Olympics Contingent to Red Fort On Independence Day

Follow us on

Most Read Stories

Click on your DTH Provider to Add TV9 Kannada