ಶಾಲೆಯಲ್ಲಿ ಬಡಿಗೆಯಿಂದ ಬಡಿದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​; ಇವರಿಬ್ಬರ ಹೊಡೆದಾಟವನ್ನು ನಿಂತು ನೋಡಿದ ಶಿಕ್ಷಕರು !

ಘಟನೆ ನಡೆದ ಬಳಿಕ ಹಿಮಾಂಶು ಹೇಳಿದ್ದೇ ಬೇರೆ. ನಾನು ಪ್ರತಿದಿನ ಬೆಳಗ್ಗೆ ಆರು ಗಂಟೆಗೇ ಶಾಲೆಗೆ ಬರುತ್ತೇನೆ. ಆದರೆ ಪ್ರಿನ್ಸಿಪಾಲ್​ ಕರುಣಾಶಂಕರ್ ಅವರು ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಬಡಿಗೆಯಿಂದ ಬಡಿದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​; ಇವರಿಬ್ಬರ ಹೊಡೆದಾಟವನ್ನು ನಿಂತು ನೋಡಿದ ಶಿಕ್ಷಕರು !
ಹೊಡೆದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​
Follow us
TV9 Web
| Updated By: Lakshmi Hegde

Updated on: May 01, 2022 | 12:24 PM

ಜಾರ್ಖಂಡ್​​ನ ಪಲಮು ಜಿಲ್ಲೆಯಲ್ಲಿರುವ ಮೇದಿನಿ ನಗರದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್​ ಮತ್ತು ಪ್ಯೂನ್ (ಮುಖ್ಯ ಶಿಕ್ಷಕ ಮತ್ತು ಶಾಲೆಯ ಜವಾನ) ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಕೋಲಲ್ಲಿ ಹೊಡೆದುಕೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರಿನ್ಸಿಪಾಲ್​ ಮತ್ತು ಪ್ಯೂನ್​ ಪರಸ್ಪರ ಅಶ್ಲೀಲ ಶಬ್ದಗಳಲ್ಲಿ ಬೈದಾಡಿಕೊಳ್ಳುತ್ತ, ಕೋಲಿನಲ್ಲಿ ಹೊಡೆದುಕೊಳ್ಳುತ್ತಿದ್ದರೆ ಉಳಿದ ಶಿಕ್ಷಕರು, ಶಾಲಾ ಸಿಬ್ಬಂದಿ ಅದನ್ನು ನೋಡುತ್ತ ನಿಂತಿದ್ದಾರೆ. ಅಂದಹಾಗೇ ಈ ಗಲಾಟೆಯಲ್ಲಿ ಪ್ಯೂನ್​ ಕೈಯಿಗೆ ಗಾಯಿಯಾಗಿದೆ ಎನ್ನಲಾಗಿದೆ.

ಶಾಲೆಯ ಪ್ರಿನ್ಸಿಪಾಲ್​ ಹೆಸರು ಕರುಣಾಶಂಕರ್​ ತಿವಾರಿ ಮತ್ತು ಪ್ಯೂನ್​ ಹೆಸರು ಹಿಮಾಂಶು ತಿವಾರಿ. ಹಿಮಾಂಶು ತಿವಾರಿ ಸರಿಯಾದ ಸಮಯಕ್ಕೆ ಶಾಲೆಗೆ ಕೆಲಸಕ್ಕೆ ಬರುತ್ತಿರಲಿಲ್ಲ. ಹೀಗೆ ಕೆಲವು ದಿನಗಳ ಕಾಲ ತಡವಾಗಿಯೇ ಬರುತ್ತಿದ್ದ ಹಿಮಾಂಶು ಬಳಿ, ಪ್ರಿನ್ಸಿಪಾಲ್​ ಕರುಣಾಶಂಕರ್​ ಅವರು ಕಾರಣ ಕೇಳಿದ್ದಾರೆ. ಹೀಗೆ ನಿತ್ಯವೂ ಕೆಲಸಕ್ಕೆ ತಡವಾಗಿ ಬಂದರೆ ಹೇಗೆ? ಇಲ್ಲಿನ ಕೆಲಸ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.  ಈ ಪ್ರಶ್ನೆಗೆ ಸಮಾಧಾನವಾಗಿ ಉತ್ತರಿಸಿದ ಪ್ಯೂನ್​, ಒಮ್ಮೆಲೇ ಸಿಟ್ಟುಮಾಡಿಕೊಂಡು ಪ್ರಿನ್ಸಿಪಾಲ್​ಗೆ ಬೈದಿದ್ದಾರೆ ಎನ್ನಲಾಗಿದೆ.. ಅದಕ್ಕೆ ಪ್ರತಿಯಾಗಿ ಪ್ರಿನ್ಸಿಪಾಲ್​ ಕೂಡ ಬೈದಿದ್ದಾರೆ. ಇವರಿಬ್ಬರ ನಡುವೆ ತುಂಬ ಹೊತ್ತಿನವರೆಗೆ ವಾಗ್ವಾದ ನಡೆದು, ಅದು ನಂತರ ಹೊಡೆದಾಟಕ್ಕೆ ತಿರುಗಿದೆ.

ಆದರೆ ಘಟನೆ ನಡೆದ ಬಳಿಕ ಹಿಮಾಂಶು ಹೇಳಿದ್ದೇ ಬೇರೆ. ನಾನು ಪ್ರತಿದಿನ ಬೆಳಗ್ಗೆ ಆರು ಗಂಟೆಗೇ ಶಾಲೆಗೆ ಬರುತ್ತೇನೆ. ಆದರೆ ಪ್ರಿನ್ಸಿಪಾಲ್​ ಕರುಣಾಶಂಕರ್ ಅವರು ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ. ಒಮ್ಮೆಲೇ ನನ್ನೆಡೆಗೆ ಕೋಲು ಎಸೆದರು. ನಾವು ಜವಾನರು ಎಂಬ ಒಂದೇ ಕಾರಣಕ್ಕೆ, ಅಗೌರವಯುತವಾಗಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಪ್ರಿನ್ಸಿಪಾಲ್​ ವಿರುದ್ಧ ಗಂಭೀರವಾದ ಆರೋಪವನ್ನೂ ಹಿಮಾಂಶು ಮಾಡಿದ್ದಾರೆ. ಈ ಶಾಲೆಯ ಹಾಸ್ಟೆಲ್​ ನಿರ್ಮಾಣಕ್ಕೆಂದು ತರಲಾದ ಇಟ್ಟಿಗೆ, ಕಬ್ಬಿಣ, ಮರದ ಸಾಮಗ್ರಿಗಳನ್ನೆಲ್ಲ ಪ್ರಿನ್ಸಿಪಾಲ್ ಮಾರಾಟ ಮಾಡಿ, ದುಡ್ಡು ಪಡೆದಿದ್ದಾರೆ. ನಾನು ಅದನ್ನು ವಿರೋಧಿಸಿದೆ. ಅಂದಿನಿಂದಲೂ ನನಗೆ ಒಂದಲ್ಲ ಒಂದು ಕಷ್ಟ ಕೊಡುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಭಾಷಣದಲ್ಲಿ ಮುಸ್ಲಿಮರಿಗೆ ಅವಹೇಳನ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಪೊಲೀಸ್ ಕಸ್ಟಡಿಗೆ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ