‘ಅರ್ಜೆಂಟ್ ಆಗಿ ಸರ್ಜರಿ ಮಾಡಿ.. ಇಲ್ಲದೆ ಇದ್ರೆ ಕೊಂದು ಬಿಡಿ’- ಆಸ್ಪತ್ರೆ ಎದುರು ಕೈದಿಯ ಗೋಳಾಟ; ಯಾವುದನ್ನೂ ಒಪ್ಪುತ್ತಿಲ್ಲ ವೈದ್ಯರು

|

Updated on: Apr 25, 2021 | 4:37 PM

ಈ ಮಧ್ಯೆ ಜಾಮೀನು ಪಡೆದು ವಿಶ್ರಾಂತಿಯಲ್ಲಿದ್ದ ಗಣಪತಿಗೆ ಶನಿವಾರ ಬೆಳಗ್ಗೆ ಮತ್ತೆ ಮೂತ್ರ ಮಾಡಲು ಸಾಧ್ಯವಾಗದೆ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಆತ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ.

‘ಅರ್ಜೆಂಟ್ ಆಗಿ ಸರ್ಜರಿ ಮಾಡಿ.. ಇಲ್ಲದೆ ಇದ್ರೆ ಕೊಂದು ಬಿಡಿ’- ಆಸ್ಪತ್ರೆ ಎದುರು ಕೈದಿಯ ಗೋಳಾಟ; ಯಾವುದನ್ನೂ ಒಪ್ಪುತ್ತಿಲ್ಲ ವೈದ್ಯರು
ಪ್ರಾತಿನಿಧಿಕ ಚಿತ್ರ
Follow us on

ಸೇಲಂ: 2 ವರ್ಷಗಳ ಹಿಂದೆ ತಾಯಿಯನ್ನು ಕೊಂದು ತಮಿಳುನಾಡಿನ ಸೇಲಂ ಸೆಂಟ್ರಲ್​ ಜೈಲು ಸೇರಿದ್ದ ಕೈದಿಯೊಬ್ಬ ಈಗ, ನನಗೆ ಅರ್ಜೆಂಟ್​ ಆಗಿ ಸರ್ಜರಿ ಮಾಡಿ.. ಇಲ್ಲದಿದ್ದರೆ ಏನಾದರೂ ಮಾಡಿ ಕೊಂದು ಬಿಡಿ ಎಂದು ವೈದ್ಯರಿಗೆ ದುಂಬಾಲು ಬಿದ್ದಿದ್ದಾನೆ. ಅನಾರೋಗ್ಯದಿಂದ ಸರ್ಕಾರಿ ಮೋಹನ್​ಕುಮಾರಮಂಗಲಂ ಆಸ್ಪತ್ರೆ ಸೇರಿರುವ ಆತ, ಇದೀಗ ಆಸ್ಪತ್ರೆ ಎದುರು ಧರಣಿ ಕುಳಿತಿದ್ದಾನೆ.

ಈ ಕೈದಿಯ ಹೆಸರು ಗಣಪತಿ. ಸೇಲಂ ಜೈಲು ಸೇರಿದ್ದ ಇವನಿಗೆ ಮೂತ್ರಪಿಂಡ ಸಮಸ್ಯೆಯಾಗಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ಜಾಮೀನು ಕೂಡ ಕೊಟ್ಟಿದೆ. ಆದರೆ ಈತನ ಸ್ನೇಹಿತರಾಗಲೀ, ಕುಟುಂಬದವರಾಗಿ ಇವನಿದ್ದಲ್ಲಿಗೆ ಬಂದಿಲ್ಲ. ಸಹಾಯವನ್ನು ಮಾಡಲೂ ಮುಂದಾಗುತ್ತಿಲ್ಲ.

ಜೈಲಿನಲ್ಲಿ ಇದ್ದಾಗಲೇ ಈತನಿಗೆ ಕಿಡ್ನಿ ಸಮಸ್ಯೆ ಶುರುವಾಗಿದೆ. ಜೈಲಿನಲ್ಲಿ ಇದ್ದರೂ ಚಿಕಿತ್ಸೆ ನೀಡಲಾಗುತ್ತಿತ್ತು. ಆರು ತಿಂಗಳ ಹಿಂದೆಯೇ ಈತನಿಗೆ ಸರ್ಜರಿ ಮಾಡಿಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದರೂ, ಆಗ ಸರ್ಕಾರಿ ಆಸ್ಪತ್ರೆಯಲ್ಲಿ ಬೇಡ, ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಿ ಎಂದು ಪಟ್ಟುಹಿಡಿದಿದ್ದ.

ಈ ಮಧ್ಯೆ ಜಾಮೀನು ಪಡೆದು ವಿಶ್ರಾಂತಿಯಲ್ಲಿದ್ದ ಗಣಪತಿಗೆ ಶನಿವಾರ ಬೆಳಗ್ಗೆ ಮತ್ತೆ ಮೂತ್ರ ಮಾಡಲು ಸಾಧ್ಯವಾಗದೆ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಆತ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಅವನನ್ನು ತಪಾಸಣೆ ಮಾಡಿದ ವೈದ್ಯರು, ಕೆಲವು ವಾರಗಳ ನಂತರ ಬಾ.. ಸರ್ಜರಿ ಮಾಡುತ್ತೇವೆ ಎಂದಿದ್ದಾರೆ. ಆದರೆ ಆತ ಇಲ್ಲ, ತಕ್ಷಣ ನನಗೆ ಶಸ್ತ್ರಚಿಕಿತ್ಸೆ ಮಾಡಿ, ನೋವು ತಡೆಯಲಾಗುತ್ತಿಲ್ಲ. ಇಲ್ಲವಾದರೆ ನನಗೆ ಏನಾದರೂ ಕೊಟ್ಟು ಕೊಂದು ಬಿಡಿ ಎಂದು ಆಸ್ಪತ್ರೆ ಎದುರೇ ಧರಣಿ ಕುಳಿತಿದ್ದಾನೆ. ಆದರೆ ಕೊರೊನಾ ಡ್ಯೂಟಿ ಒತ್ತಡದಲ್ಲಿರುವ ವೈದ್ಯರು ಸದ್ಯಕ್ಕೆ ಯಾವುದೇ ಸರ್ಜರಿ ಬೇಡ.. ಸ್ವಲ್ಪ ದಿನ ಬಿಟ್ಟು ಬಾ ಎಂದಿದ್ದಾರೆ.

ಇದನ್ನು ಓದಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ 75ರಷ್ಟು ಬೆಡ್ ನೀಡಲು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಸರ್ಕಾರ ಆದೇಶ

ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್​ ಸಂಬರಗಿ; ವೀಕೆಂಡ್​ನಲ್ಲಿ ಕಾದಿದೆ ಟ್ವಿಸ್ಟ್​