ದೆಹಲಿ ವಿಶ್ವವಿದ್ಯಾನಿಲಯದ ಹಿಂದೂ ಕಾಲೇಜಿನ (Hindu College) ಸಹಾಯಕ ಪ್ರಾಧ್ಯಾಪಕರೊಬ್ಬರು ಜ್ಞಾನವಾಪಿ ಮಸೀದಿಯಲ್ಲಿ (Gyanvapi mosque) ಪತ್ತೆಯಾಗಿರುವ ಶಿವಲಿಂಗದ (Shivling) ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪ್ರೊಫೆಸರ್ ರತನ್ ಲಾಲ್ ಅವರು ಮಂಗಳವಾರ ಶಿವಲಿಂಗದ ಫೋಟೋವನ್ನು ಪೋಸ್ಟ್ ಮಾಡಿ ಆಕ್ಷೇಪಾರ್ಹ ಬರಹ ಬರೆದಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ನಂತರ, ಲಾಲ್ ಅವರು ತನಗೆ ಆನ್‌ಲೈನ್‌ನಲ್ಲಿ ಅನೇಕ ಜವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತನಗೆ ಭದ್ರತೆ ಮತ್ತು ಸಹಾಯ ನೀಡಬೇಕೆಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. “ನನಗೆ ಇನ್ನೂ ಪೊಲೀಸರಿಂದ ಯಾವುದೇ ಸೂಚನೆ ಬಂದಿಲ್ಲ, ನಾನು ಅವರೊಂದಿಗೆ ಸಹಕರಿಸುತ್ತೇನೆ. ಈ ಹೇಳಿಕೆಗಾಗಿ ನಾನು ಬೆದರಿಕೆ ಮತ್ತು ನಿಂದನೆಗಳನ್ನು ನಿರೀಕ್ಷಿಸಿರಲಿಲ್ಲ. ಹಿಂದೂ ಧರ್ಮದಲ್ಲಿ ಫುಲೆ, ರವಿದಾಸ್ ಮತ್ತು ಅಂಬೇಡ್ಕರ್ ಅವರಿಂದ ಸುದೀರ್ಘವಾದ ವಿಮರ್ಶೆಯ ಸಂಪ್ರದಾಯವಿದೆ. ಇಲ್ಲಿ, ನಾನು ಅದನ್ನು ವಿಮರ್ಶಿಸಿಲ್ಲ, ಇದು ಕೇವಲ ಒಂದು ಅವಲೋಕನವಾಗಿದೆ. ನಮ್ಮ ದೇಶದಲ್ಲಿ ಏನು ಹೇಳಿದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಬಾಯಿಗೆ ಪಟ್ಟಿ ಕಟ್ಟಿಕೊಂಡು ಜನ ಏನು ಮಾಡುತ್ತಾರೆ? ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ರತನ್ ಲಾಲ್ ಹೇಳಿದ್ದಾರೆ.
ಮಂಗಳವಾರ ತಡರಾತ್ರಿ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Fact Check ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ಫೋಟೊ ವಿಯೆಟ್ನಾಂನದ್ದು
ಮಸೀದಿ ಪ್ರದೇಶದ ವಿಡಿಯೊಗ್ರಾಫಿಕ್ ಸಮೀಕ್ಷೆಯ ವೇಳೆ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾದ ಪ್ರದೇಶವನ್ನು ಸಂರಕ್ಷಿಸುವಂತೆಯೂ, ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಅಡ್ಡಿಪಡಿಸದಂತೆ ಮಂಗಳವಾರ ಸುಪ್ರೀಂಕೋರ್ಟ್ ಆದೇಶಿಸಿದೆ.
Thanks @AshokShrivasta6 pic.twitter.com/dsirCfJgyb
— Dr. Ratan Lal (@ratanlal72) May 17, 2022
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾದ ಪ್ರದೇಶವನ್ನು ರಕ್ಷಿಸಬೇಕು ಆದರೆ ಮಸೀದಿಗೆ ನಿರ್ಬಂಧ ಹಾಕಬಾರದು. ನಮಾಜ್ ಮಾಡಲು ಬಯಸುವವರಿಗೆ ಹಾಗೆ ಮಾಡಲು ಅವಕಾಶ ನೀಡಬೇಕು. ಮುಸ್ಲಿಮರು ಪ್ರವೇಶಿಸುವ ಮತ್ತು ಪೂಜಿಸುವ ಹಕ್ಕಿಗೆ ಧಕ್ಕೆಯಾಗದಂತೆ ಶಿವಲಿಂಗ ಇರುವ ಪ್ರದೇಶವನ್ನು ರಕ್ಷಿಸುವಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ. ಮೇ 19 ರಂದು ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಲಿದೆ. ವಿಚಾರಣೆಯ ಸಂದರ್ಭದಲ್ಲಿ ಮಸೀದಿ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು ಆವರಣವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಮತ್ತು ಆದೇಶಗಳು ಕಾನೂನುಬಾಹಿರವೆಂದು ವಾದಿಸಿದರು. “ಆವರಣವನ್ನು ನಿರ್ಬಂಧಿಸಿದರೆ ಯಥಾಸ್ಥಿತಿಯಲ್ಲಿ ಬದಲಾವಣೆ ಇರುತ್ತದೆ. ಪೂಜಾ ಸ್ಥಳಗಳ ಕಾಯಿದೆಯ ಸೆಕ್ಷನ್ 3 ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂದು ಅವರು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಪಿಎಸ್ ನರಸಿಂಹ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು ಎಂದು ಎಎನ್‌ಐ ವರದಿ ಮಾಡಿದೆ. ‘ಶಿವಲಿಂಗ’ ಪತ್ತೆಯಾದ ಆವರಣವನ್ನು ನಿರ್ಬಂಧಿಸುವಂತೆ ವಾರಣಾಸಿ ಜಿಲ್ಲಾ ಮೆಜಿಸ್ಟ್ರೇಟ್ ಗೆ ವಿಚಾರಣಾ ನ್ಯಾಯಾಲಯವು ನಿರ್ದೇಶನ ನೀಡಿತ್ತು. ಅದೇ ವೇಳೆ ‘ವಾಜುಖಾನಾ’ ಪ್ರವೇಶವನ್ನು ನಿರ್ಬಂಧಿಸಿದ್ದು,ಅದನ್ನು ಬಳಸಲಾಗುವುದಿಲ್ಲ. ಕೇವಲ 20 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ